ತೆಲಂಗಾಣ:ಆಕಸ್ಮಿಕವಾಗಿ ಎರಡನೇ ಮಹಡಿಯಿಂದ ಗರ್ಭಿಣಿಯೊಬ್ಬಳು ಬಿದ್ದು ಸಾವನ್ನಪ್ಪಿದ ಘಟನೆ ಚಂದನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಿಂಗಂಪಲ್ಲಿ ಗ್ರಾಮದ ವೆಂಕಟ್ ರೆಡ್ಡಿ ಕಾಲೋನಿಯ, ವೆಂಕಟ್ ರೆಡ್ಡಿ ಅವರು ಮೂರು ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ವೆಂಕಟ್ ರೆಡ್ಡಿ ಅವರ ಪುತ್ರಿ ಶ್ರೀನಿಖಾ ಅವರ ವಿವಾಹ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿತ್ತು. ಆಕೆ ಈಗ ಐದು ತಿಂಗಳ ಗರ್ಭಿಣಿ. ಎರಡು ದಿನಗಳ ಹಿಂದೆ ಕೊಂಡಾಪುರ ಏರಿಯಾ ಆಸ್ಪತ್ರೆಯಲ್ಲಿ ತಪಾಸಣೆಗೆಂದು ತಂದೆಯ ಮನೆಗೆ ಬಂದಿದ್ದಳು.
ಇದನ್ನೂ ಓದಿ:ಭಿಕ್ಷಾಟನೆ ಮಾಫಿಯಾ; ವೃದ್ಧರ ಬಳಿ ಭಿಕ್ಷೆ ಬೇಡಿಸುತ್ತಿದ್ದ ದಂಧೆಕೊರ ಅರೆಸ್ಟ್​​
ಗುರುವಾರ ಬೆಳಗ್ಗೆ 7.10ಕ್ಕೆ ಎದ್ದ ಶ್ರೀನಿಖಾ ವಾಕಿಂಗ್‌ಗಾಗಿ ಬಾಲ್ಕನಿಗೆ ಬಂದಿದ್ದಳು. ಸ್ವಲ್ಪ ಹೊತ್ತಿನ ನಂತರ ಕಣ್ಣುಗಳು ಮಂಜಾಗುತ್ತಿದೆ ಎಂದು ಹೇಳಿ ಮನೆಯೊಳಗೆ ಹೋಗುತ್ತಿದ್ದಳು. ಅಷ್ಟರಲ್ಲಿ ಶ್ರೀನಿಖಾ ಮೇಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ತಕ್ಷಣ ಕುಟುಂಬಸ್ಥರು ಮದೀನಗುಡಾದ ಶ್ರೀಕರ ಆಸ್ಪತ್ರೆಗೆ ಧಾವಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಚಂದಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೊಟ್ಟೆಯಲ್ಲಿರುವ ಮಗು ಮತ್ತು ತಾಯಿಯ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಫೋನ್‌ನಲ್ಲಿ ಮಾತನಾಡುತ್ತಾ ಸಿಎಂಗೆ ಸೆಲ್ಯೂಟ್ ಮಾಡಿದ ಎಎಸ್‌ಪಿ ವರ್ಗಾವಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 11 =
Remember me
