ಖೋಡಾ (ಉತ್ತರ ಪ್ರದೇಶ):ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದ್ದು, ಅನೇಕ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಜಾಗವೇ ಇಲ್ಲವಾಗಿದೆ. ಸೋಂಕಿತರು ಸೇರ್ಪಡೆಗೊಳ್ಳುತ್ತಿರುವ ಪ್ರಮಾಣದಲ್ಲಿಯೇ ಬಿಡುಗಡೆಯಾಗದ ಕಾರಣ, ಅನೇಕ ಆಸ್ಪತ್ರೆಗಳಲ್ಲಿ ಹೊಸ ರೋಗಿಗಳಿಗೆ ಹಾಸಿಗೆ ಸಮಸ್ಯೆ ಉಂಟಾಗಿದೆ.
ಅದೇ ಇನ್ನೊಂದೆಡೆ ಕರೊನಾ ಸೋಂಕಿತರಿಂದ ತುಂಬಿ ಹೋಗಿರುವ ಕಾರಣ, ಸಾಮಾನ್ಯ ರೋಗಿಗಳಿಗೂ ಆಸ್ಪತ್ರೆಯಲ್ಲಿ ಪ್ರವೇಶ ನಿರಾಕರಿಸಲಾಗುತ್ತಿದೆ.
ಆರೋಗ್ಯವಂತರಿಗೆ ಸೋಂಕು ತಗುಲಬಾರದು ಎಂಬ ಕಾರಣದಿಂದ ಈ ಕ್ರಮ ತೆಗೆದುಕೊಳ್ಳುತ್ತಿದ್ದರೂ ಇದು ಕೆಲವು ಬಾರಿ ಆರೋಗ್ಯವಂತರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ.
ಇದನ್ನೂ ಓದಿ:ಭಾರತದಲ್ಲಿ ಕರೊನಾ: ಆರೋಗ್ಯ ಇಲಾಖೆ ನೀಡಿದೆ ಸಿಹಿ ಸುದ್ದಿ- 18 ವಾರಗಳ ನಡೆ ಹೇಗಿತ್ತು?
ಇಂಥದ್ದೇ ಒಂದು ಸಮಸ್ಯೆ ಉತ್ತರ ಪ್ರದೇಶದ ಖೋಡಾದಲ್ಲಿ ನಡೆದಿದೆ. ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಲು ಬಯಸಿದ್ದ ಗರ್ಭಿಣಿಯೊಬ್ಬರಿಗೆ ಯಾವ ಆಸ್ಪತ್ರೆಗಳಲ್ಲಿಯೂ ಪ್ರವೇಶ ಸಿಗದ ಕಾರಣ, 13 ಗಂಟೆ ಆಂಬ್ಯುಲೆನ್ಸ್​ನಲ್ಲಿಯೇ ಸುತ್ತಾಡಿ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ!
ನೋಯ್ಡಾ-ಗಾಝಿಯಾಬಾದ್ ಬಳಿಯ ಖೋಡಾ ಕಾಲೊನಿ ನಿವಾಸಿಯಾಗಿರುವ 30 ವರ್ಷದ ನೀಲಂ ಎಂಬುವವರು ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಮೊದಲು ಅವರು ಚಿಕಿತ್ಸೆಗಾಗಿ ಇಎಸ್‌ಐ ಆಸ್ಪತ್ರೆಗೆ ತೆರಳಿದ್ದರು. ಆದರೆ ಬೆಡ್ ಕೊರತೆ ಕಾರಣ ಸ್ಥಳೀಯ ಶಿವಾಲಿಕ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಆದರೆ ಅಲ್ಲಿಯೂ ಬೆಡ್‌ಗಳ ಕೊರತೆಯಿದೆ ಎಂದು ಹೇಳಿ ದಾಖಲಿಸಿಕೊಳ್ಳಲಿಲ್ಲ. ನಂತರ ಸೆಕ್ಟರ್ 3ರಲ್ಲಿರುವ ಆಸ್ಪತ್ರೆ, ಶಾರದಾ ಆಸ್ಪತ್ರೆ, ಜೇಪೀ ಫೋರ್ಟಿಸ್ ಆಸ್ಪತ್ರೆ ಸೇರಿದಂತೆ ಎಂಟು ಆಸ್ಪತ್ರೆಗಳಿಗೆ ಹೋದರೂ ದಾಖಲಾಗಿ ಸಿಗಲಿಲ್ಲ.
ಇದನ್ನೂ ಓದಿ:ಶಾಲೆ ಆರಂಭ ಯಾವಾಗ? ಶಿಕ್ಷಣ ಸಚಿವರ ಪ್ರಶ್ನೆಗೆ ಪುಟ್ಟ ಬಾಲೆ ಕೊಟ್ಟ ಉತ್ತರಕ್ಕೆ ಭಾರಿ ಮೆಚ್ಚುಗೆ
ಹೀಗೆ 13 ಗಂಟೆಗಳ ಅಲೆದಾಟದ ಬಳಿಕ ಗ್ರೇಟರ್ ನೋಯ್ಡಾದ ಸರ್ಕಾರಿ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ ಪತಿ ಅವರನ್ನು ದಾಖಲಿಸಿದರು. ಆದರೆ ಅದಾಗಲೇ ಅವರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಮುಖ್ಯ ವೈದ್ಯಾಧಿಕಾರಿ ದೀಪಕ್ ಓಹ್ರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಮುನೀಂದ್ರನಾಥ್ ಉಪಾಧ್ಯಾಯ ನೇತೃತ್ವದಲ್ಲಿ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಗಿಳಿ ಹಾರಿಹೋದುದಕ್ಕೆ ಕೆಲಸದ ಬಾಲಕಿಯನ್ನು ಹೊಡೆದು ಸಾಯಿಸಿದ ದಂಪತಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 + twelve =
Remember me
