ಬೆಂಗಳೂರು:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತಂತೆ ಭವಿಷ್ಯ ರೂಪದ ವರ್ತಮಾನವೊಂದು ಇದೀಗ ಅವರ ಅಭಿಮಾನಿಗಳು, ಅನುಯಾಯಿಗಳಲ್ಲಿ ಆತಂಕ ಆವರಿಸುವಂತೆ ಮಾಡಿದೆ. ಇದು ಭವಿಷ್ಯ ಎನ್ನಲಾಗಿದ್ದರೂ ಅದಾಗಲೇ ಇದು ಕೆಲವರನ್ನು ಭೂತದಂತೆ ಕಾಡಲಾರಂಭಿಸಿದೆ.
ಅನಿರುದ್ಧ್ ಕುಮಾರ್ ಮಿಶ್ರಾ ಎಂಬ ಜ್ಯೋತಿಷಿ ನುಡಿದಿರುವ ಈ ಭವಿಷ್ಯಕ್ಕೆ ಸಂಬಂಧಿಸಿದಂತೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲ, ಹಲವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕುರಿತಂತೆ ಕಾಳಜಿ ವ್ಯಕ್ತಪಡಿಸಿ ಪ್ರಾರ್ಥಿಸಿಕೊಂಡಿದ್ದಾರೆ. ಇನ್ನು ಕೆಲವರು ಪ್ರಧಾನಿಯನ್ನು, ಮತ್ತೆ ಕೆಲವರು ಕೇಂದ್ರ ಗೃಹಸಚಿವರನ್ನು ಮೆನ್ಷನ್ ಮಾಡಿ ಗಮನ ಸೆಳೆಯಲು ಯತ್ನಿಸಿದ್ದಾರೆ. ಮಾತ್ರವಲ್ಲ 3 ಗಂಟೆಗಳಲ್ಲಿ 96 ಸಾವಿರಕ್ಕೂ ಅಧಿಕ ಮಂದಿಯ ಗಮನವನ್ನು ಈ ಎಕ್ಸ್​ ಪೋಸ್ಟ್ ಸೆಳೆದಿದೆ.
‘ಪ್ರೀತಿಯ ಭಾರತದ ಪ್ರಧಾನಮಂತ್ರಿಯವರೇ.. ಒಂದೇ ತಿಂಗಳಲ್ಲಿ ಎರಡು ಗ್ರಹಣಗಳು ಬರಲಿವೆ, ನಿಮ್ಮ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ನಿಮ್ಮ ಸಹಾಯಕನ ವೇಷದಲ್ಲಿರುವ ಕೆಲವರು ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಾರೆ ಮತ್ತು ನಿಮಗೆ ಹಾನಿ ಮಾಡಲು ಸಹ ಪ್ರಯತ್ನಿಸಬಹುದು. ಜಾಗರೂಕರಾಗಿರಿ..’ ಎಂದು ಈ ಅನಿರುದ್ಧ್ ಕುಮಾರ್ ಮಿಶ್ರಾ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.
Dear Prime Minister of Bharat, as two eclipses are coming within the same month, it requires you remain cautious about your safety and health. Some person disguised as your aide will be actually spying upon you and can even attempt to harm you. Be cautious.pic.twitter.com/L7HHIr9I6y
— Anirudh Kumar Mishra (Astrologer) (@Anirudh_Astro)October 9, 2023

‘ಇಂಡಿಯಾ’ಗೇ ಗುಡ್​​ಬೈ ಹೇಳಿ ‘ಡಿಜಿಟಲ್ ಯುದ್ಧ’ಕ್ಕಿಳಿದ ಇಸ್ರೇಲಿಗ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − five =
Remember me
