ಬೆಂಗಳೂರು:ಟಾಲಿವುಡ್​​ ನಟ ಪ್ರಭಾಸ್, ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಬಾಹುಬಲಿ’ ಸಿನಿಮಾದಲ್ಲಿ ಮಹೇಂದ್ರ ಮತ್ತು ಅಮರೇಂದ್ರ ಬಾಹುಬಲಿ ಪಾತ್ರವು ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿತು. ಮೈಸೂರಿನ ಮ್ಯೂಸಿಯಂನಲ್ಲಿ ನಟ ಪ್ರಭಾಸ್ ಹೋಲುವ ಮೇಣದ ಪ್ರತಿಮೆ ಮಾಡಿರುವ ಕುರಿತಾಗಿ ನಿರ್ಮಾಪಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರದ ಯಶಸ್ಸಿನ ವರ್ಷಗಳ ನಂತರ, ಲಂಡನ್‌ ಮೇಡಂ ಟುಸ್ಸಾಡ್‌ ಮ್ಯೂಸಿಯಂನಲ್ಲಿ ಚಿತ್ರರಂಗ, ಕ್ರಿಕೆಟ್‌ ಸೇರಿದಂತೆ ಇನ್ನಿತರ ಕ್ಷೇತ್ರಗಳ ಸೆಲೆಬ್ರಿಟಿಗಳ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸುವುದು ಸಾಮಾನ್ಯವಾಗಿದೆ. ಮೊದಲೆಲ್ಲಾ ಬಾಲಿವುಡ್‌ ಸೆಲೆಬ್ರಿಟಿಗಳೇ ತುಂಬಿದ್ದ ಮೇಡಂ ಟುಸ್ಸಾಡ್‌ ಮ್ಯೂಸಿಯಂನಲ್ಲಿ ಈಗ ದಕ್ಷಿಣ ಭಾರತದ ನಟರ ಮೇಣದ ಪ್ರತಿಮೆಗಳು ಕೂಡಾ ಇವೆ.
ಮೈಸೂರಿನಲ್ಲಿ ಬಾಹುಬಲಿ ಪ್ರಭಾಸ್‌ ಮೇಣದ ಪ್ರತಿಮೆ ಸ್ಥಾಪನೆ ಮಾಡಲಾಗಿದ್ದು ಇದು ಸ್ವತಃ ಬಾಹುಬಲಿ ಚಿತ್ರದ ನಿರ್ಮಾಪಕ ಹಾಗೂ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರಿನ ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್‌ ಮ್ಯೂಸಿಯಂನಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ, ಪ್ರಧಾನಿ ನರೇಂದ್ರ ಮೋದಿ, ಕವಿ ರವೀಂದ್ರನಾಥ್‌ ಠಾಗೂರ, ಮದರ್‌ ಥೆರೇಸಾ, ವಿಜ್ಞಾನಿ ಆಲ್ಪರ್ಟ್‌ ಐನ್‌ಸ್ಟೀನ್‌, ಚಾರ್ಲಿ ಚಾಪ್ಲಿನ್‌, ಪುನೀತ್‌ ರಾಜ್‌ಕುಮಾರ್‌, ಸರ್‌ ಎಂ ವಿಶ್ವೇಶ್ವರಯ್ಯ ಸೇರಿದಂತೆ ಅನೇಕ ಗಣ್ಯರ ಮೇಣದ ಪ್ರತಿಮೆ ಇದೆ. ಇದೀಗ ಬಾಹುಬಲಿ ಪ್ರಭಾಸ್‌ ಮೇಣದ ಪ್ರತಿಮೆಯನ್ನು ನಿರ್ಮಿಸಲಾಗಿದೆ.
ಈ ಪೋಸ್ಟ್‌ಗೆ ನೆಟಿಜನ್ಸ್‌ ಕಾಮೆಂಟ್‌ ಮಾಡಿ, ಇದು ಬಾಹುಬಲಿ ಪ್ರಭಾಸ್‌ ಅಲ್ಲ, ಕ್ರಿಕೆಟಿಗ ಡೇವಿಡ್‌ ವಾರ್ನರ್‌ಗೆ ಪ್ರಭಾಸ್‌ ವೇಷ ಭೂಷಣ ತೊಡಿಸಿದಂತೆ ಕ್ರಿಯೇಟ್‌ ಮಾಡಲಾಗಿದೆ ಕಾಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಈ ಮೇಣದ ಪ್ರತಿಮೆ, ಮೆಚ್ಚುಗೆಗಿಂತ ಹೆಚ್ಚಾಗಿ ಟ್ರೋಲ್‌ ಆಗುತ್ತಿದೆ.
ಬಾಹುಬಲಿ ಸಿನಿಮಾ ನಿರ್ಮಾಪಕ ಶೋಬು ಯರ್ಲಗಡ್ಡ ಬೇಸರದಿಂದಲೇ ಪ್ರತಿಕ್ರಿಯಿಸಿದ್ದಾರೆ. ”ಇದು ಅಧಿಕೃತವಾಗಿ ಲೈಸನ್ಸ್‌ ಪಡೆದು ಮಾಡುತ್ತಿರುವ ಕೆಲಸ ಅಲ್ಲ. ಹಾಗೇ ನಮ್ಮ ಅನುಮತಿ ಇಲ್ಲದೆ ಈ ಮೇಣದ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದನ್ನು ತೆರೆವುಗೊಳಿಸುವ ಸಂಬಂಧ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ನಕ್ಸಲ್ ಪೀಡಿತ ಜಿಲ್ಲೆಯ 93 ವರ್ಷದ ವೃದ್ಧ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 19 =
Remember me
