ತಿರುಪತಿ:ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ರಿಲ್ಯಾಕ್ಸ್​ ಮೂಡಿಗೆ ಜಾರಿರುವ ರಾಜಕೀಯ ಪಕ್ಷಗಳ ನಾಯಕರು ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.
ಆದರೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮಾತ್ರ ವಿಶ್ರಾಂತಿಯತ್ತ ಮುಖ ಮಾಡದೇ ಮತ್ತಷ್ಟು ಶ್ರಮವಹಿಸಿ ತಿರುಪತಿಯ ಮೆಟ್ಟಿಲುಗಳನ್ನು ಹತ್ತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ಮತದಾನ ಮುಗಿದ ಬೆನ್ನಲ್ಲೇ ಇಂದು ಬೆಳ್ಳಂಬೆಳಗ್ಗೆ ನೇರವಾಗಿ ತಿರುಪತಿಗೆ ತೆರಳಿ ಅಲ್ಲಿಂದ ತಿರುಮಲದವರೆಗೆ ಪಾದಯಾತ್ರೆಯಲ್ಲಿ ಮೆಟ್ಟಿಲುಗಳನ್ನು ಹತ್ತಿ ಶ್ರೀನಿವಾಸ ಸ್ವಾಮಿಯ ದರ್ಶನವನ್ನು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಪಡೆದಿದ್ದಾರೆ.
ಉಳಿದ ನಾಯಕರೆಲ್ಲ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಾ ರಿಲ್ಯಾಕ್ಸ್ ಆಗುತ್ತಿದ್ದರೆ, ಇತ್ತ ಪ್ರಲ್ಹಾದ ಜೋಶಿಯವರು ಪಾದಯಾತ್ರೆ ಮಾಡಿ ವೆಂಕಟೇಶ್ವರನ ದರ್ಶನ ಪಡೆದು ನಿರಾಳರಾಗಿದ್ದಾರೆ.
ಇದನ್ನೂ ಓದಿ:5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಮಾಡುತ್ತೀರಾ? ಆ.1ರಿಂದ ಇ-ಇನ್​ವಾಯ್ಸ್​ ಕಡ್ಡಾಯ
ಮತ ಎಣಿಕೆಗೆ ಈಗಾಗಲೇ ಕೌಂಟ್ ಡೌನ್ ಆರಂಭವಾಗಿದೆ. ಈಗಾಗಲೇ ಇ.ವಿ.ಎಂ. ಸೇರಿರುವ ಅಭ್ಯರ್ಥಿಗಳ ಭವಿಷ್ಯ ಇದೇ 13ನೇ ತಾರೀಖು ಬಹಿರಂಗವಾಗಲಿದೆ.
ಇದಕ್ಕೂ ಮುನ್ನ ಕೇಂದ್ರ ಸಚಿವರು ತಿರುಪತಿಗೆ ಪಾದಯಾತ್ರೆ ನಡೆಸಿ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ಬಿಡುವಿನ ದಿನದಲ್ಲಿ ದೇವರ ದರ್ಶನ ಪಡೆದ ಕೃತಾರ್ಥ ಭಾವ ಅನುಭವಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + seven =
Remember me
