ಕೊಚ್ಚಿ:ಖಾಸಗಿ ಬಸ್ಸಿನಿಂದ ಕೆಳಗೆ ಬಿದ್ದು ಅದೇ ಬಸ್​ ಮೇಲೆ ಹರಿದ ಪರಿಣಾಮ ಗರ್ಭಿಣಿ ನರ್ಸ್ ದುರಂತ ಸಾವಿಗೀಡಾಗಿರುವ ಘಟನೆ ಗುರುವಾರ ಕೇರಳದ ಅಲಪ್ಪುಝ ಜಿಲ್ಲೆಯಲ್ಲಿ ನಡೆದಿದೆ. ​
ಮೃತರನ್ನು ಶೆಲ್ಮಿ ಪೌಲೋಸ್​ (33) ಎಂದು ಗುರುತಿಸಲಾಗಿದ್ದು, ಎರ್ನಾಕುಲಂ ಜಿಲ್ಲೆ ನೆತ್ತೂರ್​ನಲ್ಲಿನ ಲೇಕೆಶೋರ್​ ಆಸ್ಪತ್ರೆಯಲ್ಲಿ ನರ್ಸ್​ ಆಗಿದ್ದರು. ಶೆಲ್ಮಿ ಈಗಾಗಲೇ ಇಬ್ಬರು ಮಕ್ಕಳ ತಾಯಿಯಾಗಿದ್ದು, ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದರು.
ಗುರುವಾರ ಬೆಳಗ್ಗೆ ಛಂಡಿರೋರ್​ ಬಳಿಯ ಅರೂರ್​ನಲ್ಲಿ ಅಪಘಾತ ಸಂಭವಿಸಿದೆ. ಕೆಲಸಕ್ಕೆಂದು ಶೆಲ್ಮಿ ಬಸ್​ ಹತ್ತುವಾಗ ಹಿಂಬಂದಿಯಿಂದ ಟ್ರಕ್​ ಒಂದು ಬಂದು ಬಸ್​ಗೆ ಗುದ್ದಿದೆ. ಫುಟ್​ಬೋರ್ಡ್​ನಲ್ಲಿದ್ದ ಶೆಲ್ಮಿ ಕೆಳಕ್ಕೆ ಬಿದ್ದಿದ್ದಾರೆ. ಇದೇ ವೇಳೆ ಬಸ್​ ಆಕೆಯ ಮೇಲೆ ಹರಿದಿದೆ. ಗಂಭೀರ ಗಾಯಗಳಿಂದ ಅದೇ ದಿನ ಶೆಲ್ಮಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ಮುಖದಂತಿರುವ ತಿರುಮಲ ಬೆಟ್ಟ: ಮತ್ತೆ ವೈರಲ್​ ಆಯ್ತು ಅದ್ಭುತ ಫೋಟೋ!
ಶೆಲ್ಮಿಯನ್ನು ಆಕೆಯ ಪತಿ ಬಸ್​ ನಿಲ್ದಾಣಕ್ಕೆ ಡ್ರಾಪ್​ ಮಾಡಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅಪಘಾತ ಸಂಭವಿಸಿದೆ. ಪತಿಯ ಕಣ್ಣೆದುರಲ್ಲೇ ಶೆಲ್ಮಿ ಕೊನೆಯುಸಿರೆಳೆದಿದ್ದಾರೆ. ವಯನಾಡು ಮೂಲದವರಾದ ಶೆಲ್ಮಿ ಹಲವು ವರ್ಷಗಳಿಂದ ಲಕೆಶೋರ್​ನಲ್ಲಿ ನರ್ಸ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ಛಂಡಿರೋರ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಪೊಲೀಸರು ಅಸ್ವಾಭವಿಕ ಸಾವು ಪ್ರಕರಣ ದಾಖಲಿಸಿದ್ದು, ಬಸ್​ಗೆ ಗುದ್ದಿದ ಟ್ರಕ್​ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಈವರೆಗೂ ಯಾರನ್ನೂ ಬಂಧಿಸಿಲ್ಲ. ಇದರ ನಡುವೆ ಟ್ರಕ್​ ಡ್ರೈವರ್​ ನಾಪತ್ತೆಯಾಗಿದ್ದಾನೆ.(ಏಜೆನ್ಸೀಸ್​)
ಅಸಭ್ಯವಾಗಿ ವರ್ತಿಸಿದ ಬಿಜೆಪಿ ಕಾರ್ಯಕರ್ತನ ಕಪಾಳಕ್ಕೆ ಖುಷ್ಬೂ ಬಾರಿಸಿದ್ರಾ? ಇದರ ನಿಜಾಂಶವೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
