ನವದೆಹಲಿ:ಭಾರತದಲ್ಲಿ ಪ್ರಸ್ತುತ ಮದುವೆ ಸೀಸನ್​ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರತಿದಿನ ನೂರಾರು ಮದುವೆಗಳು ನಡೆಯುತ್ತಿರುತ್ತವೆ. ವಿವಾಹಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಶೇರ್​ ಮಾಡಲಾಗುತ್ತಿದೆ. ಅವುಗಳಲ್ಲಿ ಕೆಲವೊಂದಿಷ್ಟು ವಿಡಿಯೋ ವಿಶೇಷ ಕಾರಣಗಳಿಂದಾಗಿ ವೈರಲ್​ ಆಗಿಬಿಡುತ್ತವೆ. ಇದೀಗ ಆ ಸಾಲಿಗೆ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.
ಮದುವೆಯ ವೇದಿಕೆಯಲ್ಲಿ ವರನನ್ನು ಕೆಣಕಲು ವಧುವಿನ ಕೆನ್ನೆ ಹಿಡಿದು ರೇಗಿಸಲು ಹೋದ ಸ್ನೇಹಿತನಿಗೆ ವರ ಕಪಾಳಮೋಕ್ಷ ಮಾಡಿರುವ ವಿಡಿಯೋ ಇದೀಗ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?ವರ ಮತ್ತು ವಧು ವೇದಿಕೆ ಮೇಲೆ ಕುಳಿತಿರುವುದನ್ನು ಕಾಣಬಹುದು. ಈ ವೇಳೆ ವಧು ಕುಳಿತಿದ್ದ ಕುರ್ಚಿಯ ಹಿಂದಿನಿಂದ ಬರುವ ವರನ ಸ್ನೇಹಿತನೊಬ್ಬ, ವಧುವಿನ ಕೆನ್ನೆಗೆ ಕೈಹಾಕಿ ಕೀಟಲೆ ಮಾಡಲು ಆರಂಭಿಸುತ್ತಾನೆ. ಇದರಿಂದ ವಧು ಅಸಮಾಧಾನಗೊಂಡಿರುವಂತೆ ಕಾಣುತ್ತಾನೆ. ಇದನ್ನು ನೋಡಿದ ವರ ತಕ್ಷಣ ಮೇಲೆದ್ದು ಸ್ನೇಹಿತನಿಗೆ ಕೆನ್ನೆಗೆ ಬಾರಿಸುತ್ತಾನೆ.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಆಶಿಕ್​ ಬಿಲ್ಲೋಟ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, ಈವರೆಗೂ 45 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಅಲ್ಲದೆ, 2 ಸಾವಿರಕ್ಕೂ ಹೆಚ್ಚು ಲೈಕ್ಸ್​ ಬಂದಿವೆ.
ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯ ಕಾಮೆಂಟ್​ ಮಾಡಿದ್ದಾರೆ. ಹೊಡೆಯುವ ಮೊದಲು ಎಚ್ಚರಿಕೆ ನೀಡಬೇಕಿತ್ತು ಎಂದು ನೆಟ್ಟಿಗನೊಬ್ಬ ಹೇಳಿದ್ದಾರೆ. ವಿಡಿಯೋ ನೋಡಿದರೆ ಸ್ಕ್ರಿಪ್ಟೆಡ್​ ಅನಿಸುತ್ತಿದೆ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸುತ್ತದೆ ಎಂಬುದನ್ನು ನಮಗೆ ಕಾಮೆಂಟ್​ ಮಾಡಿ ತಿಳಿಸಿ.(ಏಜೆನ್ಸೀಸ್​)
A post shared by Ashiq Billota Official (@ashiq.billota)

ಬೆಂಗ್ಳೂರು ಏರ್​​ಪೋರ್ಟ್​ನಲ್ಲಿ 54 ಪ್ರಯಾಣಿಕರನ್ನು ಬಿಟ್ಟು ವಿಮಾನ ಟೇಕಾಫ್​ ಪ್ರಕರಣ: ಗೋಫಸ್ಟ್​ ಸಂಸ್ಥೆಗೆ 10 ಲಕ್ಷ ರೂ. ದಂಡ

ಮಕ್ಕಳಿಬ್ಬರನ್ನು ಕೊಂದು ಪತ್ನಿಯೊಂದಿಗೆ ಸಾವಿನ ಶರಣಾದ ಬಿಜೆಪಿ ನಾಯಕ: ಟ್ವೀಟ್​ನಲ್ಲಿತ್ತು ಸಾವಿನ ರಹಸ್ಯ

ಈತನ ಪತ್ತೆಗೆ ಸುಳಿವು ಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + one =
Remember me
