ಹೈದರಾಬಾದ್:ಹೈದರಾಬಾದ್​​ನಲ್ಲಿ ಜೋಡಿಯೊಂದು ಪೊಲೀಸ್ ಸಮವಸ್ತ್ರವನ್ನು ಧರಿಸಿ ಪ್ರೀ ವೆಡ್ಡಿಂಗ್ ಶೂಟ್​​ ಮಾಡಿಸಿದ್ದು, ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ಸಿನಿಮಿಯ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಹಿಳಾ ಸಬ್ ಇನ್ಸ್‌ಪೆಕ್ಟರ್ ಕೆ ಭಾವನಾ ಅವರು ಪ್ರಸ್ತುತ ರಾಜ್ಯದ ಮೊದಲ ಮಾದರಿ ಪೊಲೀಸ್ ಠಾಣೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪುಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿದ್ದಾರೆ ಮತ್ತು ಅವರ ಪತಿ ಸಶಸ್ತ್ರ ಮೀಸಲು ಪಡೆಯ ಎಸ್‌ಐ ರಾವೂರಿ ಕಿಶೋರ್. ಈ ಜೋಡಿ ಆಗಸ್ಟ್ 26 ರಂದು ವಿವಾಹವಾದರು.
A pre-wedding shoot of a#PoliceCouple, at the premises of Punjagutta police station in#Hyderabad.
The pre-wedding video song had a sequence which shows the duo entering the police station premises wearing police uniforms and in police vehicles.#PreWeddingShootpic.twitter.com/SEMRTLXxBs
— Surya Reddy (@jsuryareddy)September 16, 2023

ವಿಡಿಯೋದಲ್ಲಿ ಏನಿದೆ?:ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಪೊಲೀಸ್ ವಾಹನಗಳಿಂದ ಪೊಲೀಸ್ ದಂಪತಿ ಪ್ರತ್ಯೇಕವಾಗಿ ಇಳಿಯುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಆ ನಂತರ ಚಾರ್ಮಿನಾರ್ ಮತ್ತು ಲಾಡ್ ಬಜಾರ್ ಬಳಿ ದಂಪತಿ ಕಾಣಿಸಿಕೊಂಡಿದ್ದಾರೆ. ಸ್ಲೋ-ಮೋಷನ್ ಶಾಟ್‌ಗಳು ಮತ್ತು ಡ್ಯಾನ್ಸ್ ಸೀಕ್ವೆನ್ಸ್‌ಗಳೊಂದಿಗೆ ವಿಡಿಯೋ ಎಲ್ಲರನ್ನೂ ಆಕರ್ಷಿಸಿದೆ. ಇಬ್ಬರು ಸಮವಸ್ತ್ರವನ್ನು ಧರಿಸಿ ಪೊಲೀಸ್ ವಾಹನಗಳಲ್ಲಿ ಪೊಲೀಸ್ ಠಾಣೆ ಆವರಣವನ್ನು ಪ್ರವೇಶಿಸುವುದನ್ನು ತೋರಿಸುತ್ತದೆ. ಇದು ಅಧಿಕಾರ ಮತ್ತು ಸಮವಸ್ತ್ರದ ದುರುಪಯೋಗ ಎಂದು ಹಲವಾರು ನಾಗರಿಕರಿಂದ ಟೀಕೆಗೆ ಗುರಿಯಾಗಿತ್ತು.ಕೆಲವರು ಶ್ಲಾಘಿಸಿದರೆ, ಕೆಲವರು ತಮ್ಮ ವೈಯಕ್ತಿಕ ವಿಡಿಯೋಗಳಿಗೆ ಪೊಲೀಸ್ ವಾಹನಗಳನ್ನು ಹೇಗೆ ಬಳಸುತ್ತಾರೆ ಎಂದು ಪ್ರಶ್ನಿಸಿದರು.
ಬಳಕೆದಾರರೊಬ್ಬರು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಅವರನ್ನು ಟ್ಯಾಗ್ ಮಾಡಿ ‘ಸರ್ ಇದು ಏನು? ಪ್ರೀ ವೆಡ್ಡಿಂಗ್ ಶೂಟ್‌ಗಳಿಗೆ ಪೊಲೀಸ್ ಠಾಣೆಗಳು ಲಭ್ಯವಿದೆಯೇ?’ ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋಗೆ ಹೈದರಾಬಾದ್ ಪೊಲೀಸರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.
Sleep Precautions: ಮನುಷ್ಯ ಎಷ್ಟು ಗಂಟೆ ನಿದ್ದೆ ಮಾಡಬೇಕು ಗೊತ್ತಾ?

Sign in to your account
Please enter an answer in digits:17 + 17 =
Remember me
