ತರುವನಂತಪುರಂ:ಕೊಯ್ಲಿಗೆ ಬಂದಿದ್ದ 400ಕ್ಕೂ ಹೆಚ್ಚು ಗಿಡಗಳನ್ನು ರಾಜ್ಯ ವಿದ್ಯುತ್​ ಇಲಾಖೆಯ ಅಧಿಕಾರಿಗಳು ಕಡಿದು ಹಾಕುವ ಮೂಲಕ ರೈತನಿಗೆ ಶಾಕ್​ ನೀಡಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಕೋತಮಂಗಲ ಎಂಬಲ್ಲಿ ನಡೆದಿದೆ.
ಕೋತಮಂಗಲ ಪ್ರದೇಶದಲ್ಲಿ ಹಾದುಹೋಗುವ ಹೈಟೆನ್ಷನ್​ ವೈರ್​ಗೆ ಬಾಳೆ ಎಲೆಗಳು ತಾಗುತ್ತಿವೆ ಎಂದು ಕಾರಣ ನೀಡಿ ರಾಜ್ಯ ವಿದ್ಯುತ್​ ಇಲಾಖೆಯ ಅಧಿಕಾರಿಗಳು ಗಿಡಗಳನ್ನು ಕತ್ತರಿಸಿ ರೈತನಿಗೆ ಆಘಾತವನ್ನುಂಟು ಮಾಡಿದ್ದಾರೆ.
ಥಾಮಸ್​ ಎಮಬುವವರ ತೋಟದಲ್ಲಿ ಘಟನೆ ನಡೆದಿದ್ದು, ಕೋತಮಂಗಲ ಪ್ರದೇಶದಲ್ಲಿ 220 ಕೆವಿ ವಿದ್ಯುತ್​ ಲೈನ್​ಗೆ ಗಿಡಗಳು​ ತಾಗುತ್ತಿದ್ದ ಕಾರಣ ವೈರ್​ಗೆ ಹಾನಿಯಾಗಲಿದೆ. ಸ್ಥಳೀಯ ನಿವಾಸಿಯೊಬ್ಬರಿಗೆ ಇತ್ತೀಚಿಗೆ ವಿದ್ಯುತ್​ ಪ್ರವಹಿಸಿದ ಪ್ರಕರಣವನ್ನೂ ಮುಂದಿಟ್ಟುಕೊಂಡು ಅಧಿಕಾರಿಗಳು ಕೊಯ್ಲಿಗೆ ಬಂದಿದ್ದ ಬಾಳೆಗಿಡಗಳನ್ನು ಕಡಿದು ಹಾಕಿದ್ದಾರೆ.
ಇದನ್ನೂ ಓದಿ:ಹೀಗೂ ಉಂಟು| 4 ಕೋಟಿ ದೋಚಿದ ಬೆಳದಿಂಗಳ ಬಾಲೆಯರು!; 10 ವರ್ಷ ಬೇರೆ ಬೇರೆ ಹೆಸರಿನಲ್ಲಿ ಪೋನ್‌ನಲ್ಲೇ ಪ್ರಣಯದಾಟವಾಡಿದ್ದ ಯುವತಿ
ಈ ಕುರಿತು ಮಾತನಾಡಿರುವ ರೈತ ಥಾಮಸ್​ ವಿದ್ಯುತ್​ ಇಲಾಖೆಯ ಅಧಿಕಾರಿಗಳು ಯಾವುದೇ ಮುನ್ಸೂಚನೆಯನ್ನೂ ನೀಡದೆ ಏಕಾಏಕಿ ಬಾಳೆಗಿಡಗಳನ್ನೂ ಕಡಿದು ಹಾಕಿದ್ದಾರೆ. ಓಣಂ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿರುವ ಬೇಡಿಕೆಯನ್ನೂ ಆಧರಿಸಿ ಮುಂದಿನ ವಾರದಿಂದ ಕಟಾವು ಮಾಡಲು ನಿರ್ಧರಿಸಲಾಗಿತ್ತು.
ಅಧಿಕಾರಿಗಳು ಏಕಾಏಕಿ ಗಿಡವನ್ನೂ ಕಡಿದು ಹಾಕುವ ಬದಲು ಲೈನ್​ಗೆ ಅಡ್ಡ ಬಂದಿದ್ದ ಎಳೆಗಳನ್ನು ಕತ್ತರಿಸಿ ಬೆಳೆಯನ್ನೂ ಉಳಿಸಬಹುದಿತ್ತು. ಕೊಯ್ಲಿಗೆ ಬಂದಿದ್ದ ಫಸಲನ್ನು ಕಡಿದು ಹಾಕುವ ಮೂಲಕ ಅಧಿಕಾರಿಗಳು ನಮ್ಮ ಹೊಟ್ಟೆಯ ಮೇಲೆ ಹೊಡೆದಿದ್ದಾರೆ ಎಂದು ರೈತ ಥಾಮಸ್​ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
