ಕಾನ್ಪುರ್​:ಸ್ಟ್ರೆಚರ್​ ಸಿಗದ ಕಾರಣ ಗರ್ಭಿಣಿ ಮಹಿಳೆಯನ್ನು ಗಂಡನೊಬ್ಬ ಹೊತ್ತು ಸಾಗಿರುವ ಅಮಾನವೀಯ ಘಟನೆಯ ಉತ್ತರಪ್ರದೇಶದ ಕಾನ್ಪುರ್​ನಲ್ಲಿ ನಡೆದಿದೆ.
ಇದನ್ನೂ ಓದಿ:ಪ್ರಿಯಕರನಿಗಾಗಿ ಗಂಡ ಮಕ್ಕಳನ್ನು ತೊರೆದ ಹೆಂಡತಿ: ಕೆಲ ವರ್ಷಗಳ ಬಳಿಕ ಆಕೆಯನ್ನೇ ಹೊರಹಾಕಿದ ಪ್ರೇಮಿ..
ಘಟನೆಯ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಕಾನ್ಪುರದ ಮಹಿಳಾ ಜಿಲ್ಲಾ ಆಸ್ಪತ್ರೆಯದ್ದಾಗಿದೆ. ಇದನ್ನು ನೋಡಿದ ಎಲ್ಲರೂ ಸರ್ಕಾರಿ ಆರೋಗ್ಯ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಶನಿವಾರ ಬೆಳಗ್ಗೆ ಪತಿ ಗರ್ಭಿಣಿಯನ್ನು ಮಡಿಲಲ್ಲಿ ಹೊತ್ತು ಆಸ್ಪತ್ರೆಗೆ ಬಂದಿದ್ದು, ಆಕೆಯನ್ನು ಚಿಕಿತ್ಸೆಗಾಗಿ ವಾರ್ಡ್‌ಗೆ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

ಅಲ್ಲದೇ ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಯಾರೂ ಕಂಡಿಲ್ಲ. ಆಸ್ಪತ್ರೆಯ ಮುಖ್ಯ ಗೇಟ್‌ನಲ್ಲಿ ಸ್ಟ್ರೆಚರ್‌ಗಳನ್ನು ಇರಿಸಿ ವಾರ್ಡ್ ಬಾಯ್‌ಗಳು ರೋಗಿಗಳಿಗೆ ತ್ವರಿತ ಸೇವೆ ನೀಡಲು ಸಿದ್ಧರಾಗಿರಬೇಕಿತ್ತು. ಆದರೆ ಏನನ್ನು ಕಾಣದ ಪತಿಯು ಗರ್ಭಿಣಿಯನ್ನು ತನ್ನ ಮಡಿಲಲ್ಲಿ ಎತ್ತಿಕೊಂಡು ತುರ್ತು ಚಿಕಿತ್ಸೆ ಘಟಕಕ್ಕೆ ತಲುಪಿದ್ದಾನೆ ಎಂದು ಹೇಳಲಾಗಿದೆ.
ಗರ್ಭಿಣಿಯರ ಆರೋಗ್ಯ ರಕ್ಷಣೆಗಾಗಿ ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಕ್ಯಾಂಪಸ್‌ನಲ್ಲಿ 22 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಾದ ನಂತರವೂ ಡಫರಿನ್ ಆಸ್ಪತ್ರೆಯ ಸಿಬ್ಬಂದಿ ಯಾರಿಗೂ ಹೆದರುವುದಿಲ್ಲ. ವಾರ್ಡ್ ಬಾಯ್‌ಗಳು ಹಣ ನೀಡದೆ ಸ್ಟ್ರೆಚರ್ ನೀಡುವುದಿಲ್ಲ ಎಂದು ಅನೇಕ ಅಟೆಂಡರ್‌ಗಳು ಹೇಳಿದ್ದಾರೆ. ರೋಗಿಗೆ ಸ್ಟ್ರೆಚರ್ ಸಿಕ್ಕರೂ ವಾರ್ಡ್ ಬಾಯ್​ಗಳು ಗೇಟ್ ಬಳಿಯೇ ಇದ್ದರೂ ಸಹಾಯ ಮಾಡಲು ಮುಂದಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × five =
Remember me
