ಮುಂಬೈ:ಇತ್ತೀಚಿನ ದಿನಗಳಲ್ಲಿ ವಿವಾಹದ ಬಗ್ಗೆಗಿನ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ವಿವಾಹ ಪೂರ್ವ ಲೈಂಗಿಕತೆ ಹಾಗೂ ಗರ್ಭಾವಸ್ಥೆ ಕುರಿತು ಪರ-ವಿರೋಧ ಚರ್ಚೆಗಳು ಕೂಡ ನಡೆಯುತ್ತಿವೆ.
ಸದ್ಯ ಈ ಬಗ್ಗೆ ಬಾಲಿವುಡ್​ ನಟಿ ದಿಯಾ ಮಿರ್ಜಾ ಅವರು ಈ ರೀತಿ ಹೇಳಿಕೆ ಕೊಟ್ಟು ಟೀಕೆಗೆ ಗುರಿಯಾಗಿದ್ದಾರೆ. ವಿವಾಹ ಪೂರ್ವ ಲೈಂಗಿಕತೆ ಮತ್ತು ಗರ್ಭಾವಸ್ಥೆ ಅವರವರ ವೈಯಕ್ತಿಕ ವಿಚಾರವಾಗಿದ್ದು, ನಾವು ಇಂದಿಗೂ ಚಿಂತಿಸುವಷ್ಟು ಪ್ರಬುದ್ಧತೆ ಹೊಂದಿಲ್ಲ ಎಂದು ನನಗನಿಸುತ್ತೆ ಎಂದು ಹೇಳಿದ್ದಾರೆ.
ಈ ರೀತಿಯ ನಿರ್ಧಾರ ತೆಗೆದುಕೊಳ್ಳುವವರು ತಪ್ಪಿತಸ್ಥರೇನೂ ಅಲ್ಲ, ಇದನ್ನು ಸಂಭ್ರಮಿಸಿ, ಜನರು ಯೋಚಿಸುವಷ್ಟು ಪ್ರಗತಿಪರರಲ್ಲ ಎಂದಿರುವ ದಿಯಾ, ವಿವಾಹ ಪೂರ್ವ ಲೈಂಗಿಕತೆ ಬಗ್ಗೆ ತಮ್ಮ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ.
2021ರ ಫೆಬ್ರವರಿಯಲ್ಲಿ ಉದ್ಯಮಿ ವೈಭವ್​ ರೇಖಿ ಅವರನ್ನು ಎರಡನೇ ವಿವಾಹವಾದ ದಿಯಾ ಮಿರ್ಜಾ ಅವರು, ಕೆಲವೇ ದಿನಗಳಲ್ಲಿ ತಾನು ಗರ್ಭಿಣಿ ಎಂದು ಘೋಷಿಸಿದ್ದರು. ಇದರಿಂದ ಭಾರೀ ಟೀಕೆಗೊಳಗಾಗಿದ್ದ ದಿಯಾ ಈ ಬಗ್ಗೆಯೂ ಪ್ರತಿಕ್ರಿಯಿಸಿ ಮದುವೆ ನಂತರವೇ ಗರ್ಭಧರಿಸಬೇಕೆಂದೇನಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 15 =
Remember me
