ಭೋಪಾಲ್​:ಅತ್ತೆ ಮತ್ತು ಪುಟಾಣಿ ಮಕ್ಕಳ ಮುಂದೆಯೇ ಗರ್ಭಿಣಿಯ ಅತ್ಯಾಚಾರ ಮಾಡಿರುವ ಘಟನೆ ಮಧ್ಯಪ್ರದೇಶದ ಬಂದರ್​ಗಢ್​ ಗ್ರಾಮದಲ್ಲಿ ನಡೆದಿದೆ. ಸಂತ್ರಸ್ತೆಯ ಕುಟುಂಬದ ಮೇಲೂ ಹಲ್ಲೆ ನಡೆಸಿರುವುದಾಗಿ ಹೇಳಲಾಗಿದೆ.
ಬಂದರ್​ಗಢ್​ ಗ್ರಾಮದ ನಿವಾಸಿಯಾಗಿರುವ ಬೈಜ್ನಾಥ್​ ಅದೇ ಊರಿನ ದಬಾಂಗ್​ ಪಟೇಲ್​ ಹೆಸರಿನ ಯಜಮಾನನ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಇತ್ತೀಚೆಗೆ ಬೈಜ್ನಾಥ್​ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಆತ ದಬಾಂಗ್​ ಪಟೇಲ್​ನ ಬಳಿ ಹೋಗಿ ರಜೆ ಕೇಳಿದ್ದಾನೆ. ಆದರೆ ಇದರಿಂದ ಸಿಟ್ಟಿಗೆದ್ದ ಆತ ಬೈಜ್ನಾಥ್​ ಮತ್ತು ಆತನ ಸಹೋದರ ಲಖನ್​ ಅಹಿರ್ವಾರ್​ ಮೇಲೆ ಹಲ್ಲೆ ನಡೆಸಿದ್ದಾನೆ. ವಿಪರೀತ ಹಲ್ಲೆಯಿಂದಾಗಿ ಪ್ರಾಣ ಉಳಿಸಿಕೊಳ್ಳಲು ಪರದಾಡಿ ಸಹೊದರರು ಕುಟುಂಬಸ್ಥರನ್ನು ಅಲ್ಲಿಯೇ ಬಿಟ್ಟು ಊರು ಬಿಟ್ಟು ತೆರಳಿದ್ದಾರೆ.
ಸಹೋದರರು ಊರು ಬಿಟ್ಟಿರುವುದರಿಂದಾಗಿ ದಬಾಂಗ್​ ಪಟೇಲ್​ ಇನ್ನಷ್ಟು ಕೋಪಗೊಂಡಿದ್ದಾನೆ. ಆತನ ಮನೆಗೆ ರೌಡಿಗಳನ್ನು ಕಳುಹಿಸಿದ್ದಾನೆ. ಆ ರೌಡಿಗಳು ಮನೆಯವರ ಮೇಲೆ ಹಲ್ಲೆ ಮಾಡಿದ್ದಾರೆ. ಗರ್ಭಿಣಿಯಾಗಿದ್ದ ಮಹಿಳೆಯ ಮೇಲೆ ಆಕೆಯ ಮಕ್ಕಳು ಮತ್ತು ಅತ್ತೆಯ ಸಮ್ಮುಖದಲ್ಲೇ ಅತ್ಯಾಚಾರವೆಸಗಿದ್ದಾರೆ. ನಂತರ ಅವರನ್ನೆಲ್ಲ ಕರೆದುಕೊಂಡು ಬಂದು ಮನೆಯ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಈ ವಿಚಾರ ಹೊರಗೆ ಹೋದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಆದರೆ ಕಟುಕರ ಕಣ್ತಪ್ಪಿಸಿಕೊಂಡು ಬಂದ ಸಂತ್ರಸ್ತೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆದಷ್ಟು ಬೇಗ ಆರೋಪಿಗಳನ್ನು ಹಿಡಿಯುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್)
ಕೊರಳಿಗೆ ಹಾರ ಹಾಕುತ್ತಿದ್ದಂತೆಯೇ ಪ್ರಾಣ ಬಿಟ್ಟ ವಧು! ಅಕ್ಕನ ಹೆಣವನ್ನು ರೂಮಿನಲ್ಲಿ ಮಲಗಿಸಿ ತಂಗಿಯ ಮದುವೆ!

ಅತ್ತೆಯ ಕುಪ್ಪಸದಿಂದ ಅವಳದ್ದೇ ಕತ್ತು ಹಿಸುಕಿದ ಸೊಸೆ! ಪೊದೆಯಲ್ಲಿ ಅಡಗಿತ್ತು ಮಗ ಸೊಸೆಯ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 14 =
Remember me
