ಲಂಡನ್​:ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಅಸ್ಟ್ರಾಜೆನೆಕಾ ಕಂಪನಿಯೊಂದಿಗೆ ಸೇರಿ ಅಭಿವೃದ್ಧಿ ಪಡಿಸುತ್ತಿರುವ ಕರೊನಾ ನಿಗ್ರಹ ಲಸಿಕೆ ಕುರಿತಾದ ಶುಭಸುದ್ದಿ ಯಾವುದೇ ಕ್ಷಣದಲ್ಲಿ ಹೊರಬೀಳಬಹುದು.
ಈ ಲಸಿಕೆ ಈಗಾಗಲೇ ಮಾನವರ ಮೇಲಿನ ಪ್ರಯೋಗದ (ಕ್ಲಿನಿಕಲ್​ ಟ್ರಯಲ್​) ಅಂತಿಮ ಹಂತದಲ್ಲಿದೆ. ಈ ಸಂಶೋದನೆಯ ಆರಂಭಿಕ ಹಂತದ ಫಲಿತಾಂಶ ಗುರುವಾರ (ಜು.16) ಯಾವುದೇ ಕ್ಷಣದಲ್ಲಿ ಘೋಷಣೆಯಾಗಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ;ಆರಂಭವಾಗಿದೆ ಲಸಿಕೆ ಸಂಶೋಧನಾ ಕಾರ್ಯದ ಅಂತ್ಯ; ಭಾರತದಲ್ಲಿ ನಾಲ್ಕರ ಉತ್ಪಾದನೆ ಖಚಿತ…!
ಬ್ರೆಜಿಲ್​ನಲ್ಲಿ ಸಾವಿರಾರು ಜನರ ಮೇಲೆ ಲಸಿಕೆಯ ಮೂರನೇ ಹಂತದ ಪರೀಕ್ಷೆ ಕಳೆದ ತಿಂಗಳಿನಿಂದ ನಡೆಸಲಾಗುತ್ತಿದೆ. ಈ ಬಗ್ಗೆ ಶುಭಸುದ್ದಿ ಪ್ರಕಟವಾಗಲಿದೆ ಎಂದು ಐಟಿವಿ ಸುದ್ದಿ ಸಂಸ್ಥೆಯ ರಾಜಕೀಯ ವಿಶ್ಲೇಷಕ ರಾಬರ್ಟ್​ ಪೆಸ್ಟೋನ್​ ಮಾಹಿತಿ ನೀಡಿದ್ದಾರೆ.
ಲಸಿಕೆಯಿಂದಾಗಿ ಮಾನವ ದೇಹದಲ್ಲಿ ಪ್ರತಿರೋಧಕ ಶಕ್ತು ಉಂಟಾಘುತ್ತಿದೆ. ಜತೆಗೆ, ವೈರಸ್​ಅನ್ನು ನಾಶಪಡಿಸುತ್ತಿರುವ ಅಂಶ (ಟಿ-ಸೆಲ್​) ಪರೀಕ್ಷೆಯಲ್ಲಿ ಗೊತ್ತಾಗಿದೆ ಎಂದು ಅವರು ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.ಒಂದು ವೇಳೆ ಈ ಪ್ರಯೋಗ ಯಶಸ್ವಿಯಾಗಿದ್ದೇ ಆದಲ್ಲಿ, ನಿರೀಕ್ಷೆಗಿಂತಲೂ ಮುನ್ನವೇ ಕರೊನಾ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ;ಕರೊನಾ ಕವಚ; ಕೋವಿಡ್​ನಿಂದ ಬಚಾವಾಗಲು ಇಲ್ಲಿವೆ ವಿಶೇಷ ವಿಮಾ ಯೋಜನೆಗಳು
ಕರಈಗಾಗಲೇ ಹತ್ತಕ್ಕೂ ಅಧಿಕ ಕಂಪನಿಗಳು ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ಹಂತದಲ್ಲಿವೆ. ಇದು ಪೂರ್ಣಗೊಂಡಲ್ಲಿ ಸೆಪ್ಟಂಬರ್​ ಹೊತ್ತಿಗೆ ಲಸಿಕೆ ದೊರೆಯಲಿದೆ. ಆದರೆ, ಆಗಸ್ಟ್​ ಮಧ್ಯಭಾಗದಲ್ಲಿಯೇ ಲಸಿಕೆ ಬಿಡುಗಡೆ ಮಾಡುವುದಾಗಿ ರಷ್ಯಾ ಹೇಳಿಕೊಂಡಿವೆ. ಈ ನಡುವೆ ಭಾರತದ ಎರಡು ಲಸಿಕೆಗಳು ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿವೆ.ಆಕ್ಸ್​​ಫರ್ಡ್​ ಲಸಿಕೆ ಯಶಸ್ವಿಯಾದರೆ ಅದು ಭಾರತದಲ್ಲಿಯೂ ಉತ್ಪಾದನೆಯಾಗಲಿದೆ ಎಂಬುದು ಆಶಾದಾಯಕ ಸಂಗತಿಯಾಗಿದೆ.
ಆಗಸ್ಟ್​ 15ಕ್ಕೆ ಬಳಕೆಗೆ ದೊರೆಯಲಿದೆ ಕರೊನಾ ಲಸಿಕೆ; ಆದರೆ ಭಾರತದ್ದಲ್ಲ…!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + 7 =
Remember me
