ಆಂಧ್ರಪ್ರದೇಶ:ಒಂದಲ್ಲ…ಎರಡಲ್ಲ ಇಪ್ಪತ್ನಾಲ್ಕು ಗಂಟೆಯೊಳಗೆ ಇಪ್ಪತ್ತಕ್ಕೂ ಹೆಚ್ಚು ಗರ್ಭಿಣಿಯರು ಆಸ್ಪತ್ರೆಗೆ ಬಂದಿದ್ದರು. ಬಂದವರಿಗೆಲ್ಲ ಸೂಸುತ್ರವಾಗಿ  ಹೆರಿಗೆ ಮಾಡಿಸಲಾಗಿದೆ. ಪಲ್ನಾಡು ಜಿಲ್ಲಾ ಪಿಡುಗುರಳ್ಳ ಆಸ್ಪತ್ರೆ ಅಪರೂಪದ ದಾಖಲೆ ಮಾಡಿದೆ.
ಇದನ್ನೂ ಓದಿ:ವಿಶ್ವಕಪ್ 2023 ಟ್ರೋಫಿಯನ್ನು ಅನಾವರಣಗೊಳಿಸಿದ ಮೊದಲ ನಟಿ ಊರ್ವಶಿ ರೌಟೇಲಾ
ಸೋಮವಾರ ಸಂಜೆ ಐದು ಗಂಟೆಯಿಂದಲೇ ಗರ್ಭಿಣಿಯರು ಬರಲಾರಂಭಿಸಿದರು. ಹೆರಿಗೆಗೆ ಬಂದ 21 ಮಂದಿಯಲ್ಲಿ ಕೆಲವರಿಗೆ ನಾರ್ಮಲ್​​ ಡೆಲವರಿ, ಸಿಸೇರಿಯನ್ ಮಾಡಲಾಗಿದೆ. ಈ ಹಿಂದೆ ಸಿಸೇರಿಯನ್ ಮಾಡಿದವರು ಕೆಲವರಿದ್ದರು, ಹಾಗಾಗಿ ಮತ್ತೇ ಸಿಸೇರಿಯನ್ ಮಾಡಲಾಗಿದೆ.
ಇದನ್ನೂ ಓದಿ:ಪ್ರಿಯಕರನ ಮೋಹಕ್ಕೆ ಬಿದ್ದ ಪತ್ನಿ; ದೇವಸ್ಥಾನಕ್ಕೆ ಹೋಗೋಣ ಎಂದು ಗಂಡನಿಗೆ ಸ್ಕೇಚ್​ ಹಾಕಿದ್ಲು!
ವೈದ್ಯ ಅಶೋಕ್ ಕುಮಾರ್ ಮಾತನಾಡಿ, ‘ಪಲ್ನಾಡು ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 24 ಗಂಟೆಯೊಳಗೆ ಇಷ್ಟೊಂದು ಗರ್ಭಿಣಿಯರು ಯಾವುದೇ ಆಸ್ಪತ್ರೆಗೆ ಬಂದಿಲ್ಲ. ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ಗರ್ಭಿಣಿಯರಿಗೆ ಒಳ್ಳೆಯ ಚಿಕಿತ್ಸೆ ನೀಡಿದ್ದಾರೆ. ಹೆಚ್ಚು ಹೆಚ್ಚು ಗರ್ಭಿಣಿಯರು ಬರುತ್ತಿರುವುದನ್ನು ಗಮನಿಸಿದ ಡಾ.ರಮ್ಯಾ ಹಾರಿಕಾ ಅವರು ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡಲು ಕಾಲಕಾಲಕ್ಕೆ ಕ್ರಮಕೈಗೊಂಡರು.ಇಪ್ಪತ್ತೊಂದು ಜನರಲ್ಲಿ ಹನ್ನೊಂದು ಮಂದಿ ಗಂಡು ಮಕ್ಕಳಿಗೆ ಜನ್ಮ ನೀಡಿದರೆ ಉಳಿದ ಹತ್ತು ಮಂದಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ:ನಾಚಿಕೆಯಾಗಬೇಕು! ಚಂದ್ರಯಾನ-3 ಯಶಸ್ಸಿನ ಬಗ್ಗೆ ಪಾಕ್​ ನಟಿ ಸೆಹರ್​ ಶಿನ್ವಾರಿ ನೀಡಿದ ಹೇಳಿಕೆ ವೈರಲ್​
ಒಂದೇ ದಿನ ಹೆರಿಗೆಯಾದ ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ. ಸಾಮಾನ್ಯವಾಗಿ ಪ್ರತಿ ತಿಂಗಳು ಎಪ್ಪತ್ತರಿಂದ ಎಂಬತ್ತು ಹೆರಿಗೆಯಾಗುತ್ತದೆ. ಆದರೆ ಸೋಮವಾರ ಸಂಜೆಯಿಂದಲೇ ಗರ್ಭಿಣಿಯರು ಸತತವಾಗಿ ಬರುತ್ತಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯರು ಹಾಗೂ ಶುಶ್ರೂಷಕ ಸಿಬ್ಬಂದಿಯ ಎಚ್ಚರದಿಂದ ಯಾವುದೇ ತೊಂದರೆಯಾಗದಂತೆ ಸೂಕ್ತ ಸಮಯದಲ್ಲಿ ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗಿದೆ.
VIDEO | ತಲೆ ಕೂದಲು ಕತ್ತರಿಸಲು ಬಂತು ವಿಶೇಷ ರೋಬೋಟ್…ವೈರಲ್ ವಿಡಿಯೋ ನೋಡಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − six =
Remember me
