ಚೆನ್ನೈ:ರಸ್ತೆಗುಂಡಿಗಳು ಯಮಗುಂಡಿಗಳಾಗಿ ಬೈಕ್​ ಸವಾರರ ಪ್ರಾಣ ತೆಗೆದ ಹತ್ತು ಹಲವು ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ. ಇದೇ ರೀತಿಯಾಗಿ ಚೆನ್ನೈ ನಗರದ ಹೆದ್ದಾರಿಯೊಂದರಲ್ಲಿ ರಸ್ತೆಗುಂಡಿಯಿಂದಾಗಿ ನಿಯಂತ್ರಣ ತಪ್ಪಿದ ಬೈಕ್​ ಸವಾರನ ಮೇಲೆ ಸಾರಿಗೆ ಬಸ್​ ಹಾದುಹೋದ ಘಟನೆ ನಡೆದಿದೆ. ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಚೆನ್ನೈ ಮಹಾನಗರ ಪಾಲಿಕೆ, ನಗರದಾದ್ಯಂತದ ಅಪಾಯಕಾರಿ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಳ್ಳಲು ಮುಂದಾಗಿದೆ.
ಚೆನ್ನೈನ ಅಣ್ಣಾ ಸಲೈ ರಸ್ತೆಯಲ್ಲಿ ನ.1 ರ ಸೋಮವಾರ 32 ವರ್ಷ ವಯಸ್ಸಿನ ಸಾಫ್ಟ್​ವೇರ್​ ಇಂಜಿನಿಯರ್​ ಮೊಹಮ್ಮದ್​ ಯೂನುಸ್​​ರ​ ಬೈಕ್​ ರಸ್ತೆಗುಂಡಿಗೆ ಇಳಿದ ಪರಿಣಾಮ ಅವರು ರಸ್ತೆಯ ಮೇಲೆ ಬಿದ್ದರು. ಪಕ್ಕದಲ್ಲೇ ಚಲಿಸುತ್ತಿದ್ದ ಸರ್ಕಾರಿ ಸಾರಿಗೆ ಬಸ್​ ಅವರ ಮೇಲೆ ಸಾಗಿದ್ದು, ಸ್ಥಳದಲ್ಲೇ ಸಾವಪ್ಪಿದರು. ಈ ಘಟನೆಯ ಸಿಸಿಟಿವಿ ಫೂಟೇಜ್​ ವೈರಲ್​ ಆಗಿದ್ದು, ಸಾರ್ವಜನಿಕರು ಮಳೆಗಾಲದ ಸಂದರ್ಭದಲ್ಲಿ ರಸ್ತೆಗುಂಡಿಗಳನ್ನು ಮುಚ್ಚದಿರುವ ಬಗ್ಗೆ ನಗರಪಾಲಿಕೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ:ರಸ್ತೆ ಗುಂಡಿಗಳ ವಿರುದ್ಧ ಎಎಪಿ ಕಾರ್ಯಪಡೆ, ವಾಟ್ಸಾಪ್ ಸಹಾಯವಾಣಿ
ಈ ಹಿನ್ನೆಲೆಯಲ್ಲಿ ಗ್ರೇಟರ್​ ಚೆನ್ನೈ ಕಾರ್ಪೋರೇಷನ್​ (ಜಿಸಿಸಿ) ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ಉಂಟಾಗಿರುವ 40 ಮಿಲಿಮೀಟರ್​ಗೂ ಹೆಚ್ಚು ದೊಡ್ಡದಾದ ಗುಂಡಿಗಳನ್ನು ಮುಚ್ಚಲು ತಕ್ಷಣವೇ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಕೆಲಸಕ್ಕಾಗಿ ಜಿಸಿಸಿಯು 1,000 ಕಾರ್ಮಿಕರನ್ನು ನಿಯೋಜನೆಗೊಳಿಸಲಿದ್ದು, 15 ವಲಯಗಳಿಗೆ ತಲಾ 10 ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ.(ಏಜೆನ್ಸೀಸ್)
ಪೊಲೀಸ್​​ ಕೆನ್ನೆಗೆ ಬಾರಿಸಿದ ಮಾಜಿ ಶಾಸಕ! ಸಿದ್ದರಾಮಯ್ಯ ಪ್ರತಿಕೃತಿ ದಹನ

2 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ: ಕಾಮುಕನ ಬಂಧನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − 3 =
Remember me
