ಬೆಂಗಳೂರು:ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ರೇಣುಕಸ್ವಾಮಿ ಎನ್ನುವ ವ್ಯಕ್ತಿಯೊರ್ವ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂದು ಹತ್ಯೆ ಮಾಡಿದ ಆರೋಪ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಮೇಲಿದೆ. ಸದ್ಯ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್​ ಠಾಣೆಯಲ್ಲಿ ದರ್ಶನ್ ಹಾಗೂ ಅವರ ಸಹಚರರು ಇದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಬಂಧನವಾಗಿದ್ದರೂ ಅವರ ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿರುವ ಬಗ್ಗೆ ಇತ್ತೀಚೆಗೆ ನಟ ಪ್ರಥಮ್‌ ಕಿಡಿಕಾರಿದ್ದರು. ನನಗೆ ಒಂದು ವಾರ ಪೊಲೀಸ್‌ ಕಾನ್‌ಸ್ಟೇಬಲ್‌ ಆಗಲು ಅವಕಾಶ ಕೊಟ್ಟರೆ, ದರ್ಶನ್‌ ಅಂಧ ಅಭಿಮಾನಿಗಳಿಗೆ ನಾಯಿಗೆ ಹೊಡೆದಂಗೆ ಹೊಡೆಯುತ್ತೇನೆ. ಆ ಪೊಲೀಸ್‌ ಸ್ಟೇಷನ್‌ ಬಳಿ ಇದ್ದವರಲ್ಲಿ ಒಬ್ಬನಾದರೂ ಅವರ ತಾಯಿಗೆ ಒಂದು ಹೊತ್ತು ಊಟ ಕೊಡಿಸಲು ಯೋಗ್ಯತೆ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದರು.  ಹೀಗಾಗಿ ಪ್ರಥಮ್‌ ವಿರುದ್ಧ ದರ್ಶನ್‌ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
ದರ್ಶನ್​ ಅಭಿಮಾನಿಗಳಿಂದ ಬರುವ ಬೆದರಿಕೆ ಕರೆ ಬಗ್ಗೆ ನಟ ಪ್ರಥಮ್ ಖಾಸಗಿವಾಹಿನಿ ಜತೆ​ ಮಾತನಾಡಿ,ಏಯ್​ ನಿನ್​ ತಲೆ ತೆಗಿತೀನಿ ಎಂದು ಎರಡೂವರೆ ರಾತ್ರಿಗೆ ಫೋನ್​ ಮಾಡ್ತಾರೆ. ಮಲಗಿದ್ರು ಪರವಾಗಿಲ್ಲ. ಎದ್ದೇಳಿಸಿ ಅವರಿಗೆ ಫೋನ್​ ಕೊಡಿ. ಆಫೀಸ್​​ ನಂಬರ್​ ಎಂದರೆ, ಅವೆಲ್ಲ ಗೊತ್ತಿಲ್ಲ ಪ್ರಥಮ್​ ಫೋನ್​ ಕೊಡಿ ಎಂದು ಎರಡೂವರೆ ರಾತ್ರಿಯಲ್ಲಿ ಪೆದ್ದನ ಹಾಗೆ ಫೋನ್​ ಮಾಡ್ತಾನೆ’ ಎಂದು ಪ್ರಥಮ್​ ತನಗೆ ಬಂದ ಬೆದರಿಕೆ ಕರೆ ಬಗ್ಗೆ ಹೇಳಿದ್ದಾರೆ.
‘ಕಾನೂನು ಕಾನೂನು ರೀತಿಯಲ್ಲಿ ಕೆಲಸ ಮಾಡುತ್ತದೆ. ಪೊಲೀಸರು ಪೊಲೀಸ್​ ರೀತಿಯಲ್ಲಿ ಕೆಲಸ ಮಾಡ್ತಾರೆ. ಲಾಯರ್​ ಕೋರ್ಟಲ್ಲಿ ಅವರು ಕೆಲಸ ಮಾಡ್ತಾರೆ. ಮಾಧ್ಯಮ ಮೈಕ್​ ಹಿಡಿದುಕೊಂಡು ಕೆಲಸ ಮಾಡ್ತಾರೆ. ನೀವು ಆರಾಮವಾಗಿ ಇದ್ದುಕೊಂಡು ಅಪ್ಪ-ಅಮ್ಮನ ನೋಡಿಕೊಂಡು ಚೆನ್ನಾಗಿ ಕೆಲಸ ಮಾಡಿ ಎಂದು ಅಭಿಮಾನಿಗಳಿಗೆ ಪ್ರಥಮ್​ ಹೇಳಿದ್ದಾರೆ.
ಅಂದಾಭಿಮಾನಿಗಳು ಹಾಳಾದವು ಅಲ್ಲಿ ಕುಳಿತುಕೊಂಡು ರೋಡ್​ ಬ್ಲಾಕ್​ ಮಾಡುತ್ತವೆ. ನಾಲ್ಕು ತದ್ಕಿ ಕಳ್ಸಿ ಎಂದು ಅಂದಾಭಿಮಾನಿಗಳಿಗೆ ಹೇಳಿದೆ. ಆದರೆ ಇವರಿಗ್ಯಾಕೆ ಕೋಪ ಬರ್ತಾ ಇದೆ ಅಂತ ಅರ್ಥ ಆಗ್ತಾ ಇಲ್ಲ ಎಂದು ಹೇಳಿದ್ದಾರೆ.
ದರ್ಶನ್‌ ಅಭಿಮಾನಿಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜ್ಞಾನಭಾರತಿ ನಗರ ಪೊಲೀಸ್ ಠಾಣೆಗೆ ಪ್ರಥಮ್‌ ದೂರು ನೀಡಿದ್ದಾರೆ.
ಉಮಾಪತಿ ಅವ್ರೆ.. ಡಿ ಬಾಸ್ ಬಂದ್ಮೇಲೆ ಉತ್ತರ ಸಿಗುವ ರೀತಿಯಲ್ಲೇ ಸಿಗುತ್ತೆ..ಬೆದರಿಕೆ ಹಾಕಿದ್ರು ದಚ್ಚು ಫ್ಯಾನ್ಸ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 1 =
Remember me
