ನವದೆಹಲಿ:ಲಡಾಖ್​ನಲ್ಲಿನ ವಾಸ್ತವ ಗಡಿರೇಖೆಯ ಬಳಿ ಭಾರತ ಮತ್ತು ಚೀನಾ ಯೋಧರು ಯುದ್ಧಸನ್ನದ್ಧರಾಗಿ ಪರಸ್ಪರ ಬಿರುಗಣ್ಣಿನ ನೋಟ ಬೀರುತ್ತಾ ಕುಳಿತಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಯುದ್ಧ ಸ್ಫೋಟಿಸಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದರ್ಥದಲ್ಲಿ ನೋಡಿದರೆ 2017ರಲ್ಲಿ ಉಭಯ ದೇಶಗಳ ನಡುವೆ ಉಂಟಾಗಿದ್ದ ಡೊಕ್ಲಾಮ್​ ಬಿಕ್ಕಟ್ಟಿಗಿಂತ ಈ ಬಾರಿಯ ಬಿಕ್ಕಟ್ಟ ಬಹುದೊಡ್ಡದಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚೀನಾ ತನ್ನ ಭಾಗದಲ್ಲಿ 5 ಸಾವಿರಕ್ಕೂ ಹೆಚ್ಚು ಯೋಧರನ್ನು ಜಮಾವಣೆ ಮಾಡಿದೆ. ಜತೆಗೆ ಬಂಕರ್​ಗಳನ್ನು ನಿರ್ಮಿಸಲು ಬೃಹತ್​ ಯಂತ್ರೋಪಕರಣಗಳನ್ನೂ ತಂದಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಯೋಧರ ನಿಯೋಜನೆಯನ್ನು ಹೆಚ್ಚಿಸಿದೆ. ಪ್ರತಿಕೂಲ ಪರಿಸ್ಥಿತಿ ಹೊರತಾಗಿಯೂ ಭಾರತ ಈ ಕ್ರಮ ಕೈಗೊಂಡಿದೆ ಎಂದು ಭಾರತೀಯ ಸೇನಾಪಡೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಒಂದು ಕಡೆ ಮಾತ್ರವಲ್ಲ. ವಾಸ್ತವ ಗಡಿರೇಖೆಯ ನಾಲ್ಕು ಕಡೆಗಳಲ್ಲಿ ಅಂದರೆ ಗಾಲ್ವಾನ್​ ಕಣಿವೆಯ ಡಾರ್​ಬುಕ್​-ಶಯಾಕ್​-ದೌಲತ್​ ಬೇಗ್​ ಓಲ್ಡೀ ರಸ್ತೆಯಲ್ಲಿರುವ ಭಾರತೀಯ ಶಿಬಿರ ಕೆಎಂ120 ಸೇರಿ ಹಲವು ಆಯಕಟ್ಟಿನ ಜಾಗದಲ್ಲಿ ಚೀನಿ ಯೋಧರು ಬೀಡುಬಿಟ್ಟಿದ್ದಾರೆ ಎನ್ನಲಾಗಿದೆ.
ಚೀನಾದ ಈ ಅತಿಕ್ರಮಣ ತುಂಬಾ ಗಂಭೀರ ಸ್ವರೂಪದ್ದಾಗಿದೆ. ಇದು ಸಾಮಾನ್ಯ ರಿತಿ ಅತಿಕ್ರಮಣದಂತೆ ತೋರುತ್ತಿಲ್ಲ ಎಂದು ಮಾಜಿ ಉತ್ತರ ಸೇನಾ ಕಮಾಂಡರ್​ ಲೆಫ್ಟಿನೆಂಟ್​ ಜನರಲ್​ (ನಿವೃತ್ತ) ಡಿ.ಎಸ್​. ಹೂಡಾ ತಿಳಿಸಿದ್ದಾರೆ. ಗಾಲ್ವಾನ್​ ಕಣಿವೆಯಲ್ಲಿ ಯಾವುದೇ ವಿವಾದಗಳಿಲ್ಲದಿದ್ದರೂ ಚೀನಿ ಯೋಧರು ಈ ಪ್ರದೇಶದಲ್ಲಿ ಅತಿಕ್ರಮಣ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.ವ್ಯೂಹಾತ್ಮಕ ವ್ಯವಹಾರಗಳ ತಜ್ಞ ರಾಜತಾಂತ್ರಿಕ ಅಶೋಕ್​ ಕೆ ಕಾಂತಾ ಕೂಡ ಡಿ.ಎಸ್​. ಹೂಡಾ ಅವರ ಮಾತುಗಳನ್ನೇ ಪುನರುಚ್ಚರಿಸಿದ್ದಾರೆ. ಇದು ಸಾಮಾನ್ಯ ಅತಿಕ್ರಮಣದಂತೆ ತೋರುತ್ತಿಲ್ಲ. ಅಲ್ಲಿ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದೆ, ಚಿಂತೆಗೀಡು ಮಾಡುವಂತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಅಪ್ಪನ ಕಾರ್ಯ ಮಗ ಮಾಡಲ್ಲ ಎಂದ, ಅದನ್ನು ಮುಸ್ಲಿಮರು ನೆರವೇರಿಸಿದರು!
ಭಾರತ ಮತ್ತು ಚೀನಾ ನಡುವಿನ ಈ ಬಿಕಟ್ಟನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ರಾಜಕೀಯ ಹಾಗೂ ರಾಜತಾಂತ್ರಿಕ ಪ್ರಯತ್ನಗಳನ್ನು ತಕ್ಷಣವೇ ಆರಂಭಿಸುವುದು ಒಳಿತು. ಇಲ್ಲವಾದರೆ ಇದು ಡೊಕ್ಲಾಮ್​ ಬಿಕ್ಕಟ್ಟಿಗಿಂತ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮೇ 5ರಂದು ಪೂರ್ವ ಲಡಾಖ್​ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಭಾರತ ಮತ್ತು ಚೀನಾ ಯೋಧರು ಪರಸ್ಪರ ಘರ್ಷಣೆಗೆ ಇಳಿದಿದ್ದರು. ಇದು ಮರುದಿನವೂ ಮುಂದುವರಿದಿತ್ತು. ಈ ಘಟನೆಯಲ್ಲಿ ಎರಡೂ ಕಡೆಯ 100ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು. ಆದರೆ, ಸ್ಥಳೀಯ ಕಮಾಂಡರ್​ಗಳ ಮಟ್ಟದ ಸಭೆಯ ಬಳಿಕ ಪರಿಸ್ಥಿತಿ ತಿಳಿಗೊಂಡಿತ್ತು.
ಪ್ಯಾಂಗಾಂಗ್​ ತ್ಸೊನಲ್ಲಿನ ಈ ಘರ್ಷಣೆಯ ಬಳಿಕ ಉತ್ತರ ಸಿಕ್ಕಿಂನಲ್ಲಿ ಕೂಡ ಇದೇ ರೀತಿಯ ಘರ್ಷಣೆ ಪುನರಾವರ್ತನೆಗೊಂಡಿತ್ತು. ಈ ಘರ್ಷಣೆಗಳು ಪ್ರಸ್ತುತ ಬಿಕ್ಕಟ್ಟಿಗೆ ಕಾರಣವಾಗಿವೆ.
COVID19 ಮೂಲ ಪತ್ತೆ ವಿಚಾರದಲ್ಲಿ ಚೀನಾದ ಮುಕ್ತವಾಗಿದೆ ಎಂದು ಪ್ರಶಂಸಿಸಿದ ಡಬ್ಲ್ಯುಎಚ್​ಒ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 9 =
Remember me
