ಪಟನಾ:ಚುನಾವಣಾ ತಂತ್ರಗಾರ ಹಾಗೂ ರಾಜಕಾರಣಿ ಪ್ರಶಾಂತ್ ಕಿಶೋರ್ ವಿರುದ್ಧ ಪಟನಾ ಪೊಲೀಸರು ಕೃತಿಚೌರ್ಯ ಆರೋಪದ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ.
ಕಿಶೋರ್ ತಮ್ಮ ‘ಬಾತ್ ಬಿಹಾರ್ ಕೀ’ (ಬಿಹಾರದ ವಿಚಾರ) ಪ್ರಚಾರದಲ್ಲಿ ಕೃತ ಚೌರ್ಯ ಮಾಡಿದ್ದಾರೆ ಎಂಬ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ 420 (ವಂಚನೆ ಹಾಗೂ ಅಪ್ರಾಮಾಣಿಕತೆ) ಮತ್ತು 406 (ವಿಶ್ವಾಸದ್ರೋಹಕ್ಕೆ ಶಿಕ್ಷೆ) ವಿಧಿಗಳನ್ವಯ ಎಫ್​ಐಆರ್ ದಾಖಲಿಸಲಾಗಿದೆ. ಮೋತಿಹಾರಿ ನಿವಾಸಿ ಶಾಶ್ವತ್ ಗೌತಮ್ ಎನ್ನುವವರು ಪಾಟಲೀಪುತ್ರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ‘ತಾನು ಕೂಡ ಇದೇ ಯೋಜನೆ ಬಗ್ಗೆ ಕೆಲಸ ಮಾಡುತ್ತಿದ್ದು ಸದ್ಯವೇ ಅದನ್ನು ಆರಂಭಿಸಲಾಗುತ್ತದೆ. ಪ್ರಶಾಂತ್ ಕಿಶೋರ್ ತನ್ನ ಯೋಜನೆಯಿಂದ ಕೆಲವು ಅಂಶಗಳನ್ನು ನಕಲು ಮಾಡಿದ್ದಾರೆ’ ಎಂಬುದು ಗೌತಮ್ ಆರೋಪವಾಗಿದೆ.
‘ಬಿಹಾರ್ ಕೀ ಬಾತ್’ ಎಂಬ ವೆಬ್​ಸೈಟ್​ನ್ನು ತಾನು ಜನವರಿಯಲ್ಲಿ ನೋಂದಾಯಿಸಿದ್ದು ಕಿಶೋರ್ ಫೆಬ್ರವರಿಯಲ್ಲಿ ಪೋರ್ಟಲ್ ಆರಂಭಿಸಿದ್ದಾರೆ. ಅವರಿಗೆ ಒಸಾಮಾ ಎನ್ನುವವರು ನೆರವಾಗಿದ್ದಾರೆ ಎಂದು ಗೌತಮ್ ಹೇಳಿದ್ದಾರೆ. ತನ್ನೊಂದಿಗೆ ಯೋಜನೆಯಲ್ಲಿ ಭಾಗಿಯಾಗಿದ್ದ ಒಸಾಮಾ, ತನ್ನ ಪರಿಕಲ್ಪನೆ ಹಾಗೂ ವಿಚಾರಗಳನ್ನು ಕಿಶೋರ್​ರೊಂದಿಗೆ ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 15 =
Remember me
