| ಶಿವಾನಂದ ತಗಡೂರು
ಬೆಂಗಳೂರು: ಶ್ರೀರಾಮನ ಜನ್ಮಭೂಮಿ ಅಯೋಧ್ಯೆಗೆ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯದಲ್ಲಿ ನಡೆಯುವ ಅನ್ನ ದಾಸೋಹ ಸಂಬಂಧವೂ ಬೆಸೆದುಕೊಂಡಿದೆ. ಕರೊನಾ ಬಳಿಕ ಅಯೋಧ್ಯೆಯಲ್ಲಿ ನಿತ್ಯ ಅನ್ನದಾಸೋಹ ಮಾಡಲು ಸಿದ್ಧತೆ ನಡೆದಿವೆ. ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದ ಹಲವು ದೇವಸ್ಥಾನಗಳಲ್ಲಿ ಭಕ್ತರಿಗೆ ನಿತ್ಯವೂ ಅನ್ನ ದಾಸೋಹ ವ್ಯವಸ್ಥಿತವಾಗಿ ನಡೆಯುತ್ತಿರುವುದು ಉತ್ತರ ಭಾರತದ ಗಮನ ಸೆಳೆದಿದೆ. ಇದೇ ರೀತಿ ಅಯೋಧ್ಯೆಯಲ್ಲೂ ಅನ್ನ ದಾಸೋಹ ನಡೆಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಆಪ್ತರಾದ ನಿವೃತ್ತ ಐಪಿಎಸ್ ಅಧಿಕಾರಿ ಇದರ ರೂವಾರಿ.
ಯಾರು ಈ ಅಧಿಕಾರಿ? ಐಪಿಎಸ್ ಅಧಿಕಾರಿಯಾಗಿದ್ದ ಕಿಶೋರ್ ಕುನಾಲ್ ಹುದ್ದೆಗೆ ರಾಜೀನಾಮೆ ನೀಡಿ ಧರ್ಮ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಪಟನಾದಲ್ಲಿರುವ ಹನುಮಾನ್(ಮಹಾವೀರ) ಮಂದಿರದ ಟ್ರಸ್ಟಿಯಾಗಿದ್ದಾರೆ. ಅಯೋಧ್ಯೆಯಲ್ಲಿ ಭೂಮಿಪೂಜೆಯ ದಿನ ನಂದಿನಿ ತುಪ್ಪದಲ್ಲಿ ತಯಾರಿಸಿದ ಲಡ್ಡು ವಿತರಣೆ ಮಾಡಲು ಇವರೇ ಮೂಲ ಕಾರಣ.
ಪ್ರಾಯೋಗಿಕ ದಾಸೋಹ:ಕರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಆಗಿದ್ದ ಸಂದರ್ಭದಲ್ಲಿ ಪಟನಾದಲ್ಲಿ ಮತ್ತು ಅಯೋಧ್ಯೆಯಲ್ಲಿ ನಿತ್ಯವೂ ಉಚಿತವಾಗಿ ಪುಡ್ ಕಿಟ್ ಮಾಡಿ ಕೊಡುವ ಜವಾಬ್ದಾರಿಯನ್ನು ಹನುಮಾನ್ ಟ್ರಸ್ಟ್ ಯಶಸ್ವಿಯಾಗಿ ನಿಭಾಯಿಸಿದೆ. ಭೂಮಿ ಪೂಜಾ ಕಾರ್ಯಕ್ರಮದ ಸಿದ್ಧತೆ ಹೊತ್ತಿನಲ್ಲಿ 1500 ಜನರಿಗೆ ಊಟ ಸಿದ್ಧಪಡಿಸಿಕೊಡಲಾಗಿತ್ತು.
ಧರ್ಮಸ್ಥಳ, ಕುಕ್ಕೆಗೆ ಭೇಟಿ
ಚಿಂತಾಮಣಿಯ ಶೇಷಾದ್ರಿ ಅವರು ಮೇನೇಜರ್ ಆಗಿ ಸೇರಿಕೊಂಡ ಬಳಿಕ ಕರ್ನಾಟಕದ ಬಗ್ಗೆ ಕುನಾಲ್ ಅವರಿಗೆ ಅತೀವ ಆಸಕ್ತಿ ಬೆಳೆದಿದೆ. ಹನುಮಾನ್ ಮಂದಿರಲ್ಲಿ ಅನ್ನ ದಾಸೋಹ ಮಾಡಿಸುವ ಸಂಕಲ್ಪ ಮಾಡಿದ್ದ ಇವರಿಗೆ ಇದನ್ನು ಹೇಗೆ ಮಾಡುವುದು ಎನ್ನುವ ಪ್ರಶ್ನೆ ಉದ್ಭವಿಸಿದೆ. ಮೇನೇಜರ್ ನೀಡಿದ ಮಾಹಿತಿ ಮೇರೆಗೆ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ಕಿಶೋರ್ ಭೇಟಿ ನೀಡಿ ಅಲ್ಲಿಯ ಅನ್ನ ದಾಸೋಹ ವ್ಯವಸ್ಥೆ ನೋಡಿ ಮರಳಿದ್ದರು.
ರಾಜ್ಯದ ನಂಟು
ಶ್ರೀರಾಮ ಜನ್ಮಭೂಮಿ ಪಕ್ಕದಲ್ಲಿಯೇ ಹನುಮಾನ್ ಮಂದಿರವಿದ್ದು, ಇದನ್ನು ಕೂಡ ಕಿಶೋರ್ ಕುನಾಲ್ ಅವರೇ ಟ್ರಸ್ಟಿಯಾಗಿ ನೋಡಿಕೊಳ್ಳುತ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ವಣಕ್ಕೆ ಶಂಕುಸ್ಥಾಪನೆ ಮಾಡಿದ ಹಿನ್ನೆಲೆಯಲ್ಲಿ ಅನ್ನ ದಾಸೋಹ ಮಾಡಲು ನಿರ್ಧರಿಸಲಾಗಿದೆ. ಅದಕ್ಕೆ ಅಗತ್ಯವಿರುವ ಸ್ಟೀಂನಲ್ಲಿ ಅನ್ನ ಬೇಯಿಸುವ ದೊಡ್ಡ ದೊಡ್ಡ ಪಾತ್ರೆಗಳನ್ನು ಇಲ್ಲಿಂದಲೇ ನೋಡಿ ಆರ್ಡರ್ ಮಾಡಲಾಗಿದೆ. ಕುಕ್ಕೆ, ಧರ್ಮಸ್ಥಳಕ್ಕೆ ಸರಬರಾಜು ಮಾಡಿದವರೇ ಅಯೋಧ್ಯೆಗೂ ಸರಬರಾಜು ಮಾಡಿರುವುದು ವಿಶೇಷ.
ಮತ್ತೆ ಕರಸೇವೆ ಸಾಧ್ಯತೆ
ಬೆಂಗಳೂರು: ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಮತ್ತೊಮ್ಮೆ ಕರಸೇವೆ ಆಯೋಜನೆಯ ಸುಳಿವು ಲಭಿಸಿದೆ. ವಿಜಯವಾಣಿಯೊಂದಿಗೆ ಮಾತನಾಡಿದ ವಿಶ್ವ ಹಿಂದು ಪರಿಷತ್ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ಈಗ ಭೂಮಿ ಪೂಜೆಯ ಒಂದು ಹಂತ ಮುಗಿದಿದೆ. ಇನ್ನು ಮುಂದಿನ ಎಲ್ಲ ಕೆಲಸಗಳನ್ನು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿರ್ಧರಿಸುತ್ತದೆ. ಮುಂದಿನ ಎರಡೂವರೆ ವರ್ಷದಲ್ಲಿ ಮಂದಿರ ನಿರ್ವಣವಾಗಬೇಕೆಂಬ ಗುರಿ ಇದೆ ಎಂದು ಹೇಳಿದರು. ಮಂದಿರದ ವಿಚಾರದಲ್ಲಿ ವಿಶ್ವ ಹಿಂದು ಪರಿಷತ್ ಜವಾಬ್ದಾರಿ ಒಂದು ಹಂತಕ್ಕೆ ಮುಗಿದಿದೆ. ಮಂದಿರ ನಿರ್ಮಾಣ ಕಾರ್ಯದಲ್ಲಿ ಕರಸೇವೆಗೆ ಅವಕಾಶ ಕೊಡುವಂತೆ ವಿಎಚ್​ಪಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ಗೆ ಮನವಿ ಮಾಡಿದೆ. ಮನವಿಗೆ ಪುರಸ್ಕಾರ ಸಿಗುವ ವಿಶ್ವಾಸವಿದೆ. ಒಂದೊಂದು ಪ್ರಾಂತಕ್ಕೆ ಕೆಲವು ದಿನ ನಿಗದಿ ಮಾಡಲು ಮನವಿ ಮಾಡಿದ್ದೇವೆ. ಕರ್ನಾಟಕದ ಸರದಿ ಬಂದಾಗ ಇಲ್ಲಿಂದಲೂ ಕಾರ್ಯಕರ್ತರು ತೆರಳಲಿದ್ದಾರೆ. ಕರೊನಾ ಸಾಂಕ್ರಾಮಿಕ ಅಬ್ಬರ ತಗ್ಗಿದ ಮೇಲೆ ಈ ಬಗ್ಗೆ ತೀರ್ಮಾನ ಆಗಬಹುದು. ಸದ್ಯಕ್ಕೆ ನಿರ್ಮಾಣ ಕಾರ್ಯ ಈಗಿರುವ ವ್ಯವಸ್ಥೆಯಲ್ಲೇ ಮುಂದುವರಿಯಲಿದೆ ಎಂದು ಹೇಳಿದರು.
ಶಿಲಾನ್ಯಾಸದ ನಂತರ ಪ್ರಧಾನಿ ಮೋದಿ ಜೈ ಶ್ರೀರಾಮ್​ ಹೇಳದೆ, ಜೈ ಸಿಯಾ ರಾಮ್​ ಎಂದೇ ಹೇಳಿದ್ದೇಕೆ? ಕಾರಣ ಇಲ್ಲಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − three =
Remember me
