ಪಾಟ್ನಾ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ನಿಜ ಜೀವನದ ದೇವದಾಸ್ ಎಂದು ಲೇವಡಿ ಮಾಡುವ ಮಾಡುವ ಮೂಲಕ ಬಿಹಾರದ ಪಾಟ್ನಾದಲ್ಲಿ ಪೋಸ್ಟರ್‌ಗಳನ್ನು ಹಾಕಲಾಗಿದೆ.ಪ್ರತಿಪಕ್ಷಗಳ ಸಭೆಗೂ ಮುನ್ನ ಇಲ್ಲಿನ ಬಿಜೆಪಿ ಕಚೇರಿಯ ಹೊರಗೆ ಈ ಪೊಸ್ಟರ್​ಗಳನ್ನು ಹಾಕಲಾಗಿದ್ದು, ಬಾಲಿವುಡ್​ ನಟ ಶಾರುಖ್​ ಖಾನ್​ ರೀಲ್​ ದೇವದಾಸ್​ರಾದರೆ, ರಾಹುಲ್​ ಗಾಂಧಿ ನಿಜ ಜೀವನದಲ್ಲಿ ದೇವದಾಸ್​ರಾಗಿದ್ದಾರೆ ಎಂದು ಬರೆಯಲಾಗಿದೆ.ಇದನ್ನೂ ಓದಿ:ಬಸ್​​ಗಳು ರಶ್ ಆಗಿ ಸ್ವಲ್ಪ ಸಮಸ್ಯೆಯಾಗಿದೆ, ತಿಂಗಳೊಳಗೆ ಇದೆಲ್ಲಾ ಸರಿಹೋಗಲಿದೆ: ಸಚಿವ ರಾಮಲಿಂಗಾ ರೆಡ್ಡಿಅಲ್ಲದೇ, ಮಮತಾ ದೀದಿ ಬಂಗಾಳ ತೊರೆಯುವಂತೆ, ಕೇಜ್ರಿವಾಲ್​ ದೆಹಲಿ ಮತ್ತು ಪಂಜಾಬ್ ತೊರೆಯುವಂತೆ, ಲಾಲು ಮತ್ತು ನಿತೀಶ್ ಕುಮಾರ್​ ಬಿಹಾರ ತೊರೆಯುವಂತೆ, ಅಖಿಲೇಶ್ ಯಾದವ್​​ ಉತ್ತರ ಪ್ರದೇಶವನ್ನು ತೊರೆಯುವಂತೆ ಮತ್ತು ಸ್ಟಾಲಿನ್ ತಮಿಳುನಾಡನ್ನು ತೊರೆಯುವಂತೆ ರಾಹುಲ್​ ಗಾಂಧಿಗೆ ಹೇಳಿದ್ದಾರೆ. ರಾಹುಲ್​ರಾಜಕೀಯವನ್ನು ತೊರೆಯಲಿ ಎಂದು ಹೇಳುವ ದಿನಗಳು ದೂರವಿಲ್ಲ ಎಂದು ಪೋಸ್ಟರ್‌​​ನಲ್ಲಿ ಉಲ್ಲೇಖಿಸಲಾಗಿದೆ.ಬಿಜೆಪಿಯನ್ನು ಎದುರಿಸಲು ಒಮ್ಮತಕ್ಕೆ ಬರುವ ಉದ್ದೇಶದಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಯೋಜಿಸಿರುವ ಪ್ರತಿಪಕ್ಷ ನಾಯಕರ ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಪಾಟ್ನಾಕ್ಕೆ ಆಗಮಿಸಿದ್ದ ವೇಳೆ ಈ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
