ಮುಂಬೈ:ಬಾಲಿವುಟ್​ ನಟಿ ಪ್ರೀತಿ ಜಿಂಟಾ ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ ವೇಳೆ ಅವರಿಗೆ ಅನುಭವವಾಗಿರುವ ಎರಡು ಪ್ರತ್ಯೇಕ ಕಹಿ ಘಟನೆಗಳನ್ನು ಸೋಶಿಯಲ್​​ ಮೀಡಿಯಾ ಮೂಲಕವಾಗಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ವಿಮಾನ ನಿಲ್ದಾಣದತ್ತ ಹೊರಟಿದ್ದೆ. ಈ ವೇಳೆ ವಿಶೇಷನ ಚೇತನ ವ್ಯಕ್ತಿಯೊಬ್ಬರು ಹಣ ಕೇಳಿದರು, ನನ್ನ ಬಳಿ ಆಗ ವೇಳೆ ಹಣ ಇರಲಿಲ್ಲ. ಕೇವಲ ಕ್ರೆಡಿಟ್ ಕಾರ್ಡ್ ಮಾತ್ರ ನನ್ನ ಬಳಿ ಇದ್ದವು. ಹಲವು ವರ್ಷಗಳಿಂದ ಅವರು ಹಣಕ್ಕಾಗಿ ಪೀಡಿಸುತ್ತಾರೆ. ಸಾಧ್ಯವಾದಾಗಲೆಲ್ಲಾ ನಾನು ನೀಡಿದ್ದೇನೆ. ಆದರೆ ಈ ಬಾರಿ ಅವರು ಕೇಳಿದಾಗ ‘ಕ್ಷಮಿಸಿ, ನನ್ನ ಬಳಿ ನಗದು ಇಲ್ಲ’ ಎಂದು ಹೇಳಿದೆ. ನನ್ನ ಜೊತೆಗಿದ್ದ ಮಹಿಳೆ ಒಂದಷ್ಟು ಹಣ ನೀಡಿದರು. ಆದರೆ ಅದು ಸಾಲುವುದಿಲ್ಲ ಎಂದು ಅವರು ವಾಪಸ್‌ ಎಸೆದು, ಆಕ್ರಮಣಕಾರಿಯಾಗಿ ವರ್ತಿಸಿದರು. ನನ್ನ ಕಾರಿನ ಹಿಂದೆಯೆ ಬಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಛಾಯಾಗ್ರಾಹಕರು ಈ ಘಟನೆಯನ್ನು ತಮಾಷೆಯಾಗಿ ಕಂಡುಕೊಂಡರು. ಅವರು ನಮಗೆ ಸಹಾಯ ಮಾಡುವ ಬದಲು ವೀಡಿಯೋ ಸೆರೆ ಹಿಡಿಯುತ್ತಾ ನಕ್ಕರು. ಕಾರನ್ನು ಹಿಂಬಾಲಿಸಬೇಡಿ ಅಥವಾ ನಮಗೆ ಕಿರುಕುಳ ನೀಡಬೇಡಿ ಎಂದು ಯಾರೂ ಅವನಿಗೆ ಹೇಳಲಿಲ್ಲ, ಯಾರಾದರೂ ಗಾಯಗೊಳ್ಳಬಹುದು. ಅಪಘಾತ ಸಂಭವಿಸಿದಲ್ಲಿ, ಎಲ್ಲರು ನನ್ನ ಪ್ರಶ್ನೆ ಮಾಡುತ್ತಿದ್ದರು. ಬಾಲಿವುಡ್‌ಗೆ ದೂಷಿಸಲಾಗುತ್ತಿತ್ತು ಮತ್ತು ಈ ವಿಚಾರವಾಗಿ ಬಹಳಷ್ಟು ನಕಾರಾತ್ಮಕತೆ ಹರಡುತ್ತಿತ್ತು ಎಂದು ಹೇಳಿದ್ದಾರೆ. ಹಾಗೆಯೇ, ಸೆಲೆಬ್ರಿಟಿಗಳೂ ಮನುಷ್ಯರು ಎಂದು ಜನರು ಅರ್ಥ ಮಾಡಿಕೊಳ್ಳಲು ಇದು ಸರಿಯಾದ ಸಮಯ. ನಾನು ಮೊದಲು ಒಬ್ಬ ಮನುಷ್ಯಳು, ನಂತರ ತಾಯಿ ಮತ್ತು ಸೆಲೆಬ್ರಿಟಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:VIDEO | ಮಲ್ಲಿಗೆ ಹೂವಿನ ಸ್ಕರ್ಟ್​​ ತೊಟ್ಟು ಕಾಣಿಸಿಕೊಂಡ ಉರ್ಫಿ ಜಾವೇದ್!‘ಮಹಿಳೆಯೊಬ್ಬರು ನನ್ನ ಮಗಳು ಗಿಯಾನೊಂದಿಗೆ ಫೋಟೊ ತೆಗೆದುಕೊಳ್ಳಲು ಬಯಸಿದರು.ನಾನು ನಯವಾಗಿ ತಿರಸ್ಕರಿಸಿದೆ. ಅಷ್ಟಕ್ಕೆ ಸುಮ್ಮನಾಗದ ಮಹಿಳೆ ಮಗಳನ್ನು ತಬ್ಬಿ ಹಿಡಿದು ತುಟಿಯ ಬಳಿ ಮುತ್ತಿಟ್ಟು ‘ಎಷ್ಟು ಮುದ್ದಾದ ಮಗು’ ಎಂದು ಹೇಳುತ್ತಾ ಕಾಲ್ಕಿತ್ತರು. ಮನೆಯ ಹೂದೋಟದಲ್ಲಿ ಮಕ್ಕಳು ಆಟವಾಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ನಾನೊಬ್ಬ ಸೆಲೆಬ್ರಿಟಿ ಆಗಿರದಿದ್ದರೆ ಬೇರೆ ರೀತಿಯೇ ಪ್ರತಿಕ್ರಿಯಿಸುತ್ತಿದ್ದೆ. ಆದರೆ ಅದನ್ನೇ ದೊಡ್ಡ ವಿಷಯ ಮಾಡಬಾರದೆಂದು ಸುಮ್ಮನಾದೆ’ ಎಂದು ಬರೆದುಕೊಂಡಿದ್ದಾರೆ.‌
ತ್ರಿಶೂಲ ಹಿಡಿದು ರಸ್ತೆಗಿಳಿದಿಲ್ಲವೆಂದರೆ ಮುಂದೆ ಭಾರತ ಮುಸ್ಲಿಂ ರಾಷ್ಟ್ರವಾಗುತ್ತೆ: BJP ಮುಖಂಡ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five + 9 =
Remember me
