ಮುಂಬೈ:ಅಡ್ವರ್ಟೈಸಿಂಗ್​ ಏಜೆನ್ಸೀಸ್​ ಅಸೋಸಿಯೇಶನ್​ ಆಫ್​ ಇಂಡಿಯಾ (ಎಎಎಐ) ಸಂಸ್ಥೆಯ ಅಧ್ಯಕ್ಷರಾಗಿ 2023&24ನೇ ಸಾಲಿಗೆ ಗ್ರೂಪ್​ ಎಂ ಮೀಡಿಯಾ ಇಂಡಿಯಾ ಪೆವೇಟ್​ ಲಿಮಿಟೆಡ್​ನ ದಕ್ಷಿಣ ಏಷ್ಯಾ ಸಿಇಒ ಪ್ರಶಾಂತ್​ ಕುಮಾರ್​ ಇತ್ತೀಚೆಗೆ ಪುನರಾಯ್ಕೆಯಾಗಿದ್ದಾರೆ. ಹವಾಸ್​ ಇಂಡಿಯಾ ಗ್ರೂಪ್​ ಸಿಇಒ ರಾಣಾ ಬರುವಾ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಮ್ಯಾಡಿಸನ್​ ಕಮ್ಯುನಿಕೇಶನ್ಸ್​ನ ಸ್ಯಾಮ್​ ಬಲ್ಸಾರಾ, ಎವರೆಸ್ಟ್​ ಬ್ರಾಂಡ್​ ಸೊಲ್ಯೂಷನ್ಸ್​ನ ತಾನ್ಯಾ ಗೋಯೆಲ್​, ಮ್ಯಾಟ್ರಿಕ್ಸ್​ ಪಬ್ಲಿಸಿಟೀಸ್​ ಆ್ಯಂಡ್​ ಮೀಡಿಯಾದ ವಿಷನ್​ದಾಸ್​ ಹರದಾಸಾನಿ, ಹವಾಸ್​ ಮೀಡಿಯಾ ಇಂಡಿಯಾದ ಮೋಹಿತ್​ ಜೋಶಿ, ಕ್ರೇಯಾನ್ಸ್​ ಅಡ್ವರ್ಟೈಸಿಂಗ್​ನ ಕುನಾಲ್​ ಲಾಲಾನಿ, ಮೈತ್ರಿ ಅಡ್ವರ್ಟೈಸಿಂಗ್​ ವರ್ಕ್ಸ್​ನ ಚಂದ್ರಮೌಳಿ ಮುತ್ತು, ಬೀಹೈವ್​ ಕಮ್ಯುನಿಕೇಶನ್ಸ್​ ಶ್ರೀಧರ್​ ರಾಮಸುಬ್ರಮಣ್ಯನ್​, ಪ್ಲಾಟಿನಂ ಅಡ್ವರ್ಟೈಸಿಂಗ್​ನ ವಿಕ್ರಮ್​ ಸಖೂಜಾ, ಸ್ಲೋಕಾ ಅಡ್ವರ್ಟೈಸಿಂಗ್​ನ ಕೆ. ಶ್ರೀನಿವಾಸ್​ ಆಯ್ಕೆಯಾಗಿದ್ದಾರೆ.
ಎಎಎಐನ ನಿಕಟಪೂರ್ವ ಅಧ್ಯಕ್ಷೆಯಾಗಿದ್ದ ಪಬ್ಲಿಸಿಸ್​ ಗ್ರೂಪ್​ ದಕ್ಷಿಣ ಏಷ್ಯಾ ಚೀಫ್​ ಎಕ್ಸಿಕ್ಯೂಟಿವ್​ ಅನುಪ್ರಿಯಾ ಆಚಾರ್ಯ ಪದನಿಮಿತ್ತ ಸದಸ್ಯರಾಗಿರುತ್ತಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಶಾಂತ್​ಕುಮಾರ್​, “ಸಂಸ್ಥೆ ಈಗಾಗಲೇ ಹಲವು ಸಾಧನೆಗಳನ್ನು ಮಾಡಿದ್ದರೂ, ಸಾಧಿಸಬೇಕಾದದ್ದು ಇನ್ನೂ ಬಹಳಷ್ಟಿದೆ. ಉದ್ಯಮದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಎಲ್ಲರೂ ಸೇರಿ ಶ್ರಮಿಸೋಣ’ ಎಂದು ಹೇಳಿದರು.
ಉಪಾಧ್ಯಕ್ಷ ರಾಣಾ ಬರುವಾ ಮಾತನಾಡಿ, “ಮಾಧ್ಯಮಗಳು, ಗ್ರಾಹಕರು ಮತ್ತು ಜಾಹೀರಾತು ಸಂಸ್ಥೆಗಳು ಈ ಮೂರೂ ಟಕಗಳಿಗೆ ಲಾಭ ತರುವಂತಹ ಪರಿಣಾಮಕಾರಿ ಬದಲಾವಣೆಗಳನ್ನು ಮಾಡುವ ಗುರಿ ಇದೆ. ಆ ಮೂಲಕ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಪರಿವರ್ತನೆ ಸಾಧ್ಯ’ ಎಂದು ತಿಳಿಸಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 + 13 =
Remember me
