ನವದೆಹಲಿ:ಕಾಲಚಕ್ರದಲ್ಲಿ 2020 ಕಳೆದು ಹೋಗಿ 2021ಕ್ಕೆ ಕಾಲಿರಿಸುತ್ತಿರುವ ಹೊತ್ತಲ್ಲಿ ಜಗತ್ತಿನ ಬೃಹತ್ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಿದ್ಧರಾಗಿ. ಯಾವುದೇ ವದಂತಿಗಳಿಗೆ ಕಿವಿಗೊಡದಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ಅವರು ಇಂದು ಗುಜರಾತಿನ ಏಮ್ಸ್​ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ದೇಶದಲ್ಲಿ ಕೋವಿಡ್ 19 ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಮುಂದಿನ ವರ್ಷ ನಾವು ಜಗತ್ತಿನ ಅತಿದೊಡ್ಡ ಲಸಿಕಾ ಅಭಿಯಾನ ನಡೆಸುವುದಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ. ಆರೋಗ್ಯವೇ ಸಂಪತ್ತು. 2020ನೇ ಇಸವಿ ಇದನ್ನು ನಮಗೆ ಚೆನ್ನಾಗಿ ಅರ್ಥಮಾಡಿಸಿಕೊಟ್ಟಿತು. ಇದೊಂದು ವರ್ಷ ಪೂರ್ಣ ಸವಾಲಿನದ್ದೇ ವರ್ಷವಾಗಿತ್ತು. ಇವೆಲ್ಲದರ ನಡುವೆ ಜಾಗತಿಕ ಆರೋಗ್ಯದ ಕೇಂದ್ರ ಸ್ಥಾನವಾಗಿ ಭಾರತ ಮುನ್ನೆಲೆಗೆ ಬಂತು. 2021ರಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಭಾರತದ ಪಾತ್ರವನ್ನು ನಾವು ಇನ್ನಷ್ಟು ಬಲಪಡಿಸಬೇಕು. 2020ರಲ್ಲಿ ನಾನು ಹೇಳಿದ್ದೆ – ದವಾಯಿ ನಹಿ ತೋ ಧಿಲಾಯಿ ನಹಿ. ಈಗ ನಾನು ಹೇಳ್ತಾ ಇದ್ದೇನೆ 2021ರ ನಮ್ಮ ಮಂತ್ರ ದವಾಯಿ ಭೀ ಔರ್ ಕಡಾಯಿ ಭೀ.
ಇದನ್ನೂ ಓದಿ:ರಾಜ್ಯದ ಪಶುಸಂಗೋಪನಾ ಸಚಿವರ ತವರು ಜಿಲ್ಲೆಯಲ್ಲಿ ಪಶುಗಳ ಮಾರಣಹೋಮ?!
ನಮ್ಮ ದೇಶದಲ್ಲಿ ವದಂತಿಗಳು ಬಹುಬೇಗನೆ ಹರಡುತ್ತವೆ. ವಿಭಿನ್ನ ಜನರು ತಮ್ಮ ಸ್ವಾರ್ಥಕ್ಕೋಸ್ಕರ ಅಥವಾ ಬೇಜವಾಬ್ದಾರಿ ನಡವಳಿಕೆ ಕಾರಣ ಹಲವಾರು ವದಂತಿಗಳನ್ನು ಹರಡಬಹುದು. ಲಸಿಕಾ ಅಭಿಯಾನ ಶುರುವಾಗುತ್ತಿದ್ದಂತೆ ಇಂತಹ ರೂಮರ್​ಗಳ ಸಂಖ್ಯೆ ಹೆಚ್ಚಾಗಬಹುದು. ಈಗಾಗಲೇ ಕೆಲವು ಹುಟ್ಟಿಕೊಂಡಿವೆ. ದೇಶವಾಸಿಗಳಲ್ಲಿ ನನ್ನ ಮನವಿ ಇಷ್ಟೆ – ಕಣ್ಣಿಗೆ ಕಾಣದ ಶತ್ರುವಾಗಿರುವ ಕೋವಿಡ್ 19 ವಿರುದ್ಧ ನಾವೆಲ್ಲರೂ ಹೋರಾಡೋಣ. ವದಂತಿಗಳನ್ನು ಪರಿಶೀಲಿಸದೆ ನಂಬೋದಕ್ಕೆ ಹೋಗಬೇಡಿ ಮತ್ತು ಫಾರ್ವರ್ಡ್​ ಅಥವಾ ಹರಡುವುದಕ್ಕೂ ಹೋಗಬೇಡಿ. ಅರಿವುಳ್ಳವರಾಗಿ ವರ್ತಿಸೋಣ ಎಂದು ಪ್ರಧಾನಿ ಮೋದಿ ಹೇಳಿದರು. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + ten =
Remember me
