ಬೆಂಗಳೂರು:ಒರೆಗನ್​ನಲ್ಲಿರುವ ‘ಪೋರ್ಟ್​ಲ್ಯಾಂಡ್ ಕನ್ನಡ ಕೂಟ’ದವರು ಆಯೋಜಿಸಿದ್ದ ‘ಪೋರ್ಟ್​ಲ್ಯಾಂಡ್ ಕನ್ನಡಾಧಿಪತಿ’ ರಸಪ್ರಶ್ನೆ ಸ್ಪರ್ಧೆಯ ಗ್ರ್ಯಾಂಡ್​ ಫಿನಾಲೆ ಇತ್ತೀಚೆಗಷ್ಟೇ ನಡೆದಿದೆ. ಮಕರ ಸಂಕ್ರಮಣದಂದು ಆರಂಭವಾದ ಈ ಕಾರ್ಯಕ್ರಮ ಫೆ. 5ರಂದು ಗ್ರ್ಯಾಂಡ್ ಫಿನಾಲೆ ನಡೆಯುವುದರೊಂದಿಗೆ ಮುಕ್ತಾಯಗೊಂಡಿದೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಹಾಗೂ ವಿಜೇತರಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​ ಅವರು ಶುಭ ಹಾರೈಸಿದ್ದು, ರಸಪ್ರಶ್ನೆ ಸ್ಪರ್ಧೆಯ ಆರಂಭದಿಂದಲೂ ನಟಿ ಪದ್ಮಜಾ ರಾವ್ ಅವರು ಈ ಕಾರ್ಯಕ್ರಮಕ್ಕೆ ಶುಭಾಶಯ ಕೋರಿ ಬೆಂಬಲವನ್ನು ವ್ಯಕ್ತಪಡಿಸಿದ್ದರು.
ಕಿರಿಯರ ಹಾಗೂ ಹಿರಿಯರ ಎಂದು ಎರಡು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆದಿದೆ. ಕಿರಿಯರ ವಿಭಾಗದಲ್ಲಿ ಇಶಾನ್ ಸೆಗವಾಳು ಹಾಗೂ ಹಿರಿಯರ ವಿಭಾಗದಲ್ಲಿ ವಿನಾಯಕ್ ಕುರುವೇರಿ ಅವರು ವಿಜೇತರಾಗಿದ್ದಾರೆ. ವಿಜೇತರಿಗೆ ಬೆಂಗಳೂರಿನಿಂದಲೇ ಕನ್ನಡ ಪುಸ್ತಕಗಳನ್ನು ಖರೀದಿಸಿ ತರಿಸಿಕೊಂಡು ಬಹುಮಾನವಾಗಿ ವಿತರಿಸಿದ್ದು ವಿಶೇಷ ಎನ್ನಲಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 7 =
Remember me
