ಬೆಂಗಳೂರು:ಅಯೋಧ್ಯೆಯಲ್ಲಿನ ಸುದೀರ್ಘ ವಿವಾದ ಇತ್ಯರ್ಥಗೊಂಡ ಹಿನ್ನೆಲೆಯಲ್ಲಿ ಅಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು, ಅದಕ್ಕಾಗಿ ಟ್ರಸ್ಟ್​ ನಿರ್ಮಿಸಿ, ಯೋಜನೆಗಳನ್ನು ರೂಪಿಸಿರುವುದು ಈಗ ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯವೇ.
ಇತ್ತೀಚಿನ ಬೆಳವಣಿಗೆ ಎಂದರೆ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಭಕ್ತರಿಂದಲೂ ದೇಣಿಗೆ ಸಂಗ್ರಹಿಸುತ್ತಿರುವುದು. ಆ ನಿಟ್ಟಿನಲ್ಲಿ ವಿಶ್ವಹಿಂದೂಪರಿಷತ್ ಕೂಡ ಕಾರ್ಯನಿರತವಾಗಿದೆ. ಮಾತ್ರವಲ್ಲ ಶ್ರೀರಾಮಮಂದಿರಕ್ಕಾಗಿ ನಿಧಿ ಸರ್ಮಪಣೆ ಎಂಬ ಅಭಿಯಾನ ನಡೆಯುತ್ತಿದ್ದು, ಈಗಾಗಲೇ ಹಲವರು ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ತಮ್ಮ ಕೈಲಾದ ನೆರವು ನೀಡಲಾರಂಭಿಸಿದ್ದಾರೆ.
ಈಗ ನಟಿ ಪ್ರಣೀತಾ ಸುಭಾಷ್​ ಶ್ರೀರಾಮಮಂದಿರಕ್ಕಾಗಿ ನಿಧಿ ಸರ್ಮಪಣೆ ಮಾಡಿರುವುದಲ್ಲದೆ, ಇತರರೂ ನಿಧಿ ಸಮರ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ನಾನು ಅಯೋಧ್ಯೆಯ ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ, ರಾಮ ಮಂದಿರ ನಿಧಿ ಸಮರ್ಪಣ ಅಭಿಯಾನದ ಅಂಗವಾಗಿ 1 ಲಕ್ಷ ರೂ. ನೀಡಿದ್ದೇನೆ. ಶ್ರೀರಾಮ ಮಂದಿರ ನಿರ್ಮಾಣದಂಥ ಐತಿಹಾಸಿಕ ಕಾರ್ಯಕ್ರಮಕ್ಕೆ ತಾವೂ ನಿಧಿ ಸಮರ್ಪಿಸುವ ಮೂಲಕ ಕೈಜೋಡಿಸಬೇಕು ಎಂದು ಪ್ರಣೀತಾ ಕೋರಿಕೊಂಡಿದ್ದಾರೆ.
I’m making a humble initial pledge of Rs 1 lakh for the Ayodhya Ram Mandir nidhi samarpana abhiyaana. Requesting all of you to come join hands and be a part of this historic movement#RamMandirNidhiSamarpanpic.twitter.com/1mpTGan9q8
— Pranitha Subhash (@pranitasubhash)January 12, 2021

ಮೆಕಾನಿಕಲ್​ ಇಂಜಿನಿಯರಿಂಗ್​ನಲ್ಲಿ ಚಿನ್ನದ ಪದಕ ಪಡೆದಿದ್ದ ಸ್ವಾಮಿ ಹರ್ಷಾನಂದ

ಹಿಂದು ಧರ್ಮ ಕುರಿತ ವಿಶ್ವಕೋಶದ ಸಂಕಲ್ಪ ಕೈಗೊಂಡಿದ್ದ ಸ್ವಾಮಿ ಹರ್ಷಾನಂದ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + nine =
Remember me
