ಅಯೋಧ್ಯೆ:ಇಂದು ಉತ್ತರಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ‘ಪ್ರಾಣ ಪ್ರತಿಷ್ಠಾ’ ಸಮಾರಂಭವು ಅದ್ದೂರಿಯಾಗಿ ನಡೆಯುತ್ತಿದ್ದು, ದೇಶದ ಜನತೆ ಹಾಗೂ ಗಣ್ಯಾತಿ ಗಣ್ಯರು ಸಂಭ್ರಮದಲ್ಲಿ ಪಾಲ್ಗೊಂಡು ರಾಮನ ದರ್ಶನಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಆದ್ರೆ, ಭಾರತದಿಂದ ಹೋಗಿ ಅನ್ಯ ದೇಶಗಳಲ್ಲಿ ನೆಲೆಸಿರುವ ಭಾರತೀಯರು ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಆಗದಿದ್ದರೂ ತಾವಿರುವ ಜಾಗದಿಂದಲೇ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಈ ಮಧ್ಯೆ ನ್ಯೂಯಾರ್ಕ್​ನಲ್ಲಿ ಭಾರೀ ಸಡಗರ ಮನೆಮಾಡಿದೆ.
ಇದನ್ನೂ ಓದಿ:ರಾಹುಲ್​ಗೆ ದೇವಸ್ಥಾನಕ್ಕೆ ನೋ ಎಂಟ್ರಿ: ನಾನು ಮಾಡಿದ ತಪ್ಪಾದ್ರೂ ಏನು? ಬೇಸರ ಹೊರಹಾಕಿದ ರಾಗಾ
ಅಮೆರಿಕಾದ ಮಿನ್ನೇಸೋಡಾದಲ್ಲಿನ ಹಿಂದೂ ದೇವಾಲಯದಲ್ಲಿ ಭಾರತೀಯ ವಲಸಿಗರು ರಾಮ ಭಜನೆಯನ್ನು ಹಾಡಿ, ಭಕ್ತಿಯಿಂದ ಸ್ಮರಿಸಿದ್ದಾರೆ. ಇದರ ಜತೆಗೆ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ರಾಮ ಜನ್ಮಭೂಮಿ ಸ್ಥಾಪನಾ ಸಮಿತಿಯು ಅಪಾರ ಸಂಖ್ಯೆಯ ಭಕ್ತಾಧಿಗಳಿಗೆ ವಿಶೇಷ ಕಾರ್ಯಕ್ರವನ್ನು ಆಯೋಜಿಸುವ ಮೂಲಕ ಹಲವು ವ್ಯವಸ್ಥೆಗಳನ್ನು ಮಾಡಿದೆ.
#WATCH| New York, US: Laddoos distributed by the members of Overseas Friends of Ram Mandir at Times Square ahead of Ayodhya's Ram Temple Pran Pratishtha ceremony, later today.pic.twitter.com/FjRGCE7a91
— ANI (@ANI)January 22, 2024

‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೂ ಮುನ್ನ ಅಮೆರಿಕದಾದ್ಯಂತ ಸಂಭ್ರಮಾಚರಣೆ ಶುರುವಾಗಿದ್ದು, ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ‘ಓವರ್ಸೀಸ್ ಫ್ರೆಂಡ್ಸ್ ಆಫ್ ರಾಮ್ ಮಂದಿರ’ ಸದಸ್ಯರು ಸ್ಥಳೀಯರಿಗೆ ಸಿಹಿ ವಿತರಿಸಿ, ಸಂಭ್ರಮಿಸಿದ್ದಾರೆ.
ಇದನ್ನೂ ಓದಿ:BBKS10: ಸಂಗೀತಾ-ಕಾರ್ತಿಕ್ ಬಗ್ಗೆ ತನಿಷಾ ಹೇಳಿದ್ರು ‘ಬೆಂಕಿ’ ವಿಷಯ!
ಸಂಸ್ಥೆಯ ಸದಸ್ಯರಾದ ಪ್ರೇಮ್ ಭಂಡಾರಿ ಮಾತನಾಡಿ, “ಅಮೆರಿಕದಲ್ಲಿಯೂ ಈ ಕಾರ್ಯಕ್ರಮವನ್ನು ಹೆಚ್ಚು ಸಡಗರದಿಂದ ಆಚರಿಸಲಾಗುತ್ತಿದೆ. ನಮ್ಮೀ ಜೀವನ ಪೂರ ನಾವು ಈ ದಿವ್ಯ ದಿನವನ್ನು ನೋಡುತ್ತೀವಿ ಎಂದು ಅಂದುಕೊಂಡಿರಲಿಲ್ಲ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
BBKS10: ಸಂಗೀತಾ-ಕಾರ್ತಿಕ್ ಬಗ್ಗೆ ತನಿಷಾ ಹೇಳಿದ್ರು ‘ಬೆಂಕಿ’ ವಿಷಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 7 =
Remember me
