ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಗಳಲ್ಲೊಂದಾದ ಚಂದ್ರಯಾನ-3 ಯೋಜನೆ ಇದೀಗ ನಿಗದಿಯಾಗಿದ್ದಕ್ಕಿಂತ ಕೆಲ ಸಮಯ ಮುಂದೂಡಲ್ಪಟ್ಟಿದೆ. 2020ರ ಅಂತ್ಯದಲ್ಲಿ ಚಂದ್ರಯಾನ-3 ನೌಕೆ ಉಡಾವನೆ ಆಗುತ್ತದೆ ಎಂದು ಈ ಹಿಂದೆ ಇಸ್ರೊ ಹೇಳಿತ್ತಾದರೂ, ಇದೀಗ 2021ರ ಮೊದಲಾರ್ಧದಲ್ಲಿ(ಜೂನ್ ಒಳಗೆ) ಉಡಾವಣೆ ಆಗುವ ಸಾಧ್ಯತೆಯಿದೆ ಎಂದು ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಸಿಂಗ್, ಚಂದ್ರಯಾನ-2ರಲ್ಲಿ ಕಲಿತ ಪಾಠಗಳ ಆಧಾರದಲ್ಲಿ ಚಂದ್ರಯಾನ-3ನ್ನು ಸಂಯೋಜಿಸಲಾಗುತ್ತಿದೆ. ವಿನ್ಯಾಸದಲ್ಲಿ ಸದೃಢತೆ, ಯೋಜನೆಯ ಹೊಂದಿಕೊಳ್ಳುವಿಕೆ ಸಾಮರ್ಥ್ಯ ವೃದ್ಧಿ ಜತೆಗೆ ಸಾಕಷ್ಟು ಪ್ರಮಾಣದಲ್ಲಿ ಚಂದ್ರಯಾನ-2ರ ಪರಂಪರೆಯನ್ನು ಮುಂದುವರಿಸಲಾಗುತ್ತಿದೆ. 2021ರ ಮೊದಲಾರ್ಧದಲ್ಲಿ ಯೋಜನೆ ಉಡಾವಣೆ ಆಗುವ ಸಾಧ್ಯತೆಯಿದೆ ಎಂದಿದ್ದಾರೆ.
2019ರ ಜು.22ಕ್ಕೆ ಶ್ರೀಹರಿ ಕೋಟಾದಿಂದ ಜಿಎಸ್​ಎಲ್​ವಿ-ಮಾರ್ಕ್2 ರಾಕೆಟ್ ಮೂಲಕ ಉಡಾವಣೆಗೊಂಡಿದ್ದ ಚಂದ್ರಯಾನ-2 ಯೋಜನೆ ಸೆ. 7ಕ್ಕೆ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿಯಲು ಇನ್ನು 2 ಕಿ.ಮೀ. ಇರುವವರೆಗೂ ಸಂಪೂರ್ಣ ಸಫಲವಾಗಿ ಮುನ್ನಡೆಯಿತು. ಕೊನೆ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡ ನೌಕೆ ಚಂದ್ರನ ಮೇಲ್ಮೈಗೆ ಅಪ್ಪಳಿಸಿತ್ತು. ಚಂದ್ರಯಾನ-2ರಲ್ಲಿ ಉಂಟಾದ ತೊಂದರೆಗಳನ್ನು ಪತ್ತೆಹಚ್ಚಲು ರಚಿಸಿದ್ದ ಉನ್ನತ ಮಟ್ಟದ ಸಮಿತಿ ವರದಿಗೆ ಅನುಗುಣವಾಗಿ ಮಾರ್ಪಡಿಸಿಕೊಂಡು ಚಂದ್ರ ಯಾನ-3 ಸಿದ್ಧವಾಗುತ್ತಿದೆ.
ಚಂದ್ರಯಾನ-2ರಲ್ಲಿ ಉಡಾವಣೆ ಮಾಡಿದ್ದ ಆರ್ಬಿಟರನ್ನೇ ಚಂದ್ರಯಾನ-3ರಲ್ಲೂ ಬಳಸಿಕೊಳ್ಳುವುದರಿಂದ ಈ ಬಾರಿ ಲ್ಯಾಂಡರ್ ಹಾಗೂ ರೋವರ್ ಮಾತ್ರ ಉಡಾವಣೆಗೊಳ್ಳಲಿವೆ. ಚಂದ್ರಯಾನ-2ಕ್ಕೆ ಸುಮಾರು 920 ಕೋಟಿ ರೂ. ವೆಚ್ಚವಾಗಿದ್ದು, ಈ ಬಾರಿ ವೆಚ್ಚ ತಗ್ಗುವ ಸಾಧ್ಯತೆಯಿದೆ.
ಗಗನಯಾನ ಉಪಕರಣ ತಪಾಸಣೆ ಆರಂಭ
ಬಾಹ್ಯಾಕಾಶಕ್ಕೆ ಮಾನವಸಹಿತ ಯಾನ ನಡೆಸುವ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಗಗನಯಾನದ ಉಪಕರಣ ಪರೀಕ್ಷೆ ನಡೆಯುತ್ತಿದೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ. 4 ಬಾಹ್ಯಾಕಾಶ ಯಾನಿಗಳ ತರಬೇತಿ ಆರಂಭವಾಗಿದೆ. ಯಾನಿಗಳ ವೈದ್ಯಕೀಯ ಕಿಟ್, ಆರೋಗ್ಯ ಮೇಲ್ವಿಚಾರಣೆ ವ್ಯವಸ್ಥೆ, ತುರ್ತು ಜೀವನಾವಶ್ಯಕ ಕಿಟ್, ಡೋಸಿಮೀಟರ್, ಇಯರ್​ವುಫ್ ಹಾಗೂ ಅಗ್ನಿ ಶಾಮಕ ವ್ಯವಸ್ಥೆ ವಿನ್ಯಾಸ, ಅಭಿವೃದ್ಧಿ ಹಾಗೂ ಸರಬರಾಜಿಗೆ ರಾಷ್ಟ್ರೀಯ ಸಹಭಾಗಿತ್ವ ಆರಂಭವಾಗಿದೆ. ಫ್ರಾನ್ಸ್ ಸಹಭಾಗಿತ್ವದಲ್ಲಿ ಫ್ಲೈಟ್ ಸರ್ಜನ್ ತರಬೇತಿ ಮುಕ್ತಾಯವಾಗಿದೆ. ಸೂಕ್ಷ್ಮ ಗುರುತ್ವಕ್ಕೆ ಸಂಬಂಧಿಸಿದ ನಾಲ್ಕು ಜೈವಿಕ ಹಾಗೂ ಎರಡು ದೈಹಿಕ ಪರೀಕ್ಷೆಗಳು ನಡೆಯಬೇಕಿವೆ ಎಂದಿದ್ದಾರೆ. 2022ಕ್ಕೆ ನಡೆಯುವ ಮಾನವಸಹಿತ ಗಗನಯಾನಕ್ಕೆ ಮುನ್ನ ಈ ವರ್ಷಾಂತ್ಯದಲ್ಲಿ ಹಾಗೂ 2021ರಲ್ಲಿ ತಲಾ ಒಂದು ಮಾನವರಹಿತ ಯಾನವನ್ನು ಇಸ್ರೊ ನಡೆಸಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
