ತಿರುವನಂತಪುರಂ:ದೇಶದ ಸಾರ್ವಭೌಮತ್ವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದಿರುವ ಮಾಜಿ ಕ್ರಿಕೆಟ್​ ಆಟಗಾರ ಸಚಿನ್​ ತೆಂಡೂಲ್ಕರ್​ ಅವರ ಕಟೌಟ್​ ಮೇಲೆ ಕಪ್ಪು ಆಯಿಲ್​ ಸುರಿಯುವ ಮೂಲಕ ಕೇರಳದ ಕಾಂಗ್ರೆಸ್​ ಘಟಕ ಹೋರಾಟ ನಡೆಸಿದೆ.
ಸಚನ್​ ಅವರ ಕಟೌಟ್​ಗೆ ಕೇರಳ ಕಾಂಗ್ರೆಸ್​ನ ಯುವ ಘಟಕ ಶನಿವಾರದಂದು ಕೊಚ್ಚಿಯಲ್ಲಿ ಕಪ್ಪು ಆಯಿಲ್​ ಎರಚಿದೆ. ಅವರು ಮಾಡಿರುವ ಟ್ವೀಟ್​ಗೆ ಪ್ರತಿಯಾಗಿ ಈ ಕೆಲಸ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಭಾರತದ ಕ್ರಿಕೆಟ್​ ದೇವರು ಎಂದು ಗೌರವಿಸುವ ವ್ಯಕ್ತಿಯ ಕಟೌಟ್​ಗೆ ಈ ರೀತಿ ಮಾಡಿರುವುದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.
ರೈತ ಹೋರಾಟದ ಬಗ್ಗೆ ವಿದೇಶಿ ಸೆಲೆಬ್ರಿಟಿಗಳು ಮತ್ತು ಹೋರಾಟಗಾರರು ಮೂಗು ತೂರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿನ್​, ಅದರ ವಿರುದ್ಧವಾಗಿ ಟ್ವೀಟ್​ ಮಾಡಿದ್ದರು. “ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಲಾಗುವುದಿಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು ಆದರೆ ಭಾಗವಹಿಸುವವರಲ್ಲ. ಭಾರತೀಯರಿಗೆ ಭಾರತ ತಿಳಿದಿದೆ ಮತ್ತು ಭಾರತಕ್ಕಾಗಿ ಏನು ಬೇಕೆನ್ನುವುದನ್ನು ನಿರ್ಧರಿಸಬೇಕಿದೆ. ನಾವೆಲ್ಲರು ಒಂದು ರಾಷ್ಟ್ರವಾಗಿ ಐಕ್ಯವಾಗಿ ಉಳಿಯೋಣ.” ಎಂದು ಟ್ವೀಟ್​ ಮಾಡಿದ್ದರು. ಈ ಟ್ವೀಟ್​ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಅನೇಕರು ಅವರ ಕಾಲೆಳೆಯುವುದರಲ್ಲಿ ನಿರತರಾಗಿದ್ದಾರೆ. (ಏಜೆನ್ಸೀಸ್​)
Kerala: Members of Indian Youth Congress pour black oil on a cut-out of Sachin Tendulkar in Kochi, over his tweet on international personalities tweeting on#FarmLaws.pic.twitter.com/Vy2DYuDk15
— ANI (@ANI)February 5, 2021

India’s sovereignty cannot be compromised. External forces can be spectators but not participants.Indians know India and should decide for India. Let's remain united as a nation.#IndiaTogether#IndiaAgainstPropaganda
— Sachin Tendulkar (@sachin_rt)February 3, 2021

ಇಡ್ಲಿ ತಿಂದು ಅಂಗಡಿಯವನನ್ನೇ ಕೊಂದ ಪಾಪಿಗಳು! 20 ರೂಪಾಯಿಯಿಂದಾಗಿ ಜೀವವೇ ಹೋಯಿತು

ಮನೆಯಲ್ಲಿನ ಲೈವ್​ ಸೆಕ್ಸ್​ನ್ನು ಸಿಸಿಟಿವಿಯಿಂದಲೇ ಕದ್ದು ನೋಡುತ್ತಿದ್ದ ಖತರ್ನಾಕ್​​ ಟೆಕ್ನಿಷಿಯನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 4 =
Remember me
