ನವದೆಹಲಿ:ಕರೊನಾ ಲಸಿಕೆ ವಿತರಣೆ ಪ್ರಕ್ರಿಯೆಯ ಪೂರ್ವ ಪ್ರಯೋಗ (ಡ್ರೖೆ ರನ್)ಕ್ಕೆ ಸೋಮವಾರ ಚಾಲನೆ ಸಿಕ್ಕಿದೆ. ಆಂಧ್ರ ಪ್ರದೇಶ, ಗುಜರಾತ್, ಪಂಜಾಬ್ ಮತ್ತು ಅಸ್ಸಾಂನ ತಲಾ ಎರಡು ಜಿಲ್ಲೆಗಳಲ್ಲಿ ಅಣಕು ಲಸಿಕೆ ಕಾರ್ಯಕ್ರಮ ಆಯೋಜಿಸಿ ಪೂರ್ವ ತಯಾರಿಗಳನ್ನು ಪರಿಶೀಲನೆ ನಡೆಸಲಾಗಿದೆ.
ಲಸಿಕೆ ಸಂಗ್ರಹ ಕೇಂದ್ರದಿಂದ ಲಸಿಕೆಯನ್ನು ವಿವಿಧ ಸ್ಥಳಗಳಲ್ಲಿರುವ ಶೈತ್ಯಾಗಾರಗಳಿಗೆ ಸಾಗಿಸುವುದು, ಅಲ್ಲಿ ಅವುಗಳನ್ನು ಸಂಗ್ರಹಿಸಿಟ್ಟು ಕೋವಿಡ್-19 ರೋಗಿಗಳಿಗೆ ನೀಡುವ ಪ್ರಕ್ರಿಯೆ ಇದರಲ್ಲಿ ಒಳಗೊಂಡಿರುತ್ತದೆ. ನೈಜ ಲಸಿಕೆ ಬಳಕೆಗೆ ಲಭ್ಯವಾದಾಗ ಸಾಗಾಟದಲ್ಲಿನ ಸಮಸ್ಯೆ, ಅಡ್ಡ-ಪರಿಣಾಮ ಮುಂತಾದವುಗಳನ್ನು ತಿಳಿದು ಕೊಂಡು ಅವುಗಳನ್ನು ನಿವಾರಿಸುವ ಗುರಿಯಿಂದ ಇದನ್ನು ಹಮ್ಮಿಕೊಳ್ಳಲಾಗಿದೆ. ಬೃಹತ್ ಲಸಿಕಾ ಕಾರ್ಯಕ್ರಮವನ್ನು ಸುಗಮವಾಗಿ ನಿರ್ವಹಿಸುವುದು ಇದರ ಉದ್ದೇಶವಾಗಿದೆ.
ಆಂಧ್ರದಲ್ಲಿ ಯಶಸ್ವಿ: ಡ್ರೖೆ ರನ್​ನ ಮೊದಲ ದಿನವಾದ ಸೋಮವಾರ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಕಾರ್ಯಕ್ರಮ ಸುಗಮವಾಗಿ ನಡೆದಿದೆ. ಐದು ಕೇಂದ್ರಗಳಲ್ಲಿ 25 ಆರೋಗ್ಯ ಕಾರ್ಯಕರ್ತರು ಲಸಿಕೆಯ ಫಲಾನುಭವಿಗಳಾಗಿ ಭಾಗವಹಿಸಿದ್ದರು. ‘ಪ್ರಕ್ರಿಯೆಯನ್ನು ಕೊ-ವಿನ್ ಆಪ್​ನಲ್ಲಿ ದಾಖಲಿಸಲಾಗಿದೆ. ಆಯ್ದ ರೋಗಿಗಳಿಗೆ ಎಸ್​ಎಂಎಸ್ ಕಳಿಸಿದ್ದೆವು. ಸಾಗಾಟ ಸಹಿತ ಪ್ರಕ್ರಿಯೆಯ ಸಮಯವನ್ನು ದಾಖಲಿಸಿಕೊಂಡಿದ್ದೇವೆ’ ಎಂದು ಕೃಷ್ಣಾ ಜಿಲ್ಲೆ ಜಿಲ್ಲಾಧಿಕಾರಿ ಇಮ್ತಿಯಾಜ್ ವಿವರಿಸಿದ್ದಾರೆ.
ಚೀನಾ ಪ್ರಜೆಗಳು ಭಾರತಕ್ಕೆ ಬರದಂತೆ ಕೇಂದ್ರ ಸರ್ಕಾರ ಯಾವುದೇ ನಿರ್ಬಂಧ ಹೇರಿಲ್ಲ ಎಂದು ವಿವಿಧ ವಿಮಾನಯಾನ ಸಂಸ್ಥೆಗಳು ಸೋಮವಾರ ಸ್ಪಷ್ಟಪಡಿಸಿವೆ. ಏರ್​ಲೈನ್ಸ್​ಗಳಿಗೆ ಔಪಚಾರಿಕವಾಗಿ ನಿರ್ದೇಶನ ನೀಡಲಾಗಿದೆ ಎಂಬ ವರದಿಗಳಲ್ಲಿ ಹುರುಳಿಲ್ಲ. ಚೀನಾ ಸಹಿತ ಎಲ್ಲ ದೇಶಗಳ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಕರೊನಾ ವೈರಸ್ ಹಿನ್ನೆಲೆಯಲ್ಲಿ ಭಾರತ ಸಹಿತ ಹಲವು ದೇಶಗಳ ಪ್ರಯಾಣಿಕರ ಮೇಲೆ ಚೀನಾ ನಿಷೇಧ ಹೇರಿದೆ. ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ, ಬಾಂಗ್ಲಾದೇಶ ಮತ್ತು ಫಿಲಿಪ್ಪೀನ್ಸ್ ಪ್ರಯಾಣಿಕರ ಮೇಲೂ ಚೀನಾ ನಿರ್ಬಂಧ ವಿಧಿಸಿದೆ.
ವುಹಾನ್ ನಗರದಲ್ಲಿ ಕರೊನಾ ವೈರಸ್ ಸ್ಪೋಟಗೊಂಡ ಸಮಯದಲ್ಲಿ ವರದಿ ಮಾಡಿದ್ದ ನಾಗರಿಕ-ಪತ್ರಕರ್ತೆಯೊಬ್ಬರಿಗೆ ಚೀನಾದ ನ್ಯಾಯಾಲಯ ನಾಲ್ಕು ವರ್ಷಗಳ ಸೆರೆವಾಸ ವಿಧಿಸಿದೆ. ಶಾಂತಿ ಭಂಗ ಆರೋಪದ ಮೇಲೆ 37 ವರ್ಷದ ಝಾಂಗ್ ಝಾನ್​ಗೆ ಶಿಕ್ಷೆ ವಿಧಿಸಿರುವುದಾಗಿ ಕೋರ್ಟ್ ಹೇಳಿದೆ. ಝಾಂಗ್, ಕರೊನಾ ವೈರಸ್ ಬಗ್ಗೆ ವರದಿ ಮಾಡಿದ್ದಕ್ಕಾಗಿ ಶಿಕ್ಷೆಗೊಳಗಾದ ಪ್ರಥಮ ವ್ಯಕ್ತಿ ಎಂದು ಹೇಳಲಾಗಿದೆ. ಆಸ್ಪತ್ರೆಗಳು ನೂರಾರು ಜನಜರಿಂದ ತುಂಬಿ ತುಳಕುತ್ತಿದ್ದ ಹಾಗೂ ರಸ್ತೆಗಳು ನಿರ್ಜನವಾಗಿದ್ದ ಬಗ್ಗೆ ಝಾಂಗ್ ವರದಿ ಮಾಡಿದ್ದರು. ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಝಾಂಗ್ ವಕೀಲರಾದ ರೆನ್ ಕ್ವಾನಿಯು ಹೇಳಿದ್ದಾರೆ.
ಕೋವಿಡ್-19 ಲಸಿಕೆ ನೀಡಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1000 ಬೂತ್​ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ನಗರದ 48 ಸರ್ಕಾರಿ ಮತ್ತು 120 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕಾ ಬೂತ್​ಗಳನ್ನು ಸ್ಥಾಪಿಸಲಾಗುತ್ತದೆ. ಮೊಹಲ್ಲಾ ಕ್ಲಿನಿಕ್​ಗಳನ್ನು ಕೂಡ ಬಳಸಲಾಗುತ್ತದೆ ಎಂದು ದೆಹಲಿಯ ಕೊವಿಡ್-19 ಲಸಿಕಾ ಕಾರ್ಯಪಡೆಯ ಸದಸ್ಯೆ ಸುನೀಲಾ ಗರ್ಗ್ ತಿಳಿಸಿದ್ದಾರೆ. 1ನೇ ಹಂತದಲ್ಲಿ ಪ್ರತಿದಿನ ಪ್ರತಿ ಬೂತ್​ನಲ್ಲಿ ತಲಾ ನೂರರಂತೆ ಕನಿಷ್ಠ 1 ಲಕ್ಷ ಜನರಿಗೆ ಲಸಿಕೆ ಹಾಕಲು ಯೋಜಿಸಲಾಗಿದೆ. ಪ್ರಥಮ ಹಂತದಲ್ಲಿ ಆಸ್ಪತ್ರೆಗಳನ್ನು ಮಾತ್ರ ಬಳಸಲಾಗುತ್ತದೆ. ನಂತರ ಶಾಲಾ ಕಟ್ಟಡಗಳಲ್ಲಿ ಕೂಡ ಲಸಿಕಾ ಬೂತ್ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.
ರಕ್ತನಾಳ ಸೋಂಕು ಇರುವವರಲ್ಲಿ ಕರೊನಾ ವೈರಸ್ ಹೆಚ್ಚಿನ ಆರೋಗ್ಯ ಸಮಸ್ಯೆ ಉಂಟುಮಾಡುವ ಅಪಾಯವಿದೆ ಎಂದು ಅಧ್ಯಯನವೊಂದು ಹೇಳಿದೆ. ಹೀಗಾಗಿ ಚಿಕಿತ್ಸೆಯ ಹೊಸ ತಂತ್ರ ಬಳಸಬೇಕಾಗಬಹು ದೆಂದು ಅದು ಅಭಿಪ್ರಾಯಪಟ್ಟಿದೆ. ‘ಕ್ಲಿನಿಕಲ್ ಇನ್​ಫೆಕ್ಷಸ್ ಡಿಸೀಸಸ್’ ಪತ್ರಿಕೆಯಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ. ರುಟ್​ಜರ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ.
ಕಾಸರಗೋಡು:ಕೋವಿಡ್-19 ಹಿನ್ನೆಲೆಯಲ್ಲಿ ಶಬರಿಮಲೆ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಸೀಮಿತವಾಗಿದ್ದ ಕಾರಣ, ದೇವಾಲಯದ ಆದಾಯದಲ್ಲಿ ಭಾರಿ ಕುಸಿತ ಕಂಡುಬಂದಿದೆ. ಮಂಡಲ ಉತ್ಸವ ಕಾಲಾವಧಿಯಲ್ಲಿ ಕಳೆದ ವರ್ಷ ಡಿಸೆಂಬರ್ 24ರ ವೇಳೆಗೆ ದೇಗುಲದ ಆದಾಯ 150 ಕೋಟಿ ರೂ. ದಾಟಿದ್ದರೆ, ಈ ಬಾರಿಯ ಆದಾಯ 9.9 ಕೋಟಿ ರೂ.ಗೆ ಇಳಿದಿದೆ. ಶಬರಿಮಲೆಯ ದೈನಂದಿನ ಚಟುವಟಿಕೆಗಳಿಗೆ ದಿನಕ್ಕೆ ದೇವಸ್ವಂ ಬೋರ್ಡ್​ಗೆ 50 ಲಕ್ಷ ರೂ. ಖರ್ಚು ತಗಲುತ್ತಿದೆ. ಈ ಬಾರಿಯ ಆದಾಯದಲ್ಲಿ ದೇವಸ್ಥಾನದ ಖರ್ಚು ಸರಿದೂಗಿಸಲು ಸಾಧ್ಯವಾಗದ ಸ್ಥಿತಿ ನಿರ್ವಣವಾಗಿದೆ. ಕಳೆದ ವರ್ಷ ಸರ್ಕಾರದಿಂದ ಲಭಿಸಿದ 50 ಕೋಟಿ ರೂ. ಮೊತ್ತದಲ್ಲಿ ದೈನಂದಿನ ಖರ್ಚು ವೆಚ್ಚಗಳನ್ನು ನಿಭಾಯಿಸಲಾಗುತ್ತಿದೆ.
ಕೋವಿಡ್ ಮಾರ್ಗಸೂಚಿ ವಿಸ್ತರಣೆ:ಕರೊನಾ ವೈರಸ್ ತಡೆಗಾಗಿ ವಿಧಿಸಿದ್ದ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಮುಂದಿನ ವರ್ಷ ಜನವರಿ 31ರ ವರೆಗೆ ವಿಸ್ತರಿಸಿದೆ. ದೇಶದಲ್ಲಿ ಕರೊನಾ ಸಕ್ರಿಯ ಪ್ರಕರಣಗಳು ಸತತವಾಗಿ ಕಡಿಮೆಯಾಗುತ್ತಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬ್ರಿಟನ್​ನಲ್ಲಿ ಕರೊನಾ ವೈರಸ್​ನ ರೂಪಾಂತರಿತ ಪ್ರಭೇದ ಪತ್ತೆಯಾಗಿ ಆತಂಕ ಸೃಷ್ಟಿಸಿರುವುದು ಕೂಡ ಮಾರ್ಗಸೂಚಿ ವಿಸ್ತರಣೆಗೆ ಕಾರಣವಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
