ಹೈದರಾಬಾದ್​:ಗರ್ಭಿಣಿಯರು ತಮ್ಮ ಶಿಶುಗಳ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕಾಗಿ ರಾಮಾಯಣದಂತಹ ಮಹಾಕಾವ್ಯಗಳನ್ನು ಓದಲು ಪ್ರಾರಂಭಿಸಬೇಕು ಎಂದು ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಹೇಳಿದ್ದಾರೆ.
ಇದನ್ನೂ ಓದಿ:ಜತೆಗೆ ಸ್ನಾನ ಮಾಡಲು ತೆರಳಿದ ಜೋಡಿ; ಹಸೆಮಣೆ ಏರಬೇಕಿದ್ದವರು ಮಸಣ ಸೇರಿದರು…
ರಾಜ್ಯಪಾಲರು ಮಾತ್ರವಲ್ಲದೆ ಸ್ತ್ರೀರೋಗತಜ್ಞರು ಮತ್ತು ಭ್ರೂಣ ಚಿಕಿತ್ಸಕರೂ ಆಗಿರುವ ಸೌಂದರರಾಜನ್ ಗರ್ಭ ಸಂಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗರ್ಭಿಣಿಯರು ತಮ್ಮ ಶಿಶುಗಳ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯವನ್ನು ಹೆಚ್ಚಿಸಲು ಸುಂದರಕಾಂಡವನ್ನು ಪಠಿಸುವುದರ ಜತೆಗೆ ರಾಮಾಯಣದಂತಹ ಮಹಾಕಾವ್ಯಗಳನ್ನು ಓದಬೇಕು.
ಹಳ್ಳಿಗಳಲ್ಲಿ ಗರ್ಭಿಣಿಯರು ರಾಮಾಯಣ, ಮಹಾಭಾರತ ಮತ್ತು ಇತರ ಮಹಾಕಾವ್ಯಗಳ ಜೊತೆಗೆ ಒಳ್ಳೆಯ ಕಥೆಗಳನ್ನು ಓದುವುದನ್ನು ನಾವು ನೋಡಿದ್ದೇವೆ. ವಿಶೇಷವಾಗಿ ತಮಿಳುನಾಡಿನಲ್ಲಿ, ಗರ್ಭಿಣಿಯರು ರಾಮಾಯಣದ ಸುಂದರಕಾಂಡವನ್ನು ಕಲಿಯಬೇಕೆಂಬ ನಂಬಿಕೆ ಇದೆ ಎಂದು ಹೇಳಿದರು.
ಅಲ್ಲದೇ, ಗರ್ಭ ಸಂಸ್ಕಾರ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವಲ್ಲಿ ಸಂವರ್ಧಿನಿ ನ್ಯಾಸ್​ರ ಪ್ರಯತ್ನಗಳನ್ನು ಶ್ಲಾಘಿಸಿ, ವೈಜ್ಞಾನಿಕ ಮತ್ತು ಸಮಗ್ರ ವಿಧಾನ ಧನಾತ್ಮಕ ಫಲಿತಾಂಶಗಳನ್ನು ಇದು ನೀಡುತ್ತದೆ ಎಂದು ಹೇಳಿದರು.
ಸುಂದರಕಾಂಡವು ಹಿಂದೂ ಮಹಾಕಾವ್ಯವಾದ ರಾಮಾಯಣದಲ್ಲಿ ಒಂದು ಅಧ್ಯಾಯವಾಗಿದೆ. ಇದು ಭಗವಾನ್ ಹನುಮಂತನ ಸಾಹಸಗಳನ್ನು ಮತ್ತು ಅವನ ನಿಸ್ವಾರ್ಥತೆ, ಶಕ್ತಿ ಮತ್ತು ಭಗವಾನ್ ರಾಮನ ಮೇಲಿನ ಭಕ್ತಿಯನ್ನು ವಿವರಿಸುತ್ತದೆ.(ಏಜೆನ್ಸೀಸ್​​)
ಫ್ಯಾಷನ್ ಶೋ ನಡೆಯುವ ವೇಳೆ ದುರಂತ: ಸ್ಥಳದಲ್ಲೇ ಪ್ರಾಣಬಿಟ್ಟ ಮಾಡೆಲ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 6 =
Remember me
