ಬೆಂಗಳೂರು:ಈಕೆ 9 ತಿಂಗಳ ತುಂಬು ಗರ್ಭಿಣಿ. ಇದೇ ವಾರದಲ್ಲಿ ಇವರ ಪ್ರಸವದ ದಿನಾಂಕವೂ ಫಿಕ್ಸ್​ ಆಗಿದೆ. ಆದರೆ ಕರೊನಾ ಸೋಂಕಿತೆ ಎಂದು ವೈದ್ಯರು ತಿಳಿಸಿದ ಕಾರಣದಿಂದ ಕೆಲವು ದಿನಗಳಿಂದ ಇವರ ಸ್ಥಿತಿ ಹೇಳತೀರದಾಗಿತ್ತು. ತೀರಾ ಒತ್ತಡದಲ್ಲಿಯೇ ದಿನ ಕಳೆಯುತ್ತಿದ್ದ ಈ ಗರ್ಭಿಣಿಯ ಇನ್ನೊಂದು ರಿಪೋರ್ಟ್​ ಈಗ ಬಂದಿದೆ. ಅದರಲ್ಲಿ ಇವರಿಗೆ ಕರೊನಾ ಸೋಂಕು ಇರಲೇ ಇಲ್ಲ ಎಂದು ಗೊತ್ತಾಗಿದೆ!
ಹೌದು. ಇಂಥದ್ದೊಂದು ಎಡವಟ್ಟು ಖಾಸಗಿ ವೈದ್ಯರಿಂದ ಆಗಿಬಿಟ್ಟಿದೆ. ಅದು ಬೇರೆಲ್ಲೂ ಅಲ್ಲ. ಬೆಂಗಳೂರಿನಲ್ಲಿಯೇ! ಪೊಲೀಸ್​ ಕಾನ್ಸ್​ಟೆಬಲ್​ ಸೋಂಕಿತ ಅಲ್ಲದಿದ್ದರೂ ಅವರು ಸೋಂಕಿತರೆಂದು ವರದಿ ನೀಡಿದ್ದ ವೈದ್ಯರೀಗ ಅದರ ಬೆನ್ನಲ್ಲೇ ಇನ್ನೊಂದು ದೊಡ್ಡ ಪ್ರಮಾದ ಎಸಗಿಬಿಟ್ಟಿದ್ದಾರೆ.
ಇದನ್ನೂ ಓದಿ:VIDEO: ಹಂದಿಗಳು ಸಾರ್​ ಹಂದಿಗಳಿವು, ಕಲ್ಲು ತೂರಿದ್ರೆ ಸುಮ್ನೆ ಬಿಟ್ಟಾವೆ?
ಮಹಿಳೆ ಬೆಂಗಳೂರಿನ ಬಿಟಿಎಂ ಲೇಔಟ್​ನ ನಿವಾಸಿ. ಇವರು ಖಾಸಗಿ ಲ್ಯಾಬ್​ ಒಂದರಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದ ಸಂದರ್ಭದಲ್ಲಿ ಅವರಿಗೆ ಕರೊನಾ ಪಾಸಿಟಿವ್​ ಇದೆ ಎಂದು ವರದಿ ನೀಡಲಾಗಿತ್ತು. ನಂತರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್​ಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಸರ್ಕಾರಿ ಲ್ಯಾಬ್​ನಲ್ಲಿ ಸ್ಯಾಂಪಲ್ ಪರೀಕ್ಷಿಸಿದಾಗ ನೆಗೆಟಿವ್ ರಿಪೋರ್ಟ್​ ಬಂದಿದೆ.
ಆದರೆ ಗ್ರಹಚಾರ ನೋಡಿ. ಇದಾಗಲೇ ಸೋಂಕಿತರ ವಾರ್ಡ್​​ನಲ್ಲಿಯೇ ಇವರು ಇದ್ದುದರಿಂದ ಮತ್ತೆ 14 ದಿನ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಈ ನಡುವೆ ಇವರಿಗೆ ಡೆಲಿವರಿ ಡೇಟನ್ನೂ ನೀಡಲಾಗಿದೆ. ಗರ್ಭದಲ್ಲಿ ಮಗುವನ್ನು ಹೊತ್ತು ತಾನೊಬ್ಬ ಸೋಂಕಿತೆ ಎಂದು ಇವರು ಇಷ್ಟು ದಿನ ಅನುಭವಿಸಿರುವ ನೋವಿಗೆ ಲೆಕ್ಕ ಕೊಡುವವರಾರು!
ಇದನ್ನೂ ಓದಿ:ಅಮೆರಿಕದಲ್ಲಿ ಶೇ.47ರಷ್ಟು ಉದ್ಯೋಗಿಗಳು ಪ್ಯಾಂಟೇ ಹಾಕಲ್ವಂತೆ, ಉಳಿದವರು ಇನ್ನೇನು ಮಾಡ್ತಾರೆ ನೋಡಿ…
ಪೊಲೀಸ್​ ಕಾನ್ಸ್​ಟೆಬಲ್​ ವಿಷಯದಲ್ಲಿ ಆದದ್ದೇನೆಂದರೆ, ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳು ಪರೀಕ್ಷೆಗೆಂದು ಖಾಸಗಿ ಲ್ಯಾಬ್​ಗೆ ಹೋಗಿದ್ದರು. ಅದರಲ್ಲಿ ಒಬ್ಬನಿಗೆ ಸೋಂಕು ಇತ್ತು, ಇನ್ನೊಬ್ಬರು ಪೊಲೀಸ್​ ಪೇದೆ. ಅವರಿಗೆ ಸೋಂಕು ಇರಲಿಲ್ಲ. ಆದರೆ ಲ್ಯಾಬ್​ ಎಡವಟ್ಟಿನಿಂದ ಸೋಂಕು ಇಲ್ಲದ ಪೇದೆಗೆ ಇದೆಯೆಂದು ಹೇಳಿ ಅಡ್ಮಿಟ್​ ಮಾಡಲಾಗಿತ್ತು.
ಆದರೆ ನಂತರ ಮೊಬೈಲ್​ ಸಂಖ್ಯೆಯಿಂದ ವರದಿ ಅದಲು ಬದಲಾಗಿದೆ ಎಂದು ತಿಳಿದಿದೆ. ಅಡ್ಮಿಟ್​ ಆಗಿದ್ದ ವ್ಯಕ್ತಿಗೆ ಸೋಂಕು ಇಲ್ಲ ಎಂದಾದರೆ ನಿಜವಾಗಿಯೂ ಸೋಂಕು ಇರುವ ವ್ಯಕ್ತಿ ಇದೀಗ ಎಲ್ಲಿಗೆ ಹೋಗಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ. ಆತ ಇನ್ನೆಲ್ಲೆಲ್ಲಿ ತಿರುಗಿ, ಇನ್ಯಾರ್ಯಾರಿಗೆ ಸೋಂಕು ತಗುಲಿಸಿದ್ದಾನೋ ತಿಳಿಯುತ್ತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಲಾಕ್​ಡೌನ್​ ಸಮಯದಲ್ಲಿ ಕದ್ದುಮುಚ್ಚಿ ಮಾಡೋದೇನು? ಇಲ್ಲಿದೆ ಬೆಚ್ಚಿಬೀಳಿಸೋ ವರದಿ
ಈ ಎರಡೂ ಘಟನೆಗಳಿಂದ ಖಾಸಗಿ ಲ್ಯಾಬ್​ನ ಮೇಲೆ ತೀರಾ ಅನುಮಾನ ಶುರುವಾಗಿದೆ. ಈ ಪ್ರಯೋಗಾಲಯಗಳ ಕಾರ್ಯವೈಖರಿ ಬಗ್ಗೆಯೇ ಅನುಮಾನ ವ್ಯಕ್ತವಾಗುತ್ತಿದ್ದು, ಖಾಸಗಿ ಲ್ಯಾಬ್​ನ ಮಾನ್ಯತೆ ರದ್ದು ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:18 + 20 =
Remember me
