ಅಹಮದಾಬಾದ್​:ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಪೋಷ್ (Porsche) ಕಾರಿನ ಮಾಲೀಕರೊಬ್ಬರಿಗೆ ಸಂಚಾರಿ ಪೊಲೀಸರು ವಿಧಿಸಿದ ದಂಡದ ಮೊತ್ತ 27 ಲಕ್ಷ ರೂಪಾಯಿಗೂ ಅಧಿಕ!
ಹಾಗಾದರೆ ಭಾರತದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಗಾಗಿ ವಿಧಿಸಲ್ಪಟ್ಟ ಗರಿಷ್ಠ ಮೊತ್ತದ ದಂಡ ಎಷ್ಟಿರಬಹುದು! ಹೀಗೊಂದು ಸಂದೇಹ ಎಲ್ಲರ ಮನದಲ್ಲಿ ಮೂಡಿದರೆ ಅಚ್ಚರಿ ಏನಿಲ್ಲ. ಪೋಷ್ ಕಾರಿನ ಮಾಲೀಕರಿಗೆ ಈ ರೀತಿ ದಂಡ ವಿಧಿಸಿದ್ದು ಅಹಮದಾಬಾದ್ ಪೊಲೀಸರು.
ಈ ಕೇಸ್​ ಹಿಸ್ಟರಿ ಕೆದಕಿದರೆ ಪ್ರಕರಣ 2019ರ ನವೆಂಬರ್​ಗೆ ಹೋಗುತ್ತದೆ. ಈ ಕಾರಿಗೆ ಅಂದು ನಂಬರ್ ಪ್ಲೇಟ್ ಇರಲಿಲ್ಲ. ಅಷ್ಟೇ ಅಲ್ಲ, ಅಗತ್ಯ ದಾಖಲೆಗಳೂ ಇರಲಿಲ್ಲವಂತೆ. ಅಗತ್ಯ ದಾಖಲೆಗಳು ಅಂದರೆ ಆರ್​ಸಿ, ವಿಮಾ ಪತ್ರ, ಚಾಲನಾ ಪರವಾನಗಿ, ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಸೇರಿ ಯಾವುದೇ ದಾಖಲೆ ಪತ್ರಗಳು ಇರಲಿಲ್ಲ. ಪೊಲೀಸರು ಕೂಡಲೇ ವಾಹನ ಮಾಲೀಕರಿಗೆ 9.80 ಲಕ್ಷ ರೂಪಾಯಿ ದಂಡ ವಿಧಿಸಿದ್ದರು.
ಆರು ವಾರಗಳ ನಂತರ ಪೊಲೀಸರು ದಂಡದ ಪ್ರಮಾಣವನ್ನು ಪರಿಷ್ಕರಿಸಿ 27.68 ಲಕ್ಷ ರೂಪಾಯಿಗೆ ಏರಿಸಿದರು. ಬಳಿಕ ಈ ಬಗ್ಗೆ ಟ್ವೀಟ್ ಮಾಡಿದ್ದು, ಸಂಚಾರ ನಿಯಮ ಉಲ್ಲಂಘನೆಗಾಗಿ ದೇಶದಲ್ಲೇ ಇದು ಗರಿಷ್ಠ ಪ್ರಮಾಣದ ದಂಡ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)
रिकॉर्ड फाइनRTO (@cotguj)द्वारा JH01DB0524 नंबर की पोर्श कार के मालिक से 27.68 लाख का फाइन वसूला गया है। वैलिड पेपर्स और नम्बर प्लेट ना होने के कारण पिछले साल नवम्बर में@AhdTrafficद्वारा इस कार को पकड़ कर स्पॉट पर ही 9.80 लाख का फाइन पहले ही किया गया था।pics@AhmedabadPolicepic.twitter.com/rzI4c6zQhD— Nirnay Kapoor (@nirnaykapoor)January 8, 2020
रिकॉर्ड फाइनRTO (@cotguj)द्वारा JH01DB0524 नंबर की पोर्श कार के मालिक से 27.68 लाख का फाइन वसूला गया है। वैलिड पेपर्स और नम्बर प्लेट ना होने के कारण पिछले साल नवम्बर में@AhdTrafficद्वारा इस कार को पकड़ कर स्पॉट पर ही 9.80 लाख का फाइन पहले ही किया गया था।pics@AhmedabadPolicepic.twitter.com/rzI4c6zQhD
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 4 =
Remember me
