ನವದೆಹಲಿ:ತಾನು ಮಾಡಬಾರದ್ದನ್ನು ಮಾಡಿದ್ದಲ್ಲದೆ ತುಂಬು ಗರ್ಭಿಣಿಯಾಗಿದ್ದ ಹೆಂಡತಿಯನ್ನು ಪತಿಯೇ ಜೀವಂತ ಸುಟ್ಟುಹಾಕಿರುವ ಪ್ರಕರಣವೊಂದು ವರದಿಯಾಗಿದೆ. ಬುಧವಾರ ಈ ಘಟನೆ ನಡೆದಿದ್ದು, ಸುಟ್ಟು ಕರಕಲಾದ ದೇಹದ ಮುಂದೆ ಬೀದಿನಾಯಿಗಳಿದ್ದಿದ್ದನ್ನು ಗುರುವಾರ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಈ ಅಪರಾಧ ಬೆಳಕಿಗೆ ಬಂದಿದೆ.
ಅಖಿಲೇಶ್ ನಿಷಾದ್ ಎಂಬಾತ ಆರೋಪಿ. ಆತನ ಪತ್ನಿ 24 ವರ್ಷದ ಅಂಜಲಿ ಕೊಲೆಗೀಡಾಗಿರುವ ಯುವತಿ. ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯ ನಿರ್ಜನ ಪ್ರದೇಶವೊಂದರಲ್ಲಿ ಈ ಪ್ರಕರಣ ನಡೆದಿದೆ. ಉನ್ನಾವೋದ ನಾತುಕೇಡ ನಿವಾಸಿ ಅಖಿಲೇಶ್​ ನಿಷಾದ್ ಹಾಗೂ ಕಾನ್ಪುರದ ನವಾಬ್​ಗಂಜ್ ನಿವಾಸಿ ಅಂಜಲಿಗೆ 12 ವರ್ಷಗಳ ಹಿಂದೆ ಮದುವೆಯಾಗಿತ್ತು.
ಇದನ್ನೂ ಓದಿ:ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
9 ತಿಂಗಳು ತುಂಬಿದ್ದ ಗರ್ಭಿಣಿ ಹೆಂಡತಿಯನ್ನು ಬುಧವಾರ ಆಸ್ಪತ್ರೆಗೆ ಎಂದು ಮನೆಯಿಂದ ಹೊರಡಿಸಿಕೊಂಡು ಹೋಗಿದ್ದ ಪತಿ, ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಇನ್​ಫ್ಲೇಮೇಬಲ್ ಲಿಕ್ವಿಡ್​ ಬಳಸಿ ಬೆಂಕಿ ಹಚ್ಚಿದ್ದಾನೆ. ಗುರುವಾರ ಬೆಳಗೆ ಕರಕಲಾದ ದೇಹದ ಸುತ್ತ ಬೀದಿನಾಯಿಗಳು ಸೇರಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸುಳಿವುಗಳ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಆರೋಪಿಯ ಮಾಹಿತಿ ಲಭಿಸಿದೆ.
ಇದನ್ನೂ ಓದಿ:‘ಅಧಿಕಾರಿಗಳೇ.. ಈ ರೀತಿ ಹಿಂಸೆ ಯಾರಿಗೂ ಕೊಡಬೇಡಿ..’ ಎಂದು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಕೆಎಸ್​ಆರ್​ಟಿಸಿ ನೌಕರ!
ಆರೋಪಿಯ ತಂದೆ ರಾಮ್​ ಗುಲಾಮ್​ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಆರೋಪಿ ಅಖಿಲೇಶ್​​ ಅನೈತಿಕ ಸಂಪರ್ಕ ಹೊಂದಿದ್ದ ವಿಚಾರ ಬೆಳಕಿಗೆ ಬಂದಿತ್ತು. ಈ ಸಂಬಂಧ ಅಂಜಲಿ ಆಗಾಗ ವಿರೋಧ ವ್ಯಕ್ತಪಡಿಸಿದ್ದಳು. ಅದೇ ವಿಚಾರಕ್ಕಾಗಿ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು ಎಂದು ಆರೋಪಿಯ ತಂದೆ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಅನೈತಿಕ ಸಂಬಂಧಕ್ಕೆ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಕೊಲೆ ನಡೆಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ತನ್ನನ್ನು ಜೀವಂತ ಹೂತು ಬಿಡಿ ಎಂದು ಮನೆಯವರಿಂದಲೇ ಮಣ್ಣು ಹಾಕಿಸಿಕೊಂಡ ಮಹಿಳೆ!; ಎಲ್ಲ ಶಿವನನ್ನು ಮೆಚ್ಚಿಸಲು…

ಈ ಥರ ಸಾಯಿಸೋ ಪ್ರಯತ್ನ ಇದುವರೆಗೂ ಯಾರೂ ಮಾಡಿರ್ಲಿಲ್ಲ! ಖತರ್ನಾಕ್​ ಸೇಲ್ಸ್​ಮ್ಯಾನ್​ ಕೊನೆಗೂ ಫೇಲಾದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
