ಅಯೋಧ್ಯೆ:ಜಗತ್ತಿನಾದ್ಯಂತ ಎಲ್ಲರ ಚಿತ್ತ ಜನವರಿ 22ರಂದು ಅಯೋಧ್ಯೆಯಲ್ಲಿ ಅದ್ದೂರಿಯಾಗಿ ನಡೆಯಲಿರುವ ರಾಮಮಂದಿರದ ಉದ್ಘಾಟನೆಯತ್ತ ಮೂಡಿದೆ. ಈ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಬರುವ ಸಹಸ್ರಾರು ಸಂಖ್ಯೆಯ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಉತ್ತರಪ್ರದೇಶ ಸರ್ಕಾರ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಲು ಹೆಚ್ಚು ಗಮನಹರಿಸಿದೆ. ಈ ಮಧ್ಯೆ ತಾಯ್ತನ ಆನಂದಿಸಲು ಎದುರುನೋಡುತ್ತಿರುವ ಗರ್ಭಿಣಿಯರು, ತಮಗೆ ಜನಿಸುವ ಮಗು ಜನವರಿ 22ರಂದೇ ಆಗಬೇಕು ಎಂದು ಪಟ್ಟು ಹಿಡಿದು ಕುಳಿತ್ತಿರುವುದು ಸದ್ಯ ವೈದ್ಯರಲ್ಲಿ ತೀವ್ರ ಗೊಂದಲ ಮೂಡಿಸಿದೆ.
ಇದನ್ನೂ ಓದಿ:ಖಾಸಗಿ ವಾಹನ ಕಾರ್ವಿುಕರಿಗೆ ಪ್ರತ್ಯೇಕ ಮಂಡಳಿ; ನಿಧಿ ಸಂಗ್ರಹಕ್ಕೆ ಕಾನೂನಿನಲ್ಲಿ ಅವಕಾಶ
ಜ.22ರಂದು ರಾಮಮಂದಿರದಲ್ಲಿ ನಡೆಯಲಿರುವ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಇದೀಗ ದಿನಗಣನೆ ಆರಂಭಗೊಂಡಿದ್ದು, ಇಡೀ ದೇಶವೇ ಶ್ರೀರಾಮನ ದರ್ಶನ ಪಡೆಯಲು ಎದುರುನೋಡುತ್ತಿದೆ. ಈ ಮಧ್ಯೆ ಭಕ್ತಾಧಿಗಳು ದೇವಾಲಯಕ್ಕೆ ಸಂಬಂಧಿಸಿದಂತೆ ತಮ್ಮಿಂದ ಆಗುವ ಕೊಡುಗೆಗಳನ್ನು ಅರ್ಪಿಸುತ್ತ ಬರುತ್ತಿದ್ದು, ವಿಶೇಷ ರೀತಿಯಲ್ಲಿ ತಮ್ಮ ಭಕ್ತಿಯನ್ನು ತೋರುತ್ತಿದ್ದಾರೆ. ಅನೇಕರು ಜನವರಿ 22ರ ದಿನವನ್ನು ಬಹಳ ವಿಶೇಷ ಎಂದು ಪರಿಗಣಿಸಿದ್ದು, ಈ ದಿನವೇ ಬಹುಮುಖ್ಯ ಕೆಲಸಗಳನ್ನು ಈಡೇರಿಸಿಕೊಳ್ಳಲು ಯೋಜಿಸಿದ್ದಾರೆ.
ಆ ಪೈಕಿ ಗರ್ಭಿಣಿಯರು ಮುಂದಿದ್ದು, ತಮಗೆ ಜನಿಸುವ ಮಗುವಿನ ಜನನದ ದಿನ ಜ.22ರ ಹಿಂದೆ-ಮುಂದೆ ಇದ್ದರೂ ಅದನ್ನು ಲೆಕ್ಕಿಸದೇ ಬಲವಂತವಾಗಿ ಆದರೂ ಪರವಾಗಿಲ್ಲ ಅಯೋಧ್ಯೆಯಲ್ಲಿ ರಾಮಮಂದಿರ ವಿಗ್ರಹ ಸಮಾರಂಭದ ದಿನವೇ ನಮಗೆ ಮಗು ಜನಿಸುವಂತೆ ಹೆರಿಗೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಒಬ್ಬರು ಈ ರೀತಿ ಬೇಡಿಕೆಯಿಟ್ಟರೆ ವೈದ್ಯರು ಚಿಂತಿಸುತ್ತಿರಲಿಲ್ಲ. ಆದ್ರೆ, ಹಲವಾರು ಆಸ್ಪತ್ರೆಯಲ್ಲಿ ಇರುವ ಗರ್ಭಿಣಿಯರು ಇದೇ ಬಯಕೆಯನ್ನು ಹೇರಿದ್ದು, ವೈದ್ಯರು ಕಂಗಾಲಾಗಿದ್ದಾರೆ.
ಇದನ್ನೂ ಓದಿ:ನವನಗರದಲ್ಲಿ ಸುಸಜ್ಜಿತ ಮಾರ್ಕೆಟ್,ಇನ್ನೂರಕ್ಕೂ ಹೆಚ್ಚು ವರ್ತಕರಿಗೆ ಅವಕಾಶ
ಈ ಬೇಡಿಕೆಗಳನ್ನು ಈಡೇರಿಸಲು ನಿರಾಕರಿಸುತ್ತಿರುವ ವೈದ್ಯರು, ಗರ್ಭಿಣಿಯರಿಗೆ ನಿಗದಿಪಡಿಸಿರುವ ಡೆಲಿವರಿ ಡೇಟ್​ಗೂ ಮುನ್ನ ಅಥವಾ ಮೀರಿದರೆ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಭಾರೀ ತೊಂದರೆಯಾಗಬಹುದು ಎಂದು ಎಚ್ಚರಿಸಿದ್ದಾರೆ. ಇಷ್ಟೆಲ್ಲಾ ಹೇಳಿದರೂ ಕೂಡ ಹೆಚ್ಚಿನ ಸಂಖ್ಯೆಯ ಗರ್ಭಿಣಿಯರು ಪಟ್ಟು ಹಿಡಿದಿದ್ದು, ಏನೇ ಆಗಲಿ ಅದೇ ದಿನದಂದು ನಮಗೆ ಮಗು ಜನಿಸಬೇಕು ಎಂದು ತಿಳಿಸಿದ್ದಾರೆ.
ಇದೇನು ಹೊಸದಲ್ಲ ಎಂದು ಹೇಳುವ ವೈದ್ಯರು, ಇತ್ತೀಚಿನ ದಿನಗಳಲ್ಲಿ ಈ ರೀತಿಯ ಕೇಸ್​ಗಳು ಹೆಚ್ಚುತ್ತಿವೆ. ನಿಗದಿಪಡಿಸಿರುವ ದಿನಗಳಿಗೆ ಹೋಲಿಸಿದರೆ, ಆ ದಿನ ಡೆಲಿವರಿ ಆಗುವ ಬದಲು ತಮ್ಮಿಷ್ಟದ ದಿನದಂದೇ ಮಗು ಜನಿಸುವಂತೆ ಮಾಡಿ ಎಂದು ಕುಟುಂಬಸ್ಥರು ಮನವಿ ಮಾಡುತ್ತಾರೆ. ಆದ್ರೆ, ಇದು ಎಲ್ಲರಿಗೂ ಸಾಧ್ಯವಿಲ್ಲ! ಕೆಲವು ಸಮಯ ಆಗುತ್ತದೆ. ಇನ್ನು ಕೆಲವೊಮ್ಮೆ ಯಾವುದೇ ಕಾರಣಕ್ಕೂ ಆಗುವುದಿಲ್ಲ. ಅದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ನಿರ್ಧಾರವಾಗುತ್ತದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).
ಆರೋಪಿ ಪತಿಯ ಪರಾರಿಗೆ ಪತ್ನಿ ಸಾಥ್​! ಈಕೆಯ ಮಾಸ್ಟರ್​ಪ್ಲಾನ್​ನಿಂದ ಮೂವರು ಪೊಲೀಸರು ಅಮಾನತು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 3 =
Remember me
