ಮುಂಬೈ :ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್​ ಕುಂದ್ರ ಬಂಧನಕ್ಕೊಳಗಾಗಿರುವ ಪೋರ್ನೋಗ್ರಫಿ ಕೇಸಿಗೆ ಸಂಬಂಧಿಸಿದಂತೆ ಪ್ರಸಿದ್ಧ ಮಾಡೆಲ್​ ಗೆಹನಾ ವಸಿಷ್ಠ್​ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ಸ್​ ಕೋರ್ಟ್​ ತಿರಸ್ಕರಿಸಿದೆ.
ಮಾಲ್ವಾನಿ ಪೊಲೀಸ್​ ಠಾಣೆಯಲ್ಲಿ ಗೆಹನಾ ವಿರುದ್ಧ ಸಲ್ಲಿಸಲಾಗಿದ್ದ ಎಫ್​ಐಆರ್​ಅನ್ನು ಇತ್ತೀಚೆಗೆ ರಾಜ್​ ಕುಂದ್ರ ಪೋರ್ನೋಗ್ರಫಿ ಕೇಸ್​ ತನಿಖೆ ನಡೆಸುತ್ತಿರುವ ಮುಂಬೈ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಗೆಹನಾ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಮುಂಬೈ ಕೋರ್ಟ್​, ಗೆಹನಾಗೆ ಜಾಮೀನು ನೀಡಲು ನಿರಾಕರಿಸಿದೆ.
ಇದನ್ನೂ ಓದಿ:‘ನಾನು ಭಾರತದ ಪರ’! ಮೇಕೆದಾಟು ವಿಚಾರದಲ್ಲಿ ಸಿ.ಟಿ.ರವಿ ಹೇಳಿದ್ದೇನು?
ನೀಲಿ ಸಿನಿಮಾಗಳನ್ನು ಮಾಡಿ ಅವುಗಳನ್ನು ಬೇರೆ ಬೇರೆ ಆ್ಯಪ್​ಗಳಲ್ಲಿ ಅಪ್​ಲೋಡ್​ ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ರಾಜ್​ ಕುಂದ್ರ ಪರವಾಗಿ ಗೆಹನಾ, ಈ ಹಿಂದೆ ಟ್ವಿಟರ್ ಮೂಲಕ ಮಾತನಾಡಿದ್ದರು. ಕುಂದ್ರ ಪೋರ್ನ್ ವಿಡಿಯೋ ತಯಾರು ಮಾಡುತ್ತಿರಲಿಲ್ಲ. ಇದು ಎರಾಟಿಕಾ. ಪೋರ್ನ್ ವಿಡಿಯೋಗಳ ಜತೆ ಎರಾಟಿಕಾ ವಿಡಿಯೋಗಳನ್ನು ಸೇರಿಸಬೇಡಿ. ಈ ರೀತಿಯ ವಿಡಿಯೋಗಳೇ ಬೇರೆ. ಇದನ್ನು ಪೊಲೀಸರು ತಪ್ಪು ಅರ್ಥ ಮಾಡಿಕೊಂಡಿದ್ದಾರೆ ಎಂದು ಗೆಹನಾ ಸಮಜಾಯಿಷಿ ಕೊಟ್ಟಿದ್ದರು.(ಏಜೆನ್ಸೀಸ್)
ಮುಖ್ಯ ಕಾರ್ಯದರ್ಶಿ ಹಲ್ಲೆ ಆರೋಪ: ಸಿಎಂ ಕೇಜ್ರಿವಾಲ್, ಡಿಸಿಎಂ ಸಿಸೋಡಿಯ, 9 ಶಾಸಕರು ಡಿಸ್ಚಾರ್ಜ್

VIDEO | ಬಿಜೆಪಿ ನಾಯಕರ ‘ದೋಸ್ತಿ’ ಹಾಡು ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 10 =
Remember me
