ಲಖನೌ:ಇತ್ತೀಚೆಗೆ ಉತ್ತರ ಪ್ರದೇಶದ ವಿದ್ಯಾರ್ಥಿನಿ ಪ್ರಾಚಿ ನಿಗಮ್​ ಹತ್ತನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದಳು. ಆದರೆ, ಕೆಲವರು ಆಕೆಯ ಸಾಧನೆಯನ್ನು ಪ್ರಶಂಸಿಸದೇ ಪುರುಷರಂತೆ ಮುಖದಲ್ಲಿ ಕೂದಲು ಮತ್ತು ಮೀಸೆ ಇರುವ ಒಂದೇ ಕಾರಣಕ್ಕೆ ಆಕೆಯನ್ನು ಟ್ರೋಲ್​ ಮಾಡಿದರು. ಇದೇ ವಿಚಾರವಾಗಿ ಇದೀಗ ಪ್ರಾಚಿ ನಿಗಮ್​ ತುಂಬಾ ಬೇಸರ ವ್ಯಕ್ತಪಡಿಸಿದ್ದಾಳೆ.
ಪ್ರಾಚಿ ನಿಗಮ್​ ಎಸ್ಸೆಸ್ಸೆಲ್ಸಿಯಲ್ಲಿ ಶೇ. 98.50 ರಷ್ಟು ಫಲಿತಾಂಶ ಪಡೆದಿದ್ದಾರೆ. ಆದರೂ ಆಕೆಯ ವಿರುದ್ಧದ ಟ್ರೋಲ್​ಗಳು ಸಂಭ್ರಮವನ್ನೇ ಕಸಿಯಿತು. ಈ ವಿಚಾರವಾಗಿ ಪ್ರಾಚಿ ಬಿಬಿಸಿ ನ್ಯೂಸ್​ ಹಿಂದಿ ಮಾಧ್ಯಮ ಸಂದರ್ಶನದಲ್ಲಿ ಬಹಳ ನೋವಿನಿಂದ ಮಾತನಾಡಿದ್ದಾಳೆ. ತನ್ನ ಸಾಧನೆಗಿಂತ ತನ್ನ ನೋಟಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಂಕಗಳು ಕೊಂಚ ಕಡಿಮೆ ಬಂದಿದ್ದರೆ ನಾನು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯಳಾಗುತ್ತಿರಲಿಲ್ಲ ಮತ್ತು ನನ್ನ ಮುಖದ ಕೂದಲಿಗೆ ನಾನು ಟ್ರೋಲಿಂಗ್ ಎದುರಿಸುತ್ತಿರಲಿಲ್ಲ. ಟಾಪರ್​ ಆಗಿದ್ದೇ ಇದಕ್ಕೆ ಕಾರಣವಾಯಿತು ಎಂದು ಪ್ರಾಚಿ ಬೇಸರ ಹೊರ ಹಾಕಿದರು.
ನನ್ನ ಮೇಲೆ ತುಂಬಾ ಟ್ರೋಲ್​ ಆದರೂ ಸಹ ನನ್ನನ್ನು ಕೆಲವರು ಬೆಂಬಲಿಸಿದರು ಮತ್ತು ನನ್ನ ಪರವಾಗಿ ನಿಂತು ಟ್ರೋಲಿಗರ ಬಾಯಿಯನ್ನು ಮುಚ್ಚಿಸಿದರು. ಹಾರ್ಮೋನ್​ಗಳ ಬದಲಾವಣೆಯಿಂದ ಈ ರೀತಿಯಾಗಿ ಮುಖದಲ್ಲಿ ಕೂದಲುಗಳು ಬೆಳೆಯುತ್ತವೆ ಎಂದು ಅವರಿಗೆ ತಿಳಿ ಹೇಳಿದರು. ಇದು ಸ್ವಲ್ಪ ನನಗೆ ಸಮಾಧಾನ ನೀಡಿತು ಎಂದು ಪ್ರಾಚಿ ತಿಳಿಸಿದರು.
ತನ್ನ ಅಪರೂಪದ ನೋಟದಿಂದಾಗಿ ತಾನು ವೈಯಕ್ತಿಕವಾಗಿ ನಿರಂತರವಾಗಿ ಎದುರಿಸುತ್ತಿರುವ ಕಿರುಕುಳದ ಬಗ್ಗೆ ಮಾತನಾಡಿದ ಪ್ರಾಚಿ, ಇದು ನಿಸ್ಸಂಶಯವಾಗಿ ತುಂಬಾ ಕೆಟ್ಟ ಪ್ರವೃತ್ತಿಯಾಗಿದೆ. ಆದರೆ ನೆಟ್ಟಿಗರು ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಏನೂ ಮಾಡಲಾಗುವುದಿಲ್ಲ ಎಂದು ಹೇಳಿದರು. ಭವಿಷ್ಯದಲ್ಲಿ ತಾನೊಬ್ಬ ಇಂಜಿನಿಯರ್ ಆಗುವ ಹಂಬಲವಿದೆ ಮತ್ತು ತನ್ನ ಕನಸುಗಳತ್ತ ಗಮನಹರಿಸುತ್ತಿದ್ದೇನೆ ಎಂದು ಪ್ರಾಚಿ ಹೇಳಿದರು.
ಪ್ರಾಚಿ ಅವರ ತಾಯಿ ಮಮತಾ ನಿಗಮ್ ಮಾತನಾಡಿ, ಟ್ರೋಲ್‌ಗಳಿಂದ ಕುಗ್ಗಿದ್ದ ತಮ್ಮ ಮಗಳನ್ನು ಹೇಗೆ ಪ್ರೇರೇಪಿಸಿದರು ಎಂಬುದನ್ನು ವಿವರಿಸಿದರು. ಟ್ರೋಲ್‌ಗಳಿಗೆ ಗಮನ ಕೊಡಬೇಡ ಎಂದು ನಾನು ನನ್ನ ಮಗಳನ್ನು ಪ್ರೋತ್ಸಾಹಿಸಿದೆ. ಆಶ್ಚರ್ಯವಾಗುವಂತೆ, ಅನೇಕ ನೆಟ್ಟಿಗರು ನನ್ನ ಮಗಳನ್ನು ಬೆಂಬಲಿಸಿದರು ಎಂದರು.
ಪ್ರಾಚಿ ತಂದೆ ಚಂದ್ರಪ್ರಕಾಶ್ ನಿಗಮ್ ಮಾತನಾಡಿ, ಸಮಾಜದಲ್ಲಿ ಎಲ್ಲ ರೀತಿಯ ಜನರಿದ್ದಾರೆ. ಟ್ರೋಲ್​ಗಳಿಂದಾಗಿ ನಮಗೆ ಸಹಜವಾಗಿಯೇ ಕೆಟ್ಟ ಭಾವನೆ ಮೂಡಿದೆ, ಆದರೆ, ಅದೇ ಸಮಯದಲ್ಲಿ, ನಮ್ಮ ಮಗಳು ಗರಿಷ್ಠ ಅಂಕಗಳನ್ನು ಗಳಿಸಿದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಅವರು ಹೇಳಿದರು.(ಏಜೆನ್ಸೀಸ್​)
ಹಾಸನ ಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ಬಳಿಕ ತಂದೆ ಎಚ್​.ಡಿ. ರೇವಣ್ಣ ವಿರುದ್ಧವೂ ಎಫ್​ಐಆರ್​ ದಾಖಲು

ಡೆಲ್ಲಿ ವಿರುದ್ಧದ ಸೋಲಿಗೆ ತಿಲಕ್ ವರ್ಮ ಕಾರಣ ಎಂದ ಹಾರ್ದಿಕ್ ಪಾಂಡ್ಯ! ನೀನೆಂಥ ಕ್ಯಾಪ್ಟನ್​? ಫ್ಯಾನ್ಸ್​ ಕಿಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − four =
Remember me
