ಬೆಂಗಳೂರು:ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಬಹುಭಾಷಾ ನಟ, ರಾಜಕಾರಣಿ ಪ್ರಕಾಶ್​ ರಾಜ್​, ತಮ್ಮ ವಿಭಿನ್ನ ಹೇಳಿಕೆ ಅಥವಾ ಟ್ವೀಟ್​ ಮೂಲಕ ದೇಶವ್ಯಾಪಿ ಭಾರೀ ಚರ್ಚೆಗೆ ಗ್ರಾಸವಾಗುತ್ತಾರೆ. ಅದೇ ರೀತಿಯಲ್ಲಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಹಿಂದಿ ದಿವಸ್​ ದಿನದಂದೇ ಟ್ವೀಟ್​ ಮಾಡಿ, ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ಶರಣ್ ಹೊಸತನದ ಹುಡುಕಾಟ; 100 ಚಿತ್ರಗಳಲ್ಲಿ ಹಾಸ್ಯನಟನಾಗಿ ನಗಿಸುವುದು ಸುಲಭವಲ್ಲ
ಹಿಂದಿ ಹೇರಿಕೆ ಕುರಿತು ತಮ್ಮ ಶೈಲಿಯಲ್ಲಿ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, “ನೀವು ಹಿಂದಿ ಮಾತನಾಡುತ್ತೀರಿ, ಯಾಕೇಂದ್ರೆ ನಿಮಗೆ ಹಿಂದಿ ಗೊತ್ತು. ನಮ್ಮನ್ನ ಹಿಂದಿಯಲ್ಲಿ ಮಾತಾಡಿ ಅಂತ ಒತ್ತಾಯಿಸ್ತೀರಿ, ಯಾಕೇಂದ್ರೆ ನಿಮಗೆ ಹಿಂದಿ ಮಾತ್ರ ಗೊತ್ತು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ನೀವು ಹಿಂದಿ ಮಾತನಾಡುತ್ತೀರಿ .. ಯಾಕೇಂದ್ರೆ ನಿಮಗೆ ಹಿಂದಿ ಗೊತ್ತು .. ನಮ್ಮನ್ನ ಹಿಂದಿಯಲ್ಲಿ ಮಾತಾಡಿ ಅಂತ ಒತ್ತಾಯಿಸ್ತೀರಿ ..ಯಾಕೇಂದ್ರೆ ನಿಮಗೆ ಹಿಂದಿ ಮಾತ್ರ ಗೊತ್ತು …#ಹಿಂದಿಹೇರಿಕೆನಿಲ್ಲಿಸಿ#StopHindiDiwas#StopHindiImposition#StopHindiHegemonypic.twitter.com/GzTESNFlfF
— Prakash Raj (@prakashraaj)September 14, 2023

ಪ್ರಕಾಶ್​ ರಾಜ್​ ಮಾಡಿದ ಟ್ವೀಟ್​ ಈಗ ಭಾರೀ ವೈರಲ್ ಆಗಿದ್ದು, ವ್ಯಾಪಕ ಅಭಿಪ್ರಾಯಗಳು ವ್ಯಕ್ತವಾಗಿದೆ. ಹಿಂದಿ ದಿವಸ್ ದಿನದಂದು ಹಿಂದಿ ಹೇರಿಕೆಯ ವಿರುದ್ಧ ಟ್ವೀಟ್​ ಮುಖೇನ ತಮ್ಮ ಅನಿಸಿಕೆ ಹೊರಹಾಕಿದ್ದಾರೆ. ಕಳೆದ ಕೆಲವು ದಿನಗಳಿಂದ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ನಟ, ಇದೀಗ ಮಾರ್ಮಿಕವಾಗಿ ಮಾಡಿದ ಟ್ವೀಟ್​ ಹೆಚ್ಚಿನ ಸಂಖ್ಯೆಯಲ್ಲಿ ಶೇರ್​ ಆಗಿದೆ.
‘ಬೇಬಿ’ಗೆ ಸಂಕಷ್ಟ!; ನಿರ್ಮಾಪಕರಿಗೆ ನೋಟಿಸ್ ಜಾರಿಗೊಳಿಸಿದ ಹೈದರಾಬಾದ್ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
