ನವದೆಹಲಿ:ಪ್ರಭಾಸ್ ಅಭಿನಯ ಮತ್ತು ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾ ‘ಕಲ್ಕಿ 2898 ಎಡಿ’ ಬಿಡುಗಡೆಯಾಗಿ. ನಾಲ್ಕನೇ ವಾರಾಂತ್ಯದಲ್ಲಿ ದಾಖಲೆಗಳನ್ನು ಸೃಷ್ಟಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರವು ಹಿಂದಿಯಲ್ಲಿ ಮೂರನೇ ಅತಿ ಹೆಚ್ಚು ಹಣ ಗಳಿಸಿದ ದಕ್ಷಿಣ ಭಾರತದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ:ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆಗೆ ಶಿಕ್ಷಣ ಸಚಿವರೇ ಹೊಣೆ: ಸಂಸತ್​ ಕಲಾಪದಲ್ಲಿ ರಾಹುಲ್ ಗಾಂಧಿ ವಾಗ್ದಾಳಿ
ಕಲ್ಕಿ ಚಿತ್ರವು ವಿಶ್ವಾದ್ಯಂತ 1000 ಕೋಟಿ ರೂ.ಕ್ಲಬ್ ಸೇರಿದ 7ನೇ ಭಾರತೀಯ ಚಿತ್ರವಾಗಿ ಈಗಾಗಲೇ ದಾಖಲೆ ಸೃಷ್ಟಿಸಿರುವುದು ತಿಳಿದ ಸಂಗತಿಯೇ. ಬಿಡುಗಡೆಯಾಗಿ 25 ದಿನಗಳ ಕಾಲಾವಧಿಯಲ್ಲಿ ಭಾರತದಲ್ಲಿ ಕಲೆಕ್ಷನ್ 600 ಕೋಟಿ ದಾಟಿದೆ.
ಆರ್​ಆರ್​ಆರ್​ ಹಿಂದಿಯಲ್ಲಿ 272 ಕೋಟಿ ರೂ ಸಂಗ್ರಹಿಸಿದರೆ, ಕಲ್ಕಿ ನಾಲ್ಕು ವಾರಗಳಲ್ಲಿ ರೂ 275.9 ಕೋಟಿ ಸಂಗ್ರಹಿಸಿದೆ.
ದೇಶದಲ್ಲಿ ಶಾರುಖ್ ಖಾನ್ ಅಭಿನಯದ ಜವಾನ್ 640.25 ಕೋಟಿ ರೂ. ಸಂಗ್ರಹ ಮಾಡಿದ್ದರೆ, ‘ಕಲ್ಕಿ’ 616.85 ಕೋಟಿ ರೂ. ಬಾಕ್ಸಾಫೀಸ್ ಕಲೆಕ್ಷನ್​ ಆಗಿದೆ. ‘ಕಲ್ಕಿ’ ರೇಂಜ್ ನ ಚಿತ್ರಗಳು ಇಲ್ಲದ ಕಾರಣ ಈ ಚಿತ್ರ ಉತ್ತಮ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದೆ.
ಇನ್ನು ಹಿಂದಿಯಲ್ಲಿ ದಕ್ಷಿಣದ ಬಾಹುಬಲಿ 2 511 ಕೋಟಿ ರೂ. ಸಂಗ್ರಹಿಸಿದ್ದರೆ, ಕೆಜಿಐಎಫ್ 2 435 ಕೋಟಿ ರೂ. ಬಾಚಿಕೊಂಡಿತ್ತು. ಕಲ್ಕಿ 5.275.9 ಕೋಟಿ ರೂ.ಸಂಗ್ರಹಿಸಿದ್ದು, ಆರ್​ಆರ್​ಆರ್​ 272.78 ಕಲೆಕ್ಷನ್​ ಮಾಡಿತ್ತು.
ಕಲ್ಕಿ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂ.ನ ಗ್ರಾಸ್ ಕ್ಲಬ್‌ಗೆ ಪ್ರವೇಶಿಸಿದೆ. ಈ ಸಾಧನೆ ಮಾಡಿದ ಏಳನೇ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ.
ದೇಶದ ಜನಪ್ರಿಯ ನಟ ಪ್ರಭಾಸ್​! ನಂತರದ ಸ್ಥಾನಗಳಲ್ಲಿ ಯಾರಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − eight =
Remember me
