ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಎಪ್ಪತ್ತಾರನೇ ಮಹಾಧಿವೇಶನದಲ್ಲಿ ಭಾಗವಹಿಸಿ ಸ್ವದೇಶಕ್ಕೆ ಮರಳಿದ್ದಾರೆ. ಆ ಉದ್ದೇಶಕ್ಕಾಗಿ ಅವರು ಅಮೆರಿಕಾಗೆ ಭೇಟಿ ನೀಡಿದ್ದು ಇದು ಏಳನೆಯ ಬಾರಿ. ಎಂದಿನಂತೆ ಈ ಬಾರಿಯೂ ಅಮೆರಿಕಾ ನೆಲದಲ್ಲಿನ ತಮ್ಮ ಅರವತ್ತೆದು ತಾಸುಗಳ ವಾಸ್ತವ್ಯದ ದೊಡ್ಡ ಭಾಗವನ್ನು ಆ ದೇಶದ ಅಧ್ಯಕ್ಷರ ಹಾಗೂ ಅಲ್ಲಿ ನೆರೆದಿದ್ದ ಇತರ ಮಿತ್ರದೇಶಗಳ ನಾಯಕರ ಜತೆ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಮಾತುಕತೆಗಳನ್ನು ನಡೆಸುವುದರ ಸಲುವಾಗಿ ಸದುಪಯೋಗಗೊಳಿಸಿಕೊಂಡಿದ್ದಾರೆ. ಹೀಗೆ ಜಾಗತಿಕ ರಾಜಕೀಯ ನಾಯಕರ ಜತೆಗೆ, ಜಾಗತಿಕ ಆಥಿರ್ಕ ನಾಯಕರ ಜತೆಗೂ ಮೋದಿ ಅರ್ಥಪೂರ್ಣ ಮಾತುಕತೆಗಳನ್ನು ನಡೆಸಿದ್ದಾರೆ. ಈ ಮಾತುಕತೆಗಳು ಮತ್ತವುಗಳಿಗೆ ಸಿಕ್ಕಿರುವ ಜಾಗತಿಕ ಸ್ಪಂದನೆ ಹಾಗೂ ಆ ಮೂಲಕ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊರಕಿರುವ ಹಾಗೂ ಮುಂದೆ ದೊರಕಬಹುದಾದ ಲಾಭಗಳತ್ತ ಪನೋಟ ಹರಿಸುವುದು ಈ ಲೇಖನದ ವಸ್ತುವಿಷಯ.
ಅಮೆರಿಕಾದಲ್ಲಿ ಮೋದಿಯವರು ನಡೆಸಿದ ಇಪ್ಪತ್ತು ದ್ವಿಪಕ್ಷೀಯ, ದ್ವಿಪಕ್ಷೀಯ, ಚತುಷ್ಪಯ ಹಾಗೂ ಬಹುಪಯ ಸಂವಾದಗಳಲ್ಲಿ ಮುಖ್ಯವಾದುವು ಅಧ್ಯಕ್ಷ ಜೋ ಬೈಡೆನ್​ ಅವರೊಂದಿಗಿನ ಮಾತುಕಥೆ, ಅವರೊಂದಿಗೆ ಸೇರಿ ಇತರ ಕ್ವಾಡ್​ ನಾಯಕರಾದ ಆಸ್ಟ್ರೆಲಿಯಾದ ಪ್ರಧಾನಿ ಸ್ಕಾಟ್​ ಮಾರಿಸನ್​ ಮತ್ತು ಜಪಾನೀ ಪ್ರಧಾನಿ ಯೋಷಿಹಿದೆ ಸೂಗಾ ಅವರೊಂದಿಗಿನ ಕ್ವಾಡ್​ ಸಮಾವೇಶ ಮತ್ತು ಐದು ಜಾಗತಿಕ ಕಂಪನಿಗಳ ಕಾರ್ಯನಿರ್ವಾಹಕ ಅಧಿಕಾರಿಗಳ ಜತೆ ನಡೆಸಿದ ಮಾತುಕಥೆಗಳು ಮಹತ್ವಪೂರ್ಣವೆನಿಸಿಕೊಳ್ಳುತ್ತವೆ. ಜತೆಗೆ ವಿಶ್ವಸಂಸ್ಥೆಯ ಭಾಷಣವಂತೂ ಇದ್ದೇ ಇರುತ್ತದೆ. ಈ ಎಲ್ಲಾ ಭಾಷಣ ಹಾಗೂ ಸಂವಾದಗಳಲ್ಲಿ ಪ್ರಧಾನಿಯವರು ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಚೀನಾಗಳ ಬಗ್ಗೆ ಭಾರತದ ನೀತಿನಿಲುವುಗಳನ್ನು ಜಗತ್ತಿಗೆ ತಿಳಿಸುವ ಪ್ರಯತ್ನ ಹಾಗೂ ಅದಕ್ಕೆ ಸಿಕ್ಕಿದ ಪ್ರತಿಕ್ರಿಯೆಗಳನ್ನು ಅವಲೋಕಿಸುವುದಕ್ಕೆ ಪೂರ್ವತಯಾರಿಯಾಗಿ ಪಾಕಿಸ್ತಾನ ಹಾಗೂ ಚೀನೀ ನಾಯಕರ ಮಾತುಗಳನ್ನು ಮೊದಲಿಗೆ ಪರಿಗಣಿಸುವುದು ಅಗತ್ಯ.
ಚೀನೀ ಅಧ್ಯಕ್ಷ ಷಿ ಜಿನ್​ಪಿಂಗ್​ ಈ ಬಾರಿ ನ್ಯೂಯಾರ್ಕ್​ಗೆ ಖುದ್ದು ಭೇಟಿ ನೀಡಲಿಲ್ಲ. ಬದಲಾಗಿ ಅವರ ಭಾಷಣದ ರೆಕಾರ್ಡ್​ ಅನ್ನು ಸಭೆಯಲ್ಲಿ ಪ್ರದಶಿರ್ಸಲಾಯಿತು. ಜಿನ್​ಪಿಂಗ್​ರ ಮಾತುಗಳು ಅವರ ಸರ್ಕಾರ ಕಿಂಚಿತ್ತೂ ಪಾಲಿಸದ, ಆದರೆ ಉಳಿದ ಜಗತ್ತು ಪಾಲಿಸಲೇಬೇಕೆಂದು ಅವರು ಒತ್ತಾಯಿಸುವ ಅರ್ಥಹೀನ ಶಬ್ದಗಳ ಕಂತೆಯಾಗಿದ್ದವು. ಚೀನೀ ಕಮ್ಯೂನಿಸ್ಟ್​ ಪಾಟಿರ್ ಕರೊನಾ ವೈರಸ್​ ಅನ್ನು ಸೃಷ್ಟಿಸಿ ಜಗತ್ತಿಗೆ ಹರಡಿದ್ದು; ಸೋಂಕುಪೂರಿತ ವೈದ್ಯಕಿಯ ಸಾಮಗ್ರಿಗಳನ್ನು ಹಾಗೂ ಕಳಪೆ ಟೆಸ್ಟಿಂಗ್​ ಕಿಟ್​ಗಳನ್ನು ವಿದೇಶಗಳಿಗೆ ಮಾರಿ ಅಲ್ಲೆಲ್ಲಾ ಸೋಂಕು ವ್ಯಾಪಕವಾಗಲು ಕಾರಣವಾದದ್ದರ ಜತೆ ಹಣ ಗಳಿಸಲು ನೋಡಿದ್ದು, ಕರೊನಾ ವೈರಸ್​ ಉಗಮದ ಬಗ್ಗೆ ಮುಕ್ತ ವೈಜ್ಞಾನಿಕ ತನಿಖೆ ನಡೆಸಲು ಅವಕಾಶ ನೀಡದೇಹೋದದ್ದು, ಅದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯನ್ನು ದುರುಪಯೋಗಪಡಿಸಿಕೊಂಡದ್ದು ಜಗತ್ತಿಗೇ ಢಾಣಾಢಂಗುರವಾಗಿರುವ ಕರಾಳ ಸತ್ಯಗಳು. ಅಕ್ಷರಶಃ ಭೂತದ ಬಾಯಲ್ಲಿ ಭಗವದ್ಗೀತೆಯಾಗಿದ್ದ ಜಿನ್​ಪಿಂಗ್​ ಭಾಷಣ ಅವೆಲ್ಲವನ್ನೂ ಮುಚ್ಚಿಟ್ಟು; ಚೀನಾ ಎಲ್ಲ ಬಗೆಯಲ್ಲೂ ಜವಾಬ್ದಾರಿಯುತ ರಾಷ್ಟ್ರವಾಗಿದೆಯೆಂದೂ, ಜಾಗತಿಕ ಕಲ್ಯಾಣಕ್ಕಾಗಿ ಅದು ಮಾಡುತ್ತಿರುವ ಕೆಲಸಗಳಿಗೆ ಇತರ ದೇಶಗಳು ಕೈಜೋಡಿಸಬೇಕೆಂದೂ ಜಗತ್ತನ್ನು ನಂಬಿಸಲು ಹೆಣಗಾಡುವ ವ್ಯರ್ಥ ಆಲಾಪಗಳಾಗಿದ್ದವು. ಇಂಟರ್​ನ್ಯಾಷನಲ್​ ಟ್ರಿಬ್ಯೂನಲ್​ನ ತೀರ್ಪನ್ನು ಗಾಳಿಗೆ ತೂರಿ ದಣ ಚೀನಾ ಸಮುದ್ರದಲ್ಲಿ ಬೀದಿ ರೌಡಿಯಂತೆ ಆಡುತ್ತಿರುವ, ಆ ಮೂಲಕ ತೀರದ ಎಲ್ಲ ದೇಶಗಳ ಹಿತಾಸಕ್ತಿಗಳಿಗೆ ಧಕ್ಕೆಯೊಡ್ಡುತ್ತಿರುವ ಚೀನಾವನ್ನು ಜಿನ್​ಪಿಂಗ್​ ಬಣ್ಣಿಸಿದ್ದು ಸಮಾನತೆಯ ಆಧಾರದ ಮೇಲೆ ಜಾಗತಿಕ ವ್ಯವಸ್ಥೆಯನ್ನು ನಿಮಿರ್ಸಲು ಹೊರಟಿರುವ, ಪ್ರಾದೇಶಿಕ ಹಾಗೂ ಜಾಗತಿಕ ಶಾಂತಿಗಾಗಿ ಶಕ್ತಿಮೀರಿ ಪ್ರಯತ್ನಿಸುತ್ತಿರುವ ಜವಾಬ್ದಾರಿಯುತ ರಾಷ್ಟ್ರವೆಂದು! ಬಹುಶಃ ಈ ಸುಳ್ಳುಗಳನ್ನು ಅಂತಾರಾಷ್ಟ್ರೀಯ ಸಮುದಾಯದ ಕಣ್ಣಲ್ಲಿ ಕಣ್ಣಿಟ್ಟು ಹೇಳಲಾಗದ ಹಿಂಜರಿಕೆಯೇ ಜಿನ್​ಪಿಂಗ್​ ಅವರನ್ನು ನ್ಯೂಯಾರ್ಕ್​ಗೆ ಖುದ್ದು ಭೇಟಿ ನೀಡದಂತೆ ತಡೆದಿರಬೇಕು, ರೆಕಾರ್ಡೆಡ್​ ಭಾಷಣ ರವಾನಿಸಿ ಅವಿತು ಕೂರುವಂತೆ ಮಾಡಿರಬೇಕು. ಪರವಾಗಿಲ್ಲ, ಆ ಕಮ್ಯೂನಿಸ್ಟ್​ ನಾಯಕನಲ್ಲಿ ಸಾಸಿವೆಯಷ್ಟಾದರೂ ಪ್ರಾಮಾಣಿಕತೆ ಮತ್ತು ರವಷ್ಟಾದರೂ ನಾಚಿಕೆ ಇನ್ನೂ ಉಳಿದಿವೆ!
ಇನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ರದೊಂದು ಅಧ್ವಾನ. ಅವರು ಹಿಂದೆ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲು ಅಮೆರಿಕಾಗೆ ಹೋದದ್ದು 2019ರಲ್ಲಿ. ಅದೊಂದು ಕಥೆ. ಆಗ ನ್ಯೂಯಾರ್ಕ್​ಗೆ ಹೋಗಲು ಆ ಪ್ರಧಾನಮಂತ್ರಿಗೆ ಸರ್ಕಾರಿ ವಿಮಾನವಿರಲಿಲ್ಲ. ಮಿತ್ರರಾಷ್ಟ್ರವೊಂದರ ನಾಯಕ ಸಾಮಾನ್ಯ ಪ್ರಯಾಣಿಕನಂತೆ ನಾಗರಿಕ ವಿಮಾನವೊಂದರಲ್ಲಿ ಪ್ರಯಾಣಿಸುವುದರ ಬಗ್ಗೆ ನೊಂದುಕೊಂಡ ಸೌದಿ ಅರೇಬಿಯಾದ ರಾಜಕುಮಾರ ಮಹಮದ್​ ಬಿನ್​ ಸಲ್ಮಾನ್​ ತಮ್ಮದೊಂದು ಖಾಸಗಿ ಐಷಾರಾಮಿ ವಿಮಾನವನ್ನು ಇಮ್ರಾನ್​ ಖಾನ್​ರ ಪ್ರಯಾಣಕ್ಕಾಗಿ ಕಳುಹಿಸಿಕೊಟ್ಟರು. ನ್ಯೂಯಾರ್ಕ್​ನಲ್ಲಿ ಈ ಮಹಾಶಯ ಮಾಡಿದ್ದೇನು? ಸೌದಿ ಅರೇಬಿಯಾದ ಬದ್ಧವಿರೋಧಿಗಳಾದ ತುಕಿರ್ ಮತ್ತು ಇರಾನ್​ಗಳ ನಾಯಕರ ಜತೆಗೂಡಿ, ಸೌದಿ ನಾಯಕತ್ವದ ಇಸ್ಲಾಮಿಕ್​ ರಾಷ್ಟ್ರಗಳ ಒಕ್ಕೂಟವನ್ನು ಒಡೆಯುವ ಪ್ರಯತ್ನದ ಮಾತುಕಥೆಗಳಲ್ಲಿ ಇಮ್ರಾನ್​ ಖಾನ್​ ಭಾಗವಹಿಸಿದರು! ಕುಪಿತಗೊಂಡ ರಾಜಕುಮಾರ ಸಲ್ಮಾನ್​ ತಮ್ಮ ವಿಮಾನವನ್ನು ಹಿಂತೆಗೆದುಕೊಂಡರು. ಪರಿಣಾಮವಾಗಿ ಪಾಕಿಸ್ತಾನದ ಪ್ರಧಾನಮಂತ್ರಿ ಸಾಮಾನ್ಯ ಪ್ರಯಾಣಿಕನಂತೆ ನಾಗರಿಕ ವಿಮಾನವೊಂದರಲ್ಲಿ ಸ್ವದೇಶಕ್ಕೆ ಹಿಂತಿರುಗಬೇಕಾಯಿತು. ಹೀಗಾಗಿ ಈ ಸಲ ರಾಜಕುಮಾರ ಸಲ್ಮಾನ್​ ಆಗಲೀ ಇನ್ನಾರೇ ಆಗಲಿ ವಿಮಾನ ನೀಡುವ ಅವಕಾಶವಿರಲಿಲ್ಲ, ಜತೆಗೆ ಮತ್ತೆ ಸಾಮಾನ್ಯ ಪ್ರಯಾಣಿಕನ ಹಾಗೆ ಪ್ರಯಾಣಿಸುವ ಮನಸ್ಸು ಖಾನ್​ ಸಾಹೇಬರಿಗಿರಲಿಲ್ಲ. ಹೀಗಾಗಿ ಅವರೂ ತಮ್ಮ ನಿಷ್ಟ ಮಿತ್ರನಂತೆ ರೆಕಾರ್ಡೆಡ್​ ಭಾಷಣವನ್ನು ವಿಶ್ವಸಂಸ್ಥೆಗೆ ಕಳುಹಿಸಿ ಕೈತೊಳೆದುಕೊಂಡುಬಿಟ್ಟರು.
ಸರಿ, ಆ ಭಾಷಣದಲ್ಲಿ ಇದ್ದುದಾದರೂ ಏನು? ಅಫ್ಘಾನಿಸ್ತಾನದ ಹೊಸ ತಾಲಿಬಾನ್​ ಸರ್ಕಾರದ ವಕ್ತಾರನಂತೆ ಮಾತಾಡಿದ ಇಮ್ರಾನ್​ ಖಾನ್​, ಜಾಗತಿಕ ಸಮುದಾಯ ಆ ಸರ್ಕಾರಕ್ಕೆ ಎಲ್ಲ ನೆರವನ್ನೂ ನೀಡಬೇಕೆಂದು ಆಗ್ರಹಿಸಿದರು. ಹಾಗೆ ನೀಡದೇಹೋದರೆ ಅಫ್ಘಾನಿಸ್ತಾನದ ನೆಲ ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಬಳಕೆಯಾಗಿಬಿಡಬಹುದೆಂದು ಎಚ್ಚರಿಕೆಯನ್ನೂ ನೀಡಿದರು! ಕಳೆದ ಇಪ್ಪತ್ತು ವರ್ಷಗಳಲ್ಲಿ ಅಮೆರಿಕಾದ ಅಫ್ಘನ್​ ಯುದ್ಧಕ್ಕೆ ಸಹಕಾರಿಯಾಗಿ ಪಾಕಿಸ್ತಾನಕ್ಕೆ ಒಳ್ಳೆಯದೇನೂ ಸಿಗಲಿಲ್ಲವೆಂದೂ, ಬದಲಾಗಿ ತನ್ನ ದೇಶ ಅತೀವ ಕಷ್ಟಕ್ಕೆ ಸಿಲುಕಿಕೊಂಡಿದೆಯೆಂದೂ ಮಾನ್ಯ ಪ್ರಧಾನಮಂತ್ರಿಗಳು ಅಲವತ್ತುಕೊಂಡರು. ಅಮೆರಿಕಾ ಜತೆ ಸೇರಿದ್ದಕ್ಕೆ ಪ್ರತಿಯಾಗಿ ತನ್ನ ದೇಶಕ್ಕೆ 33 ಬಿಲಿಯನ್​ ಡಾಲರ್​ ಹಣವೂ, ಲೆಕ್ಕಕ್ಕೆ ಮೀರಿದ ಶಸಾಸಗಳೂ ಸಿಕ್ಕಿರುವುದನ್ನು ಖಾನ್​ ಸಾಹೇಬರು ತಪ್ಪಿಯೂ ನೆನಪಿಸಿಕೊಳ್ಳಲಿಲ್ಲ. ಮತ್ತೆ, ಕಳೆದ ಎಪ್ಪತ್ತೊಂದು ವರ್ಷಗಳಲ್ಲಿ ಪಾಕ್​ ನಾಯಕರೆಲ್ಲರೂ ಮಾಡುತ್ತಿರುವಂತೆ ಕಾಶ್ಮೀರದ ಕಥೆಯನ್ನೂ ಎತ್ತಿ ಒಂದಷ್ಟು ಅತ್ತರು.
ಪಾಕಿಸ್ತಾನದ ಜತೆ ಅಮೆರಿಕಾವೂ ಸೇರಿ ಅ್ಘನ್​ ಮೂಲಭೂತವಾದಿಗಳನ್ನು ಬೆಳೆಸಿತೆಂದು ಖಾನ್​ ಬಾಯಿ ತಪ್ಪಿಯೋ ಅಥವಾ ಸತ್ಯದ ಒತ್ತಡವನ್ನು ತಾಳಿಕೊಳ್ಳಲಾರದೆಯೋ ಹೇಳಿಬಿಟ್ಟದ್ದು ಅವರ ಇಡೀ ಭಾಷಣದಲ್ಲಿ ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಷಯ. ಅದರ ಜತೆಗೆ ತಮಾಷೆಯೂ ಒಂದಿತ್ತು. ಅಫ್ಘನ್​ ಮುಜಾಹಿದೀನ್​ಗಳನ್ನು ಮಾಜಿ ಅಧ್ಯಕ್ಷ ರೊನಾಲ್ಡ್​ ರೀಗನ್​ 1983ರಲ್ಲಿ ಶ್ವೇತಭವನಕ್ಕೆ ಆಹ್ವಾನಿಸಿ, ಅವರನ್ನು ಅಮೆರಿಕಾ ರಾಷ್ಟ್ರದ ಸ್ಥಾಪಕರಿಗೆ ಹೋಲಿಸಿದರೆಂದು ವರದಿಯಾಗಿದ್ದುದಾಗಿ ಇಮ್ರಾನ್​ ಖಾನ್​ ಹೇಳಿದರು. ವಾಸ್ತವ ಏನೆಂದರೆ ಸೋವಿಯೆತ್​ ಸೇನೆಯ ವಿರುದ್ಧ ಹೋರಾಡುತ್ತಿದ್ದ ಅಬ್ದುಲ್​ ಹಖ್​ ಎಂಬ ಅಫ್ಘನ್​ ಮುಜಾಹಿದೀನ್​ನನ್ನು ಅಧ್ಯಕ್ಷ ರೀಗನ್​ “ನಮ್ಮ ಸಹೋದರ’ ಎಂದು ಕರೆದದ್ದೇನೋ ನಿಜ. ಆದರೆ ಅವರು “ನಮ್ಮ ರಾಷ್ಟ್ರದ ಸ್ಥಾಪಕರಿಗೆ ನೈತಿಕವಾಗಿ ಸಮಾನರು’ ಎಂದು ೂಷಿಸಿದ್ದು ಆ ದಿನಗಳಲ್ಲಿ ನಿಕರಾಗುವಾದಲ್ಲಿದ್ದ ಸೋವಿಯೆತ್​ ಬೆಂಬಲಿತ ಕಮ್ಯೂನಿಸ್ಟ್​ ಸರ್ಕಾರದ ವಿರುದ್ಧ ಹೋರಾಡುತ್ತಿದ್ದ ಪ್ರಜಾಪ್ರಭುತ್ವವಾದಿ ಹೋರಾಟಗಾರರನ್ನು. ಇಮ್ರಾನ್​ ಖಾನ್​ರ ಈ ತಪ್ಪು ಉಲ್ಲೇಖ ಪಾಕಿಸ್ತಾನದಲ್ಲೇ ಲೇವಡಿಗೆ, ಖಂಡನೆಗೆ ಗುರಿಯಾಗಿದೆ. ಪತ್ರಕರ್ತೆ ರೀದಾ ಫರೂಕಿಯಂತೂ, ಪಾಕಿಸ್ತಾನದ ಹೆಚ್ಚುಗಾರಿಕೆಯನ್ನು ಮೆರೆಸಲು ಸುಳ್ಳು ಸುದ್ದಿಗಳನ್ನು ಅವಲಂಬಿಸಿದ್ದನ್ನು ಖಂಡಿಸಿ, ಖಾನ್​ರ ಈ ಕೃತ್ಯ ಅಂತಾರಾಷ್ಟ್ರೀಯ ಅವಮಾನ ಎಂದು ಖೇದ ವ್ಯಕ್ತಪಡಿಸಿದ್ದಾರೆ. ಭಾಷಣವನ್ನು ರೆಕಾರ್ಡ್​ ಮಾಡಿದ ನಂತರ ನ್ಯೂಯಾರ್ಕ್​ಗೆ ಕಳುಹಿಸುವ ಮೊದಲು ಇಮ್ರಾನ್​ ಖಾನ್​ ಕೊನೇಪಕ್ಷ ಅದನ್ನು ಯಾರಾದರೂ ತಿಳುವಳಿಕಸ್ಥರಿಗೆ ತೋರಿಸಬಹುದಾಗಿತ್ತು. ಅಥವಾ, ಇಸ್ಲಾಮಾಬಾದ್​ನಲ್ಲಿ ಅಂತಹ ತಿಳುವಳಿಕಸ್ಥರು ಅವರಿಗೆ ಸಿಗಲಿಲ್ಲವೇ?
ಷಿ ಜಿನ್​ಪಿಂಗ್​ ಮತ್ರು ಇಮ್ರಾನ್​ ಖಾನ್​ರ ಈ “ಸಾಧನೆ’ಗಳ ಹಿನ್ನೆಲೆಯಲ್ಲಿ ಈಗ ಮೋದಿಯವರ ಸಾಧನೆಗಳನ್ನು ನೋಡೋಣ. ಅದನ್ನು ಮೊದಲಿಗೆ ಅಮೆರಿಕಾದಲ್ಲಿ ಅವರಿಗೆ ಸಿಕ್ಕಿದ ಸ್ವಾಗತದಿಂದಲೇ ಆರಂಭಿಸಬೇಕು. ತೀರಾ ಇತ್ತೀಚಿನವರೆಗೂ ಜೋ ಬೈಡೆನ್​ ಅಮೆರಿಕಾದಲ್ಲಿದ್ದ ಅತಿ ದೊಡ್ಡ ಪಾಕ್​ ಪರವಾದ ಧ್ವನಿ. ಆದರೆ ಅವರು ಅಧ್ಯಕ್ಷರಾದಂದಿನಿಂದಲೂ ಅವರಿಂದ ಆಹ್ವಾನ ಬರುತ್ತದೆಂದು ಪಾಕ್​ ಪ್ರಧಾನಿ ಕಾಯುತ್ತಲೇ ಇರುವಂತಿದೆ. ಅದಕ್ಕೆ ವಿರುದ್ಧವಾಗಿ ಭಾರತದ ಪ್ರಧಾನಿಯನ್ನು ಅಧ್ಯಕ್ಷ ಬೈಡೆನ್​ ಆತ್ಮೀಯತೆಯಿಂದ ಸ್ವಾಗತಿಸಿದರು. ಅಫ್ಘಾನಿಸ್ತಾನದ ನೆಲ ಭಯೋತ್ಪಾದನೆಗೆ ಬಳಕೆಯಾಗಬಾರದು ಮತ್ತು ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲ ನಿಲ್ಲುವಂತೆ ಮಾಡಬೇಕು ಎಂಬ ಮೋದಿಯವರ ಮಾತನ್ನು ಅಧ್ಯಕ್ಷರ ಜತೆ ಉಪಾಧ್ಯೆಯೂ ಪುನರುಚ್ಚರಿಸಿದ್ದಾರೆ. ಈ ವಿಷಯ ಮೋದಿಯವರ ಮಾತಿನಲ್ಲಿ ಮತ್ತೆ ಬಂದದ್ದು ವಿಶ್ವಸಂಸ್ಥೆಯ ಭಾಷಣದಲ್ಲಿ. ಇಮ್ರಾನ್​ ಖಾನ್​ ತಾಲಿಬಾನ್​ ಸರ್ಕಾರಕ್ಕೆ ಸಹಾಯ ನೀಡುವ ಬಗ್ಗೆ ಒತ್ತುಕೊಟ್ಟು ತಮ್ಮ “ತಾಲಿಬಾನ್​ ಖಾನ್​’ ಉಪಾಧಿಗೆ ತಕ್ಕುದಾಗಿ ನಡೆದುಕೊಂಡರೆ ಮೋದಿಯವರು ಅಫ್ಘಾನಿಸ್ತಾನದ ಸರ್ವಾಂಗೀಣ ಪ್ರಗತಿಗೆ ಒತ್ತುಕೊಟ್ಟು ಮಾತಾಡಿದ್ದು ಮೌಲಿಕವಾಗಿತ್ತು. ಅಲ್ಲದೇ, ಅಲ್ಲಿನ ಸ್ಥಿತಿಯನ್ನು ಯಾರೂ ತಮ್ಮ ಸಂಕುಚಿತ ನೀತಿಗಳ ಸಾಧನೆಗೆ ದುರ್ಬಳಕೆ ಮಾಡಿಕೊಳ್ಳಬಾರದೆಂದೂ ಪಾಕಿಸ್ತಾನಕ್ಕೆ ಚುರುಕನ್ನೂ ಮುಟ್ಟಿಸಿದರು.
ಬಹುತೇಕ ಎಲ್ಲ ಮಾತುಕತೆಗಳಲ್ಲೂ ಮುಖ್ಯವಾಗಿ ಕಾಣಿಸಿಕೊಂಡದ್ದು ಚೀನಾ. ತಾವು ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿ ಮೋದಿ ಜಪಾನ್​ ನೆಲದಲ್ಲಿ ನಿಂತು ಚೀನಾದ ವಿಸ್ತಾರವಾದವನ್ನು ಖಂಡಿಸಿ, ಎಲ್ಲರಿಗೂ ಅನುಕೂಲಕರವಾದ ವಿಕಾಸವಾದಕ್ಕೆ ಒತ್ತುನಿಡಿದ್ದರು. ಆದರೆ ಆ ದಿನಗಳಲ್ಲಿ ಚೀನಾದ ಆಕ್ರಮಣಕಾರಿ ವಿಸ್ತಾರವಾದವನ್ನು ಗುರುತಿಸಿದವರೇ ಇರಲಿಲ್ಲ. ಅಂದಿನ ಅಧ್ಯಕ್ಷ ಒಬಾಮಾರಂತೂ ದಣ ಮತ್ತು ಪೂರ್ವ ಚೀನಾ ಸಮುದ್ರದಲ್ಲಿ ಚೀನಾ ನಡೆಸುತ್ತಿದ್ದ ದುರುಳತನವನ್ನು ಗಮನಿಸಿದಂತೇ ಇರಲಿಲ್ಲ. ಚೀನಾದ ತಂಟೆಗೆ ಗುರಿಯಾಗಿದ್ದ ಜಪಾನ್​ನ ಪ್ರಧಾನಿ ಸಹಾ ಆ ದೇಶವನ್ನು ಬಹಿರಂಗವಾಗಿ ಟೀಕಿಸಲು ಹಿಂಜರಿದ್ದರು. ಏಳು ವರ್ಷಗಳು ಉರುಳಿಹೋಗಿವೆ, ಚೀನಾ ಮತ್ತಷ್ಟು ಶಾಂತಿಕಂಟಕನಾಗಿ ಬೆಳೆದ ಮೇಲೆ ಅಮೆರಿಕಾದ ಕಣ್ಣು ತೆರೆದಿದೆ, ಅದು ತೆರೆದರೆ ಮಾತ್ರ ಜಗತ್ತಿನ ಕಣ್ಣೂ ತೆರೆದಂತೆ. ಚೀನಾದ ವಿಸ್ತಾರವಾದವನ್ನು ಎಲ್ಲಗೂ ಗುರುತಿಸಿ ಖಂಡಿಸುತ್ತಿದ್ದಾರೆ, ಅದನ್ನು ತಡೆಯಲು ತಂತ್ರಗಳನ್ನು ರೂಪಿಸುತ್ತಿದ್ದಾರೆ, ಊರೆಲ್ಲಾ ಸೂರೆಹೋದ ಮೇಲೆ ದಿಡ್ಡಿಬಾಗಿಲು ಮುಚ್ಚಿದಂತೆ. ಹಿಂದೆ ಮೋದಿಯವರು ಎಚ್ಚರಿಸಿದಾಗಲೇ ಜಗತ್ತು ಎಚ್ಚೆತ್ತುಕೊಂಡಿದ್ದರೆ…!
ಈಗಿಲ್ಲಿ ನನಗೆ ಇಂದಿರಾ ಗಾಂಧಿ ಗಾಢವಾಗಿ ನೆನಪಾಗುತ್ತಾರೆ. ಪಾಕಿಸ್ತಾನದ ಭಯೋತ್ಪಾದನಾ ಕೃತ್ಯಗಳ ಬಗ್ಗೆ ಜಗತ್ತಿನ ಗಮನ ಸೆಳೆಯಲು ಮೊದಲು ಪ್ರಯತ್ನಿಸಿದ್ದೇ ಅವರು. ಆದರೆ ಆಗ ಅವರ ಮಾತನ್ನು ಕೇಳಲು ಯಾರೂ ತಯಾರಿರಲಿಲ್ಲ. ನಂತರ ನರಸಿಂಹರಾವ್​ ಸಹ ಪ್ರಯತ್ನಿಸಿ ಸೋತರು. ಕೊನೆಗೆ ಅದೇ ಮಾತನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವಾಜಪೇಯಿ ಹೇಳುವ ಹೊತ್ತಿಗೆ ಸರಿಯಾಗಿ ಪಾಕ್​-ಪ್ರೇರಿತ ಅಂತಾರಾಷ್ಟ್ರೀಯ ಭಯೋತ್ಪಾದನೆ ನಿಗ್ರಹಿಸಲಾಗದ ಮಟ್ಟಕ್ಕೆ ಬೆಳೆದು ಅಮೆರಿಕಾದ ಮೂತಿಗೇ ಇಕ್ಕಡಿಸಿತ್ತು. ಅದಕ್ಕೆ ಎರಡು ದಶಕಗಳ ಹಿಂದೆಯೇ ಇಂದಿರಾ ಎಚ್ಚರಿಸಿದಾಗ ಅಮೆರಿಕಾ ಎಚ್ಚೆತ್ತುಕೊಂಡಿದ್ದರೆ…!
ಇರಲಿ, ಶಂಖದಲ್ಲಿ ಕೊಟ್ಟರೇ ತೀರ್ಥವಂತೆ. ಮೊದಲಿಗೆ ಪಾಕಿಸ್ತಾನ ನಂತರ ಚೀನಾ ತಮ್ಮ ನಡೆಗಳು ಇಂದಿರಾ ಮತ್ತು ಮೋದಿ ಹೇಳಿದಂತೇ ಇವೆ ಎಂದು ಮಾಡಿ ತೋರಿಸಿದ ಮೇಲೆ ಜಗತ್ತು ಎಚ್ಚೆತ್ತುಕೊಂಡಿದೆ. ನಿಯಮಾಧಾರಿತ ಜಾಗತಿಕ ವ್ಯವಸ್ಥೆ ಇರಬೇಕು, ಯಾವುದೇ ಒಂದು ದೇಶ ತನಗೆ ಮಾತ್ರ ಅನುಕೂಲವಾಗುವಂತೆ ನಿಯಮಗಳನ್ನು ರೂಪಿಸಿ ಇತರರ ಮೇಲೆ ಹೇರಬಾರದು, ಅದಕ್ಕೆ ಅವಕಾಶವಿರಲೂಕೂಡದು ಎಂಬ ಮೋದಿಯವರ ಮಾತು ಕ್ವಾಡ್​ ಸಮಾವೇಶದಲ್ಲಿ ಜಗತ್ತಿಗೇ ಕೇಳುವಂತೆ ಪ್ರತಿಧ್ವನಿಸಿದೆ. ಈ ವರ್ಷಕ್ಕೆ ಇಷ್ಟು ಸಾಧನೆ ಸಾಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
