ಭೋಪಾಲ್​:ವ್ಯಕ್ತಿಗಳಿಬ್ಬರ ಮರಣೋತ್ತರ ವರದಿ ನಡೆಸಿ ವೈದ್ಯರು ನೀಡಿದ ವರದಿಯನ್ನು ನೋಡಿದ ಪೊಲೀಸರಿಗೆ ಅಕ್ಷರಶಃ ಅಚ್ಚರಿಯೇ ಎದುರಾಗಿತ್ತು. ಇಬ್ಬರು ಪುರುಷರು ಮದುವೆಯಾಗಿ ರಹಸ್ಯವಾಗಿಯೇ ಮಗುವೊಂದನ್ನು ದತ್ತ ಪಡೆದು ಪತಿ-ಪತ್ನಿಯ ರೀತಿಯಲ್ಲಿ ವಾಸಿಸುತ್ತಿದ್ದರು ಎಂಬ ಭಯಾಯಕ ಸತ್ಯ ಬಹಿರಂಗವಾಗಿದೆ.
ಅಂದಹಾಗೆ ಈ ಪ್ರಕರಣ ಮಧ್ಯಪ್ರದೇಶದ ಸೆಹೊರ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಒಂದು ದಿನ ಇಬ್ಬರ ನಡುವೆ ಕಲಹ ಉಂಟಾಗಿ ಪತ್ನಿ ಬೆಂಕಿ ಹಚ್ಚಿಕೊಂಡಿದ್ದಳು. ರಕ್ಷಿಸಲು ಯತ್ನಿಸಿದ ಪತಿಗೂ ಬೆಂಕಿ ತಗುಲಿ ಇಬ್ಬರು ಸುಟ್ಟ ಗಾಯಗಳಿಂದ ಗಂಭೀರವಾಗಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಈ ಇಬ್ಬರು 8 ವರ್ಷಗಳ ಕಾಲ ಪತಿ-ಪತ್ನಿಯಂತೆಯೇ ಜೀವನ ನಡೆಸಿದ್ದರು.
ಇಬ್ಬರ ಸಾವಿನ ಬಳಿಕ ಬಂದ ಮರಣೋತ್ತರ ವರದಿ ಎಲ್ಲರನ್ನು ಅಚ್ಚರಿಗೆ ದೂಡಿತ್ತು. ಪತ್ನಿ ಎನಿಸಿಕೊಂಡವಳು ಮಹಿಳೆಯೇ ಅಲ್ಲ. ಅವನೊಬ್ಬ ಪುರುಷನಾಗಿದ್ದ. ಪೊಲೀಸರು ಹೇಳುವ ಪ್ರಕಾರ ಶುಜಲ್ಪುರ್​ ನಿವಾಸಿ ವಿಕ್ರಮ್​ ಸಿಂಗ್​ ಮೇವಾಡ ಎಂಬಾತ ಕಲಪಿಪಾಲ್​ ಭೇಸ್ವಾ ಎಂಬಲ್ಲಿ ವಾಸವಿದ್ದ ದೇವ್​ ಕುನ್ವಾರ್​ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಇಬ್ಬರ ನಡುವೆ ಪ್ರೇಮವು ಆಗಿತ್ತು. ಇಬ್ಬರು ಒಟ್ಟಿಗೆ ಜೀವಿಸಲು 2012ರಲ್ಲಿ ನಿರ್ಧಾರ ಮಾಡಿದ್ದರು. ಇಬ್ಬರು ಮದೆಯಾದ ಬಳಿಕ ಸೆಹೊರ್​ನಲ್ಲಿ ವಾಸಿಸಲು ಶುರು ಮಾಡಿದರು.
ಇದನ್ನೂ ಓದಿ:ಪ್ರಿಯಕರನ ಮನೆ ಹತ್ತಿರವೇ ಆತ್ಮಹತ್ಯೆ: ಅನಿಶಾ ತಾಯಿಯ ನಿರ್ಧಾರದಿಂದ ಆರೋಪಿಗೆ ಕಾದಿದೆಯಾ ಶಾಕ್​?
ಹೆಣ್ಣು ಮಗುವಿನ ಸೋಗಿನಲ್ಲಿ ಕುಟುಂಬದ ಒಪ್ಪಿಗೆ ಗಿಟ್ಟಿಸಿ ವಿಕ್ರಮ್​ ಸಿಂಗ್​ ಮದುವೆಯಾಗಿದ್ದ. ಇದಾದ ಎರಡು ವರ್ಷಗಳ ಬಳಿಕ ವಿಕ್ರಮ್​ ಕುಟುಂಬ ಮಗುವಿಗಾಗಿ ಬೇಡಿಕೆ ಇಟ್ಟಾಗ ಮಗುವನ್ನು ದತ್ತು ಪಡೆದುಕೊಂಡಿದ್ದರು.
ಹೀಗೆ ವೈವಾಹಿಕ ಜೀವನ ನಡೆಯುವಾಗ 2020ರ ಆಗಸ್ಟ್​ 11ರಂದು ಇಬ್ಬರ ನಡುವೆ ಜಗಳ ಶುರುವಾಯಿತು. ತಾರಕಕ್ಕೇರಿದ ಜಗಳದಿಂದ ನಿಯಂತ್ರಣ ಕಳೆದುಕೊಂಡ ಪತ್ನಿ ಬೆಂಕಿ ಹಚ್ಚಿಕೊಂಡಳು. ಅವಳ ರಕ್ಷಿಸಲು ಯತ್ನಿಸಿದ ಪತಿಗೂ ಬೆಂಕಿ ತಗುಲಿತು. ಇಬ್ಬರನ್ನು ಭೋಪಾಲ್​ ಆಸ್ಪತ್ರೆಗೆ ಆಗಸ್ಟ್​ 12ರಂದು ದಾಖಲಿಸಲಾಯಿತು. ಇಬ್ಬರು ಸಹ ಚಕಿತ್ಸೆ ಫಲಿಸದೇ ಆಗಸ್ಟ್​ 16ರಂದು ಮೃತರಾದರು. ಬಳಿಕ ನಡೆದ ಮರಣೋತ್ತರ ವರದಿಯಲ್ಲಿ ಇಬ್ಬರು ಸಹ ಪುರುಷರಾಗಿದ್ದು, ಸಲಿಂಗ ದಂಪತಿ ಎಂಬುದು ಬಹಿರಂಗವಾಗಿದೆ.(ಏಜೆನ್ಸೀಸ್​)
ಕರ್ನಾಟಕದಿಂದ ಮುಂಬೈಗೆ ಸೊಸೆಯಾಗಿ ತೆರಳಿದ್ದಾರೆ: ಒಗಟು ಮಾತು ಬಿಡಿಸಿ ಹೇಳಿದ ಪ್ರಶಾಂತ್​ ಸಂಬರಗಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
