ಭೋಪಾಲ್​:ಮಧ್ಯಪ್ರದೇಶದ ಭೋಪಾಲ್​ ಲೋಕಸಭಾ ಕ್ಷೇತ್ರದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಇತ್ತೀಚೆಗೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಆಗೊಂದು, ಈಗೊಂದು ಹೇಳಿಕೆ ನೀಡಿ, ವಿವಾದ ಸೃಷ್ಟಿಸುತ್ತಿದ್ದ ಅವರು ಏಕಾಏಕಿ ಮೌನವಾಗಿದ್ದಾರೆ.
ಇತ್ತೀಚೆಗೆ ಭೋಪಾಲ್​ ಲೋಕಸಭಾ ಕ್ಷೇತ್ರದ ಜನರಂತೂ ಪ್ರಜ್ಞಾ ಸಿಂಗ್​ ಠಾಕೂರ್​ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್​ಗಳನ್ನೂ ಹಾಕಲು ಪ್ರಾರಂಭಿಸಿದ್ದರು. ನಮ್ಮ ಸಂಸದೆ ಕಾಣೆಯಾಗಿದ್ದಾರೆ..ಹುಡುಕಿಕೊಡಿ ಎಂಬಂಥ ವಿವಿಧ ಪೋಸ್ಟರ್​ಗಳನ್ನು ಭೋಪಾಲ್​ನ ವಿವಿಧ ಭಾಗಗಳಲ್ಲಿ ಹಾಕಲಾಗಿತ್ತು. ಕರೊನಾ ಇಷ್ಟೊಂದು ತಾಂಡವ ಆಡುತ್ತಿದ್ದರೂ ಸಂಸದರು ಎಲ್ಲಿ ಎಂಬಂತಹ ವ್ಯಂಗ್ಯಭರಿತ ಬರಹಗಳು ಅದರಲ್ಲಿ ಇದ್ದವು.
ಭೋಪಾಲ್​ನ ಭೈರಾಗಡ್​ ಚಿಚ್ಲಿ ಪ್ರದೇಶದಲ್ಲಿ ಶಂಕರ್ ಭಾರತಿಯಿಂದ ಪ್ರಾರಂಭಿಸಲಾದ ಸಂಚಾರಿ ಆಸ್ಪತ್ರೆಯನ್ನು ವಿಡಿಯೋ ಕಾಲ್​ ಮೂಲಕವೇ ಸಾಧ್ವಿ ಪ್ರಜ್ಞಾ ಉದ್ಘಾಟಿಸಿದ್ದರು. ಆದರೂ ಅವರು ಹೊರಗೆ ಯಾಕೆ ಬರುತ್ತಿಲ್ಲ ಎಂಬುದು ಬಹುದೊಡ್ಡ ಚರ್ಚೆಯ ವಿಷಯವಾಗಿತ್ತು.
ಇದನ್ನೂ ಓದಿ:ಹಲ್ಲುನೋವೆಂದು ಆಸ್ಪತ್ರೆಗೆ ಹೋದ ಬಾಲಕಿಯ ಕಣ್ಣಿಗೆ ಬಲವಾಗಿ ಹೊಡೆದ ದಂತವೈದ್ಯ
ಹೀಗೆ ಮಿಸ್ಸಿಂಗ್ ಪೊಸ್ಟರ್​ಗಳು ಕಾಣಿಸಿಕೊಳ್ಳುತ್ತಿದ್ದಂತೆ ಬಿಜೆಪಿ ವಕ್ತಾರ ಪ್ರಜ್ಞಾ ಸಿಂಗ್​ ಎಲ್ಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಸಾಧ್ವಿ ಪ್ರಜ್ಞಾ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಕ್ಯಾನ್ಸರ್ ಮತ್ತು ಕಣ್ಣಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ:‘ಮೋದಿಯವರು ಪ್ರಧಾನಿಯಾಗಿರದಿದ್ದರೆ ಕೊವಿಡ್​ -19 ಸವಾಲನ್ನು ಎದುರಿಸುವುದೇ ಕಷ್ಟವಾಗಿತ್ತು…’
ಆದರೆ ಅವರು ಮೊಬೈಲ್​ ಮೂಲಕವೇ ಕೆಲಸ ಮಾಡುತ್ತಿದ್ದಾರೆ. ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿ ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾಗಿರುವವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ವಕ್ತಾರ ರಾಹುಲ್​ ಕೊಠಾರಿ ಹಾಗೂ ಶಂಕರ ಭಾರತಿ ಸಂಘಟನೆ ಮುಖ್ಯಸ್ಥ ಉಮಾಕಾಂತ್​ ದೀಕ್ಷಿತ್​ ತಿಳಿಸಿದ್ದಾರೆ. (ಏಜೆನ್ಸೀಸ್​)
ಇದನ್ನೂ ಓದಿ:ಇನ್ಮುಂದೆ ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಪಾನ್​ ಮಸಾಲ ಸೇವನೆ, ಉಗಿಯುವುದು ನಿಷೇಧ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
