ನವದೆಹಲಿ:ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್​ ಅವರ ಮಧ್ಯಪ್ರದೇಶದ ಭೂಪಾಲ್​ ನಿವಾಸಕ್ಕೆ ಶಂಕಾಸ್ಪದ ಪತ್ರವೊಂದನ್ನು ಕಳುಹಿಸಲಾಗಿದ್ದು, ಪತ್ರದಲ್ಲಿ ಪೌಡರ್​ ರೀತಿಯ ಪದಾರ್ಥ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಪೊಲೀಸ್​ ಮೂಲಗಳ ಪ್ರಕಾರ ಪತ್ರದ ಮೇಲೆ ಉರ್ದು ಭಾಷೆಯಲ್ಲಿ ಬರೆಯಲಾಗಿದ್ದು, ಇನ್ನಿತರ ಪತ್ರಗಳನ್ನು ಅದರೊಳಗೆ ಸೇರಿಸಿ ಕಳುಹಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಠಾಕೂರ್, ಇಂತಹ ಪತ್ರಗಳನ್ನು ಈ ಮುಂಚೆಯೂ ನಾನು ಸ್ವೀಕರಿಸಿದ್ದೇನೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದೇನೆ. ಆದರೆ, ಅವರು ಯಾವುದೇ ಕ್ರಮಕೈಗೊಂಡಿಲ್ಲ. ಇದೊಂದು ದೇಶ ವಿರೋಧಿಗಳ ದೊಡ್ಡ ಕುತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.
ಠಾಕೂರ್​ ಮನೆಯಲ್ಲಿದ್ದ ಮೂರರಿಂದ ನಾಲ್ಕು ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪತ್ರಗಳನ್ನು ಉರ್ದು ಭಾಷೆಯಲ್ಲಿ ಬರೆಯಲಾಗಿದೆ. ಈ ಬಗ್ಗೆ ಮಾಧ್ಯಮಗೊಂದಿಗೆ ಮಾತನಾಡಿರುವ ಭೂಪಾಲ್​ ಡಿಐಜಿ ಇರ್ಷಾದ್​ ವಾಲಿ, ನಾವು ಸಂಸದೆಯಿಂದ ದೂರು ಸ್ವೀಕರಿಸಿದ್ದೇವೆ. ಪತ್ರದೊಳಗೆ ಕೆಲ ಹಾನಿಕಾರಕ ಕೆಮಿಕಲ್ಸ್​ ಇದ್ದವು ಎಂದು ಠಾಕೂರ್​ ಆರೋಪ ಮಾಡಿದ್ದಾರೆ. ಪ್ರಕರಣ ಸಂಬಂಧ ಎಫ್​ಐಆರ್​ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಠಾಕೂರ್​ ವಿಳಾಸ ಇರುವ ಕಂದು ಬಣ್ಣದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪತ್ರವು ಕೆಲ ವಿಷಕಾರಿ ಪದಾರ್ಥಗಳನ್ನು ಹೊಂದಿವೆ ಎಂದು ಬರೆದು ಜಾಲತಾಣದಲ್ಲಿ ಹರಿಬಿಡಲಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಪರೀಕ್ಷೆಗಾಗಿ ಪತ್ರವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ.(ಏಜೆನ್ಸೀಸ್​)
Madhya Pradesh: A suspicious letter has been delivered at the residence of Bhopal MP, Pragya Singh Thakur. Powder-like substance was also found with the letter. Police is at the spot and a Forensic Science Laboratory (FSL) team is examining the letter. Case registered.pic.twitter.com/Gz3YQ1tvKe— ANI (@ANI)January 13, 2020
Madhya Pradesh: A suspicious letter has been delivered at the residence of Bhopal MP, Pragya Singh Thakur. Powder-like substance was also found with the letter. Police is at the spot and a Forensic Science Laboratory (FSL) team is examining the letter. Case registered.pic.twitter.com/Gz3YQ1tvKe
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + five =
Remember me
