ಅಮರಾವತಿ:ಆಂಧ್ರಪ್ರದೇಶದ ಮುದ್ದಿನೆಪಲ್ಲಿ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಅಡುಗೆಯವರು ಪಿಪಿಇ ಕಿಟ್​ ಧರಿಸಿ ಊಟ ಬಡಿಸಿದ ವಿಡಿಯೋ ಭಾರಿ ವೈರಲ್​ ಆಗಿದೆ.
ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ಅನುಮತಿ ಪಡೆದ ವಧು ಮತ್ತು ವರನ ಮನೆಯವರು ಜು.22ರಂದು ವಿವಾಹ ಸಮಾರಂಭ ಏರ್ಪಡಿಸಿದ್ದರು. ಸೋಂಕು ಹರಡದಂತೆ ಸಂಪೂರ್ಣ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರು. ಅಲ್ಲದೆ, ಕೋವಿಡ್​-19ರ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಮದುವೆಯಲ್ಲಿ ಪಾಲ್ಗೊಳ್ಳುವ ಅತಿಥಿಗಳಿಗೆ ಊಟೋಪಚಾರ ಮಾಡಬೇಕು ಎಂದು ಕೃಷ್ಣ ಜಿಲ್ಲೆಯ ಗುಡಿವಾಡಾದ ಕೋಟಿ ಕೇಟರರ್ಸ್​ಗೆ ಸೂಚಿಸಲಾಗಿತ್ತು.
ಇದನ್ನೂ ಓದಿ:ಬಿಹಾರದಲ್ಲಿ ಮಿತ್ರಪಕ್ಷಗಳನ್ನು ಒಟ್ಟಾಗಿ ಕರೆದೊಯ್ಯಲಿದೆ ಬಿಜೆಪಿ: ಸುಳಿವು ನೀಡಿದ್ರು ಅಧ್ಯಕ್ಷ ಜೆಪಿ ನಡ್ಡಾ
ಈ ಹಿನ್ನೆಲೆಯಲ್ಲಿ ಕೋಟಿ ಕೇಟರರ್ಸ್​ ಅಡುಗೆ ಕೆಲಸಕ್ಕೆ ಬಂದಿದ್ದ ಎಲ್ಲ ನೌಕರರ ದೈಹಿಕ ತಾಪಮಾನ ಪರೀಕ್ಷಿಸಿದ್ದಲ್ಲದೆ, ಸ್ಯಾನಿಟೈಸರ್​ಗಳನ್ನು ಬಳಸಿದ್ದರು. ಊಟ ಬಡಿಸಲೆಂದೇ 12 ಜನರಿಗೆ ಪಿಪಿಇ ಕಿಟ್​ ಕೊಟ್ಟಿದ್ದರು. ಇದನ್ನು ಧರಿಸಿದ ಅವರು ಅತಿಥಿಗಳೆಲ್ಲರಿಗೂ ಊಟ ಬಡಿಸಿದ್ದು ವಿಶೇಷವಾಗಿತ್ತು. ಊಟದ ಸರತಿ ಸಾಲಿನಲ್ಲಿ ಕೂಡ ದೈಹಿಕ ಅಂತರ ಇರುವಂತೆ ಕೇಟರರ್ಸ್​ ಟೇಬಲ್​ಗಳನ್ನು ಜೋಡಿಸಿದ್ದು ಇದರ ಮತ್ತೊಂದು ವಿಶೇಷವಾಗಿತ್ತು.
ಊಟ ಬಡಿಸುವುದು ಮುಗಿದ ನಂತರದಲ್ಲಿ ಅಡುಗೆಯವರು ಧರಿಸಿದ್ದ ಪಿಪಿಇ ಕಿಟ್​ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಯಿತು. ಅಲ್ಲಿಯೂ ಕೂಡ ಸುರಕ್ಷತೆಯ ಕಾಳಜಿ ತೋರಲಾಯಿತು ಎಂದು ಮದುವೆ ಕಾರ್ಯಕ್ರಮದ ಆಯೋಜಕರು ಮಾಹಿತಿ ನೀಡಿದ್ದಾರೆ.
ಚೀನಾ ವಿರುದ್ಧ ಪ್ರಬಲ ರಾಷ್ಟ್ರಗಳ ಮೈತ್ರಿ ರೂಪುಗೊಳ್ಳುವ ಸಾಧ್ಯತೆ: ನಿಲುವು ಸ್ಪಷ್ಟಪಡಿಸಿತು ರಷ್ಯಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
