ಪಟ್ನಾ:ಬಾಲಿವುಡ್​ನ ಬ್ಲಾಕ್​ಬಸ್ಟರ್​ ಚಿತ್ರ 3 ಈಡಿಯಟ್ಸ್​ನಲ್ಲಿ ಬರುವ ಒಂದು ದೃಶ್ಯವನ್ನು ನಿಜ ಜೀವನದಲ್ಲಿ ಪುನರಾವರ್ತಿಸಲು ಹೋಗಿ ಗರ್ಭಿಣಿ ಒಬ್ಬರ ದಾರುಣ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಮಾಲತಿ ದೇವಿ(22) ಎಂದು ಗುರುತಿಸಲಾಗಿದ್ದು, ಪೂರ್ಣಿಯಾದ ಲೈನ್​ ಬಜಾರ್​ನಲ್ಲಿರುವ ಸಮರ್ಪಣ್​ ಹೆರಿಗೆ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ.
ಸೋಮವಾರ ಸಂಜೆ ಮಾಲತಿ ದೇವಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಪೂರ್ಣಿಯಾದ ಲೈನ್​ ಬಜಾರ್​ನಲ್ಲಿರುವ ಸಮರ್ಪಣ್​ ಹೆರಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಂಬಂಧಪಟ್ಟ ವೈದ್ಯೆ ಸೀಮಾ ಕುಮಾರಿ ರಜೆಯಲ್ಲಿದ್ದರು ಸಹ ಆಸ್ಪತ್ರೆಯ ಸಿಬ್ಬಂದಿ ಗರ್ಭಿಣಿಯನ್ನು ದಾಖಲಿಸಿಕೊಂಡಿದ್ದಾರೆ.
ಆಪರೇಷನ್​ ಥಿಯೇಟರ್​ಗೆ ಕರೆದೊಯ್ದ ಸಿಬ್ಬಂದಿ ಬಳಿಕ ವೈದ್ಯೆ ಸೀಮಾ ಕುಮಾರಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ನರ್ಸ್​ ಒಬ್ಬರಿಗೆ ವಿಡಿಯೋ ಕರೆ ಮಾಡಿದ ವೈದ್ಯೆ ಸೂಚನೆಗಳನ್ನು ನೀಡಿದ್ದಾರೆ. ಈ ವೇಳೆ ನರ್ಸ್​ ವೈದ್ಯೆ ಸೂಚನೆಯನ್ನು ತಪ್ಪಾಗಿ ಅರ್ಥೈಸಿಕೊಂಡು​ ರಕ್ತನಾಳವನ್ನು ಕತ್ತರಿಸಿದ ಪರಿಣಾಮ ಮಾಲತಿ ದೇವಿ ಅವಳಿ ಮಕ್ಕಳಿಗೆ ಜನುಮ ನೀಡಿ ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿ:VIDEO| ಹಾಲು ತರಲು ಹೋದ ವಕೀಲೆಯನ್ನು ಗುಂಡಿಕ್ಕಿ ಹತ್ಯೆ!
ಅವಳಿ ಮಕ್ಕಳಿಬ್ಬರು ಆರೋಗ್ಯಕರವಾಗಿದ್ದು, ತಾಯಿಯ ಮೃತಪಟ್ಟಿರುವ ವಿಚಾರ ತಿಳಿದು ಮಹಿಳೆಯ ಸಂಬಂಧಿಕರು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿ ಪೀಠೋಪಕರಣಗಳನ್ನು ಒಡೆದು ಹಾಕಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಖಜಾಂಚಿ ಪೊಲೀಸ್ ಠಾಣೆಯ​ ಅಧಿಕಾರಿಗಳನ್ನು​ ಪರಿಸ್ಥಿತಿಯನ್ನು ಹತ್ತೋಟಿಗೆ ತಂದಿದ್ಧಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಖಜಾಂಚಿ ಪೊಲೀಸ್​ ಠಾಣಾಧಿಕಾರಿ ರಂಜಿತ್​ ಕುಮಾರ್ ಮೃತರ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ನೀಡಿರುವ ದೂರನ್ನು ನಾವು ಸ್ವೀಕರಿಸಿದ್ದೇವೆ. ಪೂರ್ಣಿಯಾ ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿಗೆ ದೂರನ್ನು ರವಾನಿಸಲಾಗಿದ್ದು ಹೆರಿಗೆ ವೇಳೆ ನಿರ್ಲಕ್ಷ್ಯ ತೋರಿರುವ ಆಸ್ಪತ್ರೆ ಹಾಗು ಸಿಬ್ಬಂದಿ ವಿರುದ್ಧ FIR ದಾಖಲಿಸಲಾಗುವುದು ಎಂದು ತಿಳಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + nine =
Remember me
