ವಿಶಾಖಪಟ್ಟಣಂ:ಭಾರಿ ಗಾತ್ರದ​ ಬಂಡೆಯೊಂದು ಉರುಳಿ ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಮತ್ತು ಆಕೆಯ ಮೂರು ವರ್ಷದ ಮಗ ದಾರುಣವಾಗಿ ಸಾವಿಗೀಡಾಗಿರುವ ಘಟನೆ ವಿಶಾಖಪಟ್ಟಣಂ ನಗರದ ಗಣಪತಿನಗರದಲ್ಲಿ ನಡೆದಿದೆ.
ಮೃತರನ್ನು ಕೆ. ರಾಮಲಕ್ಷ್ಮಿ ಮತ್ತು ಮಗ ಜ್ಞಾನೇಶ್ವರ ಬಾಬು ಎಂದು ಗುರುತಿಸಲಾಗಿದೆ. ಬೆಟ್ಟದ ಹತ್ತಿರವಿರುವ ನಿವಾಸದಲ್ಲಿ ಭಾನುವಾರ ರಾತ್ರಿ ಮಲಗಿದ್ದಾಗ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ:ಕೆ.ಕಲ್ಯಾಣ್​ ಕುಟುಂಬಸ್ಥರಿಂದ ಆಸ್ತಿ ಕಬಳಿಕೆ: ವಾಲಿಯ ಆರು ಕೋಟಿ ರೂ ಆಸ್ತಿ ಜಪ್ತಿ
ಬೆಟ್ಟದಿಂದ ಉರುಳಿದ ಬೃಹತ್​ ಬಂಡೆ ಮನೆಗೆ ಡಿಕ್ಕಿ ಹೊಡೆದು ಅದರ ಮೇಲೆಯೇ ಹಾದು ಹೋಯಿತು. ಮನೆಯ ಮೇಲ್ಛಾವಣಿ ಮತ್ತು ಗೋಡೆ ಕುಸಿದ ಪರಿಣಾಮ ಸ್ಥಳದಲ್ಲೇ ತಾಯಿ ಮತ್ತು ಮಗ ಮೃತಪಟ್ಟರು. ರಾಮಲಕ್ಷ್ಮಿ ಪತಿ ಮತ್ತು ತಾಯಿ ಗಂಭೀರವಾಗಿ ಗಾಯಗೊಂಡರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿ, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಭಾನುವಾರದಿಂದ ವೈಜಾಗ್​ನ ಹಲವೆಡೆ ಭಾರಿ ಮಳೆ ಸುರಿದಿದ್ದು, ಮುನ್ನೆಚ್ಛರಿಕಾ ಕ್ರಮವಾಗಿ ಅನೇಕರನ್ನು ಸ್ಥಳಾಂತರಿಸಲಾಗಿದೆ.(ಏಜೆನ್ಸೀಸ್​)
ಖಾತೆ ಬದಲಾವಣೆ: ಸ್ಫೋಟಗೊಂಡ ಶ್ರೀರಾಮುಲು ಅಸಮಾಧಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − three =
Remember me
