– ಸಮಸ್ಯೆ ಬಗೆ ಹರಿಸಿದ ತಂಡ
ಮುಂಬೈ:ಟಾಲಿವುಡ್​​ ನಟ ಪ್ರಭಾಸ್ ಅವರ ಅಧಿಕೃತ ಫೇಸ್‌ಬುಕ್ ಖಾತೆಯನ್ನು ಕಿಡಿಗೇಡಿಗಳು ಗುರುವಾರ ತಡರಾತ್ರಿ ಹ್ಯಾಕ್ ಮಾಡಿದ್ದಾರೆ. ಈ ಕುರಿತಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿಕೊಂಡು ಪ್ರಭಾಸ್ ಅಪ್​ಡೇಟ್ ನೀಡಿದ್ದಾರೆ.
ಇದನ್ನೂ ಓದಿ:VIDEO| ನಾಲ್ಕು ಲಕ್ಷ ರೂ. ಬೆಲೆಯ ಮಗನ ಶೂ ನೋಡಿ ಕೈ ಮುಗಿದ ತಂದೆ!
ಕಿಡಿಗೇಡಿಗಳು ಪ್ರಭಾಸ್ ಫೇಸ್‌ಬುಕ್ ಅನ್ನು ಹ್ಯಾಕ್ ಮಾಡಿ ಎರಡು ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಒಂದು ವಿಡಿಯೋಗೆ ” ನತದೃಷ್ಟ ಮನುಷ್ಯರು” ಹಾಗೂ ಇನ್ನೊಂದು ವಿಡಿಯೋಗೆ “ವಿಶ್ವದಾದ್ಯಂತ ಚೆಂಡು ವಿಫಲಗೊಳ್ಳುತ್ತೆ” ಎಂದು ಕ್ಯಾಪ್ಷನ್ ಕೊಡಲಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಪ್ರಭಾಸ್ ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ “ಎಲ್ಲರಿಗೂ ನಮಸ್ಕಾರ, ನನ್ನ ಫೇಸ್‌ಬುಕ್ ಖಾತೆಯನ್ನು ಹ್ಯಾಕ್​​ ಮಾಡಲಾಗಿದೆ. ನಮ್ಮ ತಂಡವು ಇದನ್ನು ಪರಿಹರಿಸುತ್ತಿದೆ” ಎಂದು ಬರೆದಿದ್ದಾರೆ.
Hello Everyone,
My Facebook Page Has Been Hacked. The Team is Sorting this Out.
~#PrabhasVia Instagrampic.twitter.com/8n1yeABIDT
— Hail Prabhas (@HailPrabhas007)July 27, 2023

ಕೆಲವು ಇಂಟರ್ನೆಟ್ ಬಳಕೆದಾರರು ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುವ ಮೂಲಕವಾಗಿ ಆತಂಕ ವ್ಯಕ್ತ ಪಡಿಸಿದ್ದರು. ನಂತರ ತಂಡ ಈ ಖಾತೆಯನ್ನುಮರುಸ್ಥಾಪಿಸುವುದರ ಜೆತೆಗೆ ಕಾಮೆಂಟ್‌ ಹಾಗೂ ಕಿಡಿಗೇಡಿಗಳು ಹಾಕಿರುವ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ.
ಪ್ರಭಾಸ್ ನಟನೆಯ ಸಾಲು ಸಾಲು ಸಿನಿಮಾಗಳು ಸೋಲು ಕಾಣುತ್ತಿವೆ. ಇತ್ತೀಚೆಗೆ ರಿಲೀಸ್ ಆದ ‘ಆದಿಪುರುಷ್’ ಸಿನಿಮಾ ಕೂಡ ಸೋತಿತ್ತು. ಬಿಗ್ ಬಜೆಟ್​ನಲ್ಲಿ ರೆಡಿ ಆದ ಸಿನಿಮಾ ಕಮಾಲ್ ಮಾಡುವಲ್ಲಿ ವಿಫಲ ಆಯಿತು. ಈಗ ಪ್ರಭಾಸ್ ಅವರಿಗೆ ಹ್ಯಾಕರ್ಸ್ ಶಾಕ್ ನೀಡಿದ್ದಾರೆ. ಫೇಸ್​ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಬೇಕಾಬಿಟ್ಟಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈಗ ಅವರ ಖಾತೆಯನ್ನು ಹ್ಯಾಕರ್ಸ್​​ಗಳ ಕೈನಿಂದ ಮರಳಿ ಪಡೆಯಲಾಗಿದೆ.
ಇದನ್ನೂ ಓದಿ:ಈ ರೆಸ್ಟೋರೆಂಟ್​​​ನಲ್ಲಿ ತಿನ್ನಲು ಇಂದು ಬುಕ್ ಮಾಡಿದರೆ 4 ವರ್ಷ ಕಾಯಬೇಕು!
ಪ್ರಭಾಸ್ ಅವರ ವಿಚಾರಕ್ಕೆ ಬಂದರೆ, ‘ರಾಜಾ ಡಿಲಕ್ಸ್’ ಎಂಬ ಶೀರ್ಷಿಕೆಯ ಸಿನಿಮಾವನ್ನು ಮಾರುತಿ ನಿರ್ದೇಶನದಲ್ಲಿ ಹಾರರ್ ಕಾಮಿಡಿ ಜಾನರ್​​ನಲ್ಲಿ ಸಿನಿಮಾ ಮಾಡಲಿದ್ದಾರಂತೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಈ ಸಿನಿಮಾದ ಬಹುಪಾಲು ಒಂದು ಮನೆಯಲ್ಲಿ ನಡೆಯುತ್ತದೆ. ಆ ಮನೆಯ ಸೆಟ್‌ಗೆ ಸುಮಾರು 6 ಕೋಟಿ ಖರ್ಚು ಮಾಡಲಾಗಿದೆ. ಹಾರರ್ ಕಾಮಿಡಿ ಹಿನ್ನಲೆಯಲ್ಲಿ ಬರುತ್ತಿರುವ ಈ ಸಿನಿಮಾದಲ್ಲಿ ಪ್ರಭಾಸ್ ತುಂಬಾ ಹೊಸಬರಾಗಿ ಕಾಣಿಸಿಕೊಳ್ಳಲಿದ್ದಾರೆ. ಕೆಲವು ದಿನಗಳನ್ನು ಈ ಚಿತ್ರಕ್ಕೆ ಮೀಸಲಿಟ್ಟು ಆದಷ್ಟು ಬೇಗ ಮುಗಿಸಲು ಪ್ರಭಾಸ್ ಪ್ಲಾನ್ ಮಾಡಿದ್ದಾರೆ.
ಪತಿಯಿಂದ ವಿಚ್ಛೇದನ ಪಡೆದ ನಿರೂಪಕಿ ಚೈತ್ರಾ ವಾಸುದೇವನ್; ದಯವಿಟ್ಟು ಯಾರೂ ಜಡ್ಜ್ ಮಾಡಬೇಡಿ ಎಂದ್ರು…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
