ಲಖನೌ:ಕುಡಿಯುವ ಚಟದ ವಿರುದ್ಧ ಪ್ರತಿಭಟಿಸಿದ್ದಕ್ಕೆ ಪಾಪಿ ಪತಿರಾಯನೊಬ್ಬ ಗರ್ಭಿಣಿ ಪತ್ನಿಯನ್ನು ಬೈಕ್​ ಕಟ್ಟಿ ಸುಮಾರು 200 ಮೀಟರ್ ಎಳೆದೊಯ್ದಿರುವ ಅಮಾನವೀಯ ಘಟನೆ​ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಘುಂಗ್ಚಾಯ್ ಗ್ರಾಮದಲ್ಲಿ ಶನಿವಾರ ನಡೆದಿದೆ.
ಆರೋಪಿ ಪತಿ ರಾಮ್​ಗೋಪಾಲ್​ನನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡಿರುವ ಆತನ ಪತ್ನಿ ಸುಮನ್ ಎಂಬಾಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವರದಿಗಳ ಪ್ರಕಾರ ರಾಮ್​ಗೋಪಾಲ್​ ಶನಿವಾರ ಮದ್ಯಪಾನ ಮಾಡಿ ಮನೆಗೆ ಬಂದಿದ್ದ. ಪತ್ನಿ ಸುಮನ್​ ಗಂಡನ ವಿರುದ್ಧ ಪ್ರತಿಭಟಿಸಿದ್ದಳು. ಇದರಿಂದ ಕುಪಿತಗೊಂಡ ರಾಮ್​ಗೋಪಾಲ್​, ಗರ್ಭಿಣಿ ಅಂತಾನೂ ನೋಡದೆ ಆಕೆಯ ಮೇಲೆ ಥಳಿಸಿದ್ದಾನೆ. ಇದಾದ ಬಳಿಕ ಆಕೆಯನ್ನು ಬೈಕ್​ಗೆ ಕಟ್ಟಿ 200 ಮೀಟರ್​ ಎಳೆದೊಯ್ದಿದ್ದಾನೆ. ದಾರಿಹೋಕರು ಆತನನ್ನು ತಡೆಯಲು ಯತ್ನಿಸಿದರೂ, ಗೋಪಾಲ್​ ಅವರ ಮಾತನ್ನು ಕೇಳಲಿಲ್ಲ. ಕೊನೆಗೆ ಸುಮನ್​ ಸಹೋದರ ಆಕೆಯನ್ನು ಕಾಪಾಡುವಲ್ಲಿ ಯಶಸ್ಸಿಯಾಗಿದ್ದಾರೆ ಮತ್ತು ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಿದನು.
ರಾಮ್​ಗೋಪಾಲ್​ ಮತ್ತು ಸುಮನ್​ 6 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಅಚ್ಚರಿ ಏನೆಂದರೆ ಇಬ್ಬರದ್ದು ಪ್ರೇಮ ವಿವಾಹ. ಮದುವೆಯಾದ ಕೆಲವು ದಿನಗಳ ಬಳಿಕ ಗಂಡ ಡ್ರಗ್ಸ್​ ಚಟಕ್ಕೆ ದಾಸನಾದ ಎಂದು ಸುಮನ್​ ತಿಳಿಸಿದ್ದಾಳೆ. ಈಗ ಎಂಟು ತಿಂಗಳ ಗರ್ಭಿಣಿಯಾಗಿರುವ ಸುಮನ್, ಗಂಡನ ಕುಡಿತದ ಚಟಕ್ಕೆ ಆಗಾಗ ಜಗಳವಾಡುತ್ತಿದ್ದರು. ಘಟನೆಯ ವೇಳೆ ರಾಮ್ ಗೋಪಾಲ್ ಅವರ ಸಹೋದರ ಮತ್ತು ತಾಯಿ ಮನೆಯಲ್ಲಿದ್ದರು. ಅವರು ಕೂಡ ಪ್ರತಿಭಟಿಸಿ ಸುಮನ್ ಅವರನ್ನು ರಕ್ಷಿಸಲು ಪ್ರಯತ್ನಿಸಿದರು.
ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ರಾಮ್​ಗೋಪಾಲ್​ನನ್ನು ವಶಕ್ಕೆ ಪಡೆದಿದ್ದಾರೆ. ಸಹೋದರ ವೈಶ್ಪಾಲ್ ದೂರಿನ ಮೇರೆಗೆ ಸುಮನ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಎಳೆದಾಡಿ ಥಳಿಸಿರುವ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಘುಂಗ್ಚಾಯ್ ಠಾಣಾಧಿಕಾರಿ ರಾಜೇಂದ್ರ ಸಿಂಗ್ ಸಿರೋಹಿ ತಿಳಿಸಿದ್ದಾರೆ.(ಏಜೆನ್ಸೀಸ್​)
ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡ ಯುಎಸ್​​ನ ಆರ್. ಬೊನಿ ಗೇಬ್ರಿಯಲ್​​; ಮಿಸ್ ಯುನಿವರ್ಸ್​ ಸ್ಪರ್ಧೆಯ ಫೋಟೋಗಳು ಇಲ್ಲಿವೆ ನೋಡಿ…

ಬಾಯ್​ಫ್ರೆಂಡ್​ ನಂಬಿ ರೆಸ್ಟೋರೆಂಟ್​ಗೆ ಹೋದ ಪ್ರೇಯಸಿಯ ಪಾಡು ಏನಾಯಿತು ನೋಡಿ! ವಿಡಿಯೋ ವೈರಲ್​

ವಿಮಾನದಲ್ಲಿ ರಕ್ತಕಾರಿ ಪ್ರಾಣ ಬಿಟ್ಟ 60 ವರ್ಷದ ಪ್ರಯಾಣಿಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 6 =
Remember me
