ಹೈದರಾಬಾದ್:ಗರ್ಭಿಣಿಯರಿಗೆ ಬಯಕೆ ಹೆಚ್ಚಿರುತ್ತದೆಯಂತೆ. ಗರ್ಭವತಿ ಆಗಿರುವ ಸಮಯದಲ್ಲಿ ಗಂಡನ ಪ್ರೀತಿ ಎಷ್ಟಿದ್ದರೂ ಕಡಿಮೆ ಎನಿಸುತ್ತದೆಯಂತೆ. ಅದೇ ರೀತಿ ಗಂಡನಿಂದ ಪ್ರೀತಿಯನ್ನೇ ಬಯಸುತ್ತಿದ್ದ ಗರ್ಭಿಣಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.
ನಗರದ ಸುರರಾಮ್​ ಕಾಲೋನಿಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಸಿರಿಷಾ ಹೆಸರಿನ ಗರ್ಭಿಣಿ ನೇಣಿಗೆ ಶರಣಾದ ದುರ್ದೈವಿ. ಸಿರಿಷಾ ಹಾಗೂ ನಾಗಾರ್ಜುನ ದಂಪತಿಗೆ 2 ವರ್ಷದ ಒಬ್ಬಳು ಮಗಳಿದ್ದಾಳೆ. ಎರಡನೇ ಮಗುವನ್ನು ಸಿರಿಷಾ ಹೊಟ್ಟೆಯಲ್ಲಿ ಹೊತ್ತಿದ್ದು, ಏಳು ತಿಂಗಳ ಗರ್ಭವತಿಯಾಗಿದ್ದಳು. ತಿಂಗಳ ಸ್ಕ್ಯಾನಿಂಗ್​ಗಾಗಿ ಆಸ್ಪತ್ರೆಗೆ ಹೋಗಿಬರುತ್ತಿದ್ದ ಆಕೆ ಕಳೆದ ಕೆಲ ದಿನಗಳಿಂದ ಗಂಡನಿಗೆ ಆಸ್ಪತ್ರೆಗೆ ಹೋಗೋಣ ಎಂದು ಕೇಳುತ್ತಿದ್ದಳಂತೆ. ಆದರೆ ಆತ ಯಾವುದಾದರೂ ಕಾರಣ ಕೊಟ್ಟು ತಪ್ಪಿಸಿಕೊಳ್ಳುತ್ತಿದ್ದ. ಸತತ ಮೂರು ದಿನಗಳ ಕಾಲ ಗಂಡನನ್ನು ಪೀಡಿಸಿದ ಸಿರಿಷಾ ಮಂಗಳವಾರದಂದು ಮನನೊಂದು ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ.
ಮನೆಯ ಕೋಣೆಯಲ್ಲಿದ್ದ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಪ್ರಕರಣ ಹತ್ತಿರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. (ಏಜೆನ್ಸೀಸ್)
ಎಂಎಸ್​ಡಿ ಬರ್ತ್​ಡೇ ಸ್ಪೆಷಲ್: ಈ ಫೋಟೋದಲ್ಲಿ ಧೋನಿ ಎಲ್ಲಿದ್ದಾರೆ ಹುಡುಕಿ

ಇಂದು ಪ್ರಮಾಣ ವಚನ ಸ್ವೀಕರಿಸುವ ಸಚಿವರ ಪಟ್ಟಿ ಬಿಡುಗಡೆ; ಕರ್ನಾಟಕದ ನಾಲ್ವರಿಗೆ ಮಂತ್ರಿಗಿರಿ

ಅಣ್ಣನ ಪ್ರೀತಿಗೆ ಬಲಿಯಾದ ತಂಗಿ! ಅಪ್ಪ ಅಮ್ಮನ ಎದುರೇ ಮಗಳ ಗ್ಯಾಂಗ್​ರೇಪ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
