ಬಹಳ ಸಂಕೋಚ ಸ್ವಭಾವದ ಹರೇಕಳ ಹಾಜಬ್ಬ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಾತಿಗೆ ಸಿಕ್ಕರು. ಹಾಜಬ್ಬರನ್ನು ಕಂಡ ಕೂಡಲೇ, ‘ಓಹ್! ಆರೆಂಜ್ ಸೆಲ್ಲರ್.. ಬಹುತ್ ಖುಷ್ ಹುವಾ ಆಪ್ಕೋ ದೇಖ್ ಕೇ.. ಹಮಾರೆ ತರಫ್ ಸೇ ಆಪ್ಕೋ ಬೆಸ್ಟ್ ವಿಷಸ್’ ಎಂದು ಹೆಗಲು ಮುಟ್ಟಿ, ನಂತರ ಕೈಕುಲುಕಿ ಶೇಕ್ ಶುಭ ಹಾರೈಸಿದರು ಎಂದು ಹಾಜಬ್ಬರ ಜತೆಗೆ ಬಂದಿದ್ದ ಸಂಬಂಧಿ ಅಶ್ರಫ್ ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡರು. ಹಾಜಬ್ಬ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕಾರಕ್ಕೆಂದು ತೆರಳಿದಾಗ ಚಪ್ಪಲಿಯನ್ನು ತಾವು ಕೂತಿದ್ದ ಸ್ಥಳದಲ್ಲೇ ಬಿಟ್ಟು ಬರಿಗಾಲಲ್ಲಿ ಹೋದರು. ಪಂಚೆ, ಅಂಗಿ, ಅದರ ಮೇಲೊಂದು ಸಾಮಾನ್ಯ ಶಾಲು ಹೊದ್ದುಕೊಂಡು ಮುಗ್ಧವಾಗಿ ಪ್ರಶಸ್ತಿ ಸ್ವೀಕರಿಸಿದ ಕ್ಷಣಗಳು ಅಪೂರ್ವವಾಗಿದ್ದವು. ಪ್ರಶಸ್ತಿ ಸ್ವೀಕಾರಕ್ಕೆಂದು ದೆಹಲಿಗೆ ಬಂದ ಎಲ್ಲ ಸಾಧಕರ ಖರ್ಚು ವೆಚ್ಚಗಳನ್ನು ಕೇಂದ್ರ ಸರ್ಕಾರ ಭರಿಸುತ್ತದೆ. ಅಶೋಕ ಹೋಟೆಲ್​ನಲ್ಲಿದ್ದ ಹಾಜಬ್ಬರಿಗೆ ಗೃಹ ಇಲಾಖೆ ಸಿಬ್ಬಂದಿ ಪೊಸಪಡ್ಪು(ನ್ಯೂಪಡ್ಪು)ವಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಖರ್ಚನ್ನು ನಾವು ಕೊಡುತ್ತೇವೆ ಎಂದು ಹೇಳಿದರು. ‘ಇಲ್ಲ, ನನಗೆ ಬೇಡ. ಜಿಲ್ಲಾಧಿಕಾರಿ ಕಚೇರಿಯವರೇ ಎಲ್ಲವನ್ನೂ ನೋಡಿಕೊಂಡಿದ್ದಾರೆ’ ಎಂದರು. ಆದರೂ, ಟ್ಯಾಕ್ಸಿ ವೆಚ್ಚ ಎಂದು ನೀವು ತೆಗೆದುಕೊಳ್ಳಬಹುದು ಎಂದು ಸಿಬ್ಬಂದಿ ಹೇಳಿದ್ದಕ್ಕೆ, ‘ಓಡಾಟದ ಖರ್ಚು ಅವರು ಕೊಟ್ಟಿರುವಾಗ ನಾನು ನಿಮ್ಮಿಂದ ದುಡ್ಡು ತೆಗೆದುಕೊಳ್ಳುವುದು ತಪ್ಪಾಗುತ್ತದೆ’ ಎಂದು ಕೈ ಮುಗಿದು ಧನ್ಯವಾದ ತಿಳಿಸಿದರು.

ನನ್ನ ಊರಾದ ಹರೇಕಳದಲ್ಲಿ ಪದವಿಪೂರ್ವ ಕಾಲೇಜು ಸ್ಥಾಪನೆಯಾಗಬೇಕೆಂಬ ನನ್ನ ಕನಸು ನನಸಾಗಬೇಕು. ನಾನು ಶಾಲೆಗೆ ಹೋದವನಲ್ಲ. ನನ್ನ ಹಾಗೆ ಇತರರು ಆಗಬಾರದೆಂದು ಶಾಲೆ ನಿರ್ವಣದ ಕನಸು ಕಂಡೆ. ಹಲವರ ಸಹಕಾರದಿಂದ ಇದು ಸಾಧ್ಯವಾಯಿತು. ಈಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನನ್ನ ಊರಿಗೆ ಪಿಯು ಕಾಲೇಜು ಮಂಜೂರು ಮಾಡಬೇಕು, ಅಗತ್ಯವಾಗಿರುವ 1 ಕೋಟಿ ರೂಪಾಯಿಷ್ಟು ಅನುದಾನ ನೀಡಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ.
|ಹರೇಕಳ ಹಾಜಬ್ಬ
ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಅವರು ನಮ್ಮ ನಾಡಿನ ಹೆಮ್ಮೆಯ ಸಾಧಕರು. ಸ್ವಶ್ರಮ, ಸತ್ಯಶುದ್ಧ ಕಾಯಕದಿಂದ ಮುಂದೆ ಬಂದವರು.
|ಮನು ಬಳಿಗಾರ್ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ
ಡಾ. ವಿಜಯ ಸಂಕೇಶ್ವರ ಅವರು ಸಚ್ಚಾರಿತ್ರ್ಯದ ವ್ಯಕ್ತಿ. ಸಾರಿಗೆ ಉದ್ಯಮದಲ್ಲಿ ಅವರ ಸಾಧನೆ ಗಣನೀಯ. ನಾಲ್ಕು ದಶಕಗಳ ಅವರ ಕಾಯಕ ನಿಷ್ಠೆಗೆ ಸಂದ ಗೌರವ ಇದು. ಸಂಕೇಶ್ವರ ಅವರ ಸಾಧನೆಗೆ ಸರಿಸಾಟಿಯೇ ಇಲ್ಲ.
|ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳುಶ್ರೀಕಾಶಿ ಜಗದ್ಗುರುಗಳು
ಡಾ. ವಿಜಯ ಸಂಕೇಶ್ವರ ಅವರು ದೇವರು ನಾಡಿಗೆ ನೀಡಿದ ಕೊಡುಗೆ. ಸಂಕೇಶ್ವರರಿಂದ 20 ಸಾವಿರ ಕುಟುಂಬಗಳು ಬದುಕುತ್ತಿವೆ. ಕೆಲಸ ಮಾಡುವವರನ್ನು ಪೋ›ತ್ಸಾಹಿಸುವ ದೊಡ್ಡಗುಣಕ್ಕೆ ದೊಡ್ಡ ಪ್ರಶಸ್ತಿ ಬಂದಿದೆ.
|ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳುಹುಕ್ಕೇರಿ
ಶಿಸ್ತಿನ ಸಿಪಾಯಿ, ಸಮಯಪಾಲಕ, ಸಂಪೂರ್ಣ ಭಾರತೀಯ ಸಂಪ್ರದಾಯಸ್ಥರು, ಶುದ್ಧ ಆಚಾರ- ವಿಚಾರ, ನಡೆ-ನುಡಿ, ನಿಂತ ನೀರಿನಂತಿದ್ದ ಪತ್ರಿಕಾರಂಗವನ್ನು ಚೈತನ್ಯಗೊಳಿಸಿದ ಸಾಧಕರು, ಸಾರಿಗೆ ಕ್ಷೇತ್ರ, ಎಲೆಕ್ಟ್ರಾನಿಕ್ ಮೀಡಿಯಾ ಸೇರಿ ಅನೇಕ ರಂಗಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ಡಾ. ವಿಜಯ ಸಂಕೇಶ್ವರಗೆ ಪದ್ಮಶ್ರೀ ದೊರಕಿದ್ದು ಪ್ರಶಸ್ತಿಗೆ ಗೌರವ ದೊರಕಿದಂತಾಗಿದೆ.
|ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರುಶ್ರೀಶೈಲ ಜಗದ್ಗುರು, ಶ್ರೀಶೈಲಂ
ಕಾಲಿಗೆ ಎಳೆದರೆ ತಲೆಗೆ ಇಲ್ಲ, ತಲೆಗೆ ಇದ್ದರೆ ಕಾಲಿಗೆ ಇಲ್ಲ ಎನ್ನುವಂತಿರುವ ಸಾರಿಗೆ ಕ್ಷೇತ್ರದಲ್ಲಿ ದುಡಿದು ಗಿನ್ನೇಸ್ ದಾಖಲೆ ಬರೆಯುವ ಮುಖೇನ ಅತ್ಯಂತ ಅಧಿಕ ಕಾರ್ವಿುಕರಿಗೆ ಉದ್ಯೋಗ ಕೊಟ್ಟು ಲಾಭದಾಯಕ ಉದ್ಯಮವನ್ನು ಉತ್ತಮವಾಗಿ ನಡೆಸಿ ಮನೆಮಾತಾಗಿರುವ ಸಂಕೇಶ್ವರರು ಹೆಮ್ಮೆಯ ಕನ್ನಡದ ಕುವರ ಎಂಬುದು ಹೆಮ್ಮೆ ವಿಚಾರ. ಅವರಿಗೆ ಶುಭಾಶಯಗಳು
|ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ

ನನಗೆ ಬಿಡುವಿಲ್ಲದ ಕೆಲಸವಿದ್ದ ದಿನಗಳಲ್ಲಿ ಪತ್ನಿ ಲಲಿತಾ ಸಂಸಾರ ನೋಡಿಕೊಂಡು, ಮಕ್ಕಳ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಳು. ಸಂಕಷ್ಟದ ದಿನಗಳಲ್ಲಿ ನನ್ನೊಂದಿಗೆ ಧೈರ್ಯವಾಗಿ ನಿಂತುಕೊಂಡಿದ್ದಾಳೆ. ನಾನು ನಿರಾಶಾವಾದಿಯಲ್ಲ. ಆದರೆ ಯಾವಾಗಲಾದರೂ ಮನಸ್ಸಿಗೆ ಬೇಸರ, ದಣಿವು ಅಥವಾ ಜಿಗುಪ್ಸೆ ಉಂಟಾದಾಗ ನನ್ನಾಕೆ ಮಾನಸಿಕ ಧೈರ್ಯ ತುಂಬುತ್ತಾಳೆ. ಅವಳು ನನಗೆ ದೊಡ್ಡ ಶಕ್ತಿಯಾಗಿ, ಮನೋಬಲ ಹೆಚ್ಚಿಸುವಲ್ಲಿ ತುಂಬಾ ನೆರವಾಗಿದ್ದಾಳೆ.
|ಡಾ. ವಿಜಯ ಸಂಕೇಶ್ವರ

ಪತಿ ಡಾ. ವಿಜಯ ಸಂಕೇಶ್ವರ ಅವರ ಸಾಧನೆ ಮತ್ತು ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿರುವ ಬಗ್ಗೆ ಖುಷಿಯಾಗಿದೆ. ಅವರು ಶಿಸ್ತಿನ ವ್ಯಕ್ತಿ. ಅವರ ಎಲ್ಲಾ ಕೆಲಸದಲ್ಲೂ ನಾನು ಬೆಂಬಲಿಗಳಾಗಿ ನಿಲ್ಲುತ್ತೇನೆ.
|ಶ್ರೀಮತಿ ಲಲಿತಾ ಸಂಕೇಶ್ವರ

ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು, ಸಾಮಾಜಿಕ ಕಾರ್ಯಕರ್ತ ಡಾ.ಅನಿಲ್ ಪ್ರಕಾಶ್ ಜೋಶಿ, ಸಾರ್ವಜನಿಕ ವ್ಯವಹಾರ ನಿಪುಣ ಡಾ.ಎಸ್.ಸಿ. ಜಮೀರ್, ಅಧ್ಯಾತ್ಮ ಸಾಧಕ ಮುಮ್ತಾಝå್ ಅಲಿ ಪದ್ಮ ಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ಮ್ಯೂಸಿಕ್ ಕಂಪೋಸರ್ ಅದ್ನಾನ್ ಸಮಿ, ಬಾಲಿವುಡ್ ನಟಿ, ಸಿನಿಮಾ ನಿರ್ವಪಕಿ ಕಂಗನಾ ರಾಣಾವತ್, ಭಾರತದ ಹಾಕಿ ತಂಡದ ನಾಯಕಿ ರಾಣಿ ಸೇರಿ ಪ್ರಮುಖರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.
ಪದ್ಮವಿಭೂಷಣ:ಡಾ.ಬಿ.ಎಂ.ಹೆಗ್ಡೆ, ವೈದ್ಯಕೀಯ ಕ್ಷೇತ್ರಪದ್ಮಭೂಷಣ:ಚಂದ್ರಶೇಖರ ಕಂಬಾರ – ಸಾಹಿತ್ಯ ಮತ್ತು ಶಿಕ್ಷಣಪದ್ಮಶ್ರೀ:ಮಾತಾ ಬಿ. ಮಂಜಮ್ಮ ಜೋಗತಿ, ಕಲಾ ಕ್ಷೇತ್ರ ರಂಗಸಾಮಿ ಲಕ್ಷ್ಮೀನಾರಾಯಣ ಕಶ್ಯಪ್, ಸಾಹಿತ್ಯ ಮತ್ತು ಶಿಕ್ಷಣ, ಕೆ.ವೈ.ವೆಂಕಟೇಶ್ -ಕ್ರೀಡಾ ಕ್ಷೇತ್ರ
ಮರಣೋತ್ತರ ಪ್ರಶಸ್ತಿ:ಪೇಜಾವರ ಶ್ರೀ ವಿಶ್ವೇಶತೀರ್ಥ ಸಾಮ್ವೀಜಿ, ಮಾಜಿ ಸಚಿವರಾದ ಜಾರ್ಜ್ ಫರ್ನಾಂಡಿಸ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಅಲ್ಲದೆ, ಗಾಯಕ ಪಂಡಿತ್ ಛನ್ನುಲಾಲ್ ಮಿಶ್ರಾ ಅವರಿಗೂ ಮರಣೋತ್ತರವಾಗಿ ಪದ್ಮವಿಭೂಷಣ ಪ್ರದಾನ ಮಾಡಲಾಗಿದೆ. ಜೇಟ್ಲಿ ಪರವಾಗಿ ಅವರ ಪತ್ನಿ, ಸುಷ್ಮಾ ಪರವಾಗಿ ಅವರ ಪುತ್ರಿ, ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪರವಾಗಿ ಅವರ ಪಟ್ಟದ ಶಿಷ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶಸ್ತಿ ಸ್ವೀಕರಿಸಿದರು.
ಅಭಿನಂದನೆ ಮಹಾಪೂರ:ಪದ್ಮ ಪ್ರಶಸ್ತಿ ವಿಜೇತರಾದ ಡಾ. ವಿಜಯ ಸಂಕೇಶ್ವರ ಸೇರಿದಂತೆ ನಾಡಿನ ಗಣ್ಯರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಶಸ್ತಿ ಸ್ವೀಕಾರ ಸಮಾರಂಭದ ಫೋಟೋವನ್ನು ಹಂಚಿಕೊಂಡು ಅನೇಕರು ಸಂಭ್ರಮಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟ ಸದಸ್ಯರು, ವಿವಿಧ ಸಂಘಟನೆಗಳು ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಚಿವರಾದ ಅಶ್ವತ್ಥನಾರಾಯಣ ಗೌಡ, ಮುರುಗೇಶ್ ನಿರಾಣಿ, ಸುಧಾಕರ್, ಸುನೀಲ್ ಕುಮಾರ್ ನಾರಾಯಣಗೌಡ, ಆರಗ ಜ್ಞಾನೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಸೇರಿ ಶಾಸಕರನೇಕರು ಪದ್ಮ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದಾರೆ.

ಪೇಜಾವರ ಶ್ರೀಗಳು:ಉಡುಪಿ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ನಿರ್ಯಾಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದ ವಿಚಾರ ತಿಳಿದು ಸಂತೋಷವಾಗಿದೆ. ಪೂಜ್ಯರು ಸರ್ವಧರ್ವಿುಯರಿಂದಲೂ ಗೌರವಿಸಲ್ಪಟ್ಟು, ಅವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಸಮಗ್ರ ಹಿಂದು ಸಮಾಜದ ಸಂಘಟನೆ ಮತ್ತು ಬಲವರ್ಧನೆಗೆ ಅವರು ನಿರಂತರ ಮಾರ್ಗದರ್ಶನ, ಪ್ರೇರಣೆ ಮತ್ತು ಪ್ರೋತ್ಸಾಹ ನೀಡುತ್ತಿದ್ದರು.
ಡಾ.ವಿಜಯ ಸಂಕೇಶ್ವರ:ಡಾ.ವಿಜಯ ಸಂಕೇಶ್ವರ ಅವರು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಅನುಪಮ ಸೇವೆ-ಸಾಧನೆಯನ್ನು ಮನ್ನಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ ವಿಚಾರ ತಿಳಿದು ಸಂತೋಷವಾಯಿತು. ಅವರು ರಾಜಕೀಯ, ಧಾರ್ವಿುಕ, ಸಾಮಾಜಿಕ ಹಾಗೂ ಸಮೂಹ ಮಾಧ್ಯಮ ಕ್ಷೇತ್ರದಲ್ಲಿ ವಿಶೇಷ ಸೇವೆ ಮಾಡಿರುವುದಲ್ಲದೆ ಸಾವಿರಾರು ಮಂದಿಗೆ ಉದ್ಯೋಗ ನೀಡಿ ಸ್ವಾವಲಂಬಿ ಜೀವನಕ್ಕೆ ಪ್ರೇರಣೆ, ಪ್ರೋತ್ಸಾಹ ನೀಡಿದ್ದಾರೆ. ಅವರ ದಕ್ಷ ನೇತೃತ್ವದಲ್ಲಿ ನಡೆಸಲ್ಪಡುತ್ತಿರುವ ವಿ.ಆರ್.ಎಲ್. ಸಮೂಹ ಸಂಸ್ಥೆ ದೇಶದಲ್ಲೇ ಅತ್ಯಂತ ಜನಪ್ರಿಯ ಸರಕು ಸಾಗಾಣಿಕೆಯ ಉದ್ಯಮ ಎಂಬ ಖ್ಯಾತಿ ಪಡೆದಿದೆ. ಅವರಿಗೆ ಸರ್ವರೀತಿಯ ಯಶಸ್ಸನ್ನು ಹಾರೈಸುತ್ತ, ಮುಂದೆಯೂ ಹೆಚ್ಚಿನ ಸೇವೆ-ಸಾಧನೆ ಮಾಡುವಂತೆ ಶ್ರೀ ಮಂಜುನಾಥ ಸ್ವಾಮಿ ದೀರ್ಘಾಯುರಾರೋಗ್ಯವನ್ನಿತ್ತು ಸಕಲ ಸನ್ಮಂಗಲವನ್ನುಂಟು ಮಾಡಲೆಂದು ಪ್ರಾರ್ಥಿಸುತ್ತೇನೆ.
ಹರೇಕಳ ಹಾಜಬ್ಬ:ಶಿಕ್ಷಣ ಕ್ಷೇತ್ರದಲ್ಲಿ ಹರೇಕಳ ಹಾಜಬ್ಬನವರು ಸಲ್ಲಿಸಿದ ಸೇವೆಯನ್ನು ಮನ್ನಿಸಿ ಪದ್ಮಶ್ರೀ ಪುರಸ್ಕಾರದೊಂದಿಗೆ ಗೌರವಿಸಿದ ವಿಚಾರ ತಿಳಿದು ಸಂತೋಷವಾಯಿತು. ಕಿತ್ತಳೆ ಹಣ್ಣು ಮಾರಾಟದಿಂದ ಬಂದ ಲಾಭಾಂಶವನ್ನು ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗಿಸಿರುವುದು ಅವರ ಶಿಕ್ಷಣ ಪ್ರೀತಿಗೆ ಸಾಕ್ಷಿಯಾಗಿದೆ. ಅವರಿಗೆ ಸರ್ವ ರೀತಿಯ ಯಶಸ್ಸನ್ನು ಹಾರೈಸುತ್ತ, ಇನ್ನೂ ಹೆಚ್ಚಿನ ಸೇವೆ-ಸಾಧನೆ ಮಾಡುವಂತೆ ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.
ಕಾರವಾರ:ಪದ್ಮಶ್ರೀ ಪ್ರಶಸ್ತಿಯನ್ನು ಅಂಕೋಲಾದ ವೃಕ್ಷಮಾತೆ ತುಳಸಿ ಗೋವಿಂದ ಗೌಡ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಸೋಮವಾರ ಸ್ವೀಕರಿಸಿದರು. ತುಳಸಿ ಗೌಡ ಅವರು ನವದೆಹಲಿಯ ರಾಷ್ಟ್ರಪತಿ ಭವನಕ್ಕೂ ಬರಿಗಾಲಲ್ಲೇ ತೆರಳಿ ಅಚ್ಚರಿ ಮೂಡಿಸಿದ್ದಾರೆ. ಮಣ್ಣು ಕಾಲಿಗಂಟಿಸಿಕೊಂಡು ಲಕ್ಷಾಂತರ ಸಸಿ ನೆಟ್ಟು ಪೋಷಿಸಿದ ತುಳಸಿ ಗೌಡ ಅವರಿಗೆ ಕಾಲಿಗೆ ಚಪ್ಪಲಿ ಹಾಕಿಯೇ ರೂಢಿಯಿಲ್ಲ. ರಾಜ್ಯದ ವಿವಿಧೆಡೆ ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ ಆಗಲೂ ಅವರು ಚಪ್ಪಲಿ ಹಾಕಿರಲಿಲ್ಲ. ತುಳಸಿ ಗೌಡ ಸೊಸೆ ವೆಂಕಮ್ಮ, ಮೊಮ್ಮಕ್ಕಳಾದ ಶೇಖರ ಗೌಡ, ಹೇಮ ಹಾಗೂ ಲಂಬೋದರ ಕುಟುಂಬದ ಸ್ನೇಹಿತರ ಜತೆಗೆ ನವೆಂಬರ್ 7 ರಂದು ನವದೆಹಲಿಗೆ ತೆರಳಿದ್ದರು.
ಪದ್ಮ ಪ್ರಶಸ್ತಿ ಪುರಸ್ಕೃತರಾದ ಎಲ್ಲ ಸಾಧಕರ ಸಾಧನೆಗಳು ಪ್ರೇರಣಾದಾಯಕ. ಬಡ ಕುಟುಂಬದಲ್ಲಿ ಜನಿಸಿದರೂ, ಸತತ ಪರಿಶ್ರಮದಿಂದ ಬೃಹತ್ ಉದ್ಯಮಿಯಾಗಿ ಬೆಳೆದ ವಿಆರ್​ಎಲ್ ಸಂಸ್ಥೆ ಅಧ್ಯಕ್ಷರು, ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
|ಬಿ.ಎಸ್.ಯಡಿಯೂರಪ್ಪಮಾಜಿ ಸಿಎಂ
ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಕರ್ನಾಟಕದ ವ್ಯಾಪಾರ ಮತ್ತು ಸಾರಿಗೆ ಉದ್ಯಮದ ದಿಗ್ಗಜ ವಿಜಯ ಸಂಕೇಶ್ವರ ಅವರಿಗೆ ಅಭಿನಂದನೆಗಳು. ರಾಜ್ಯದಲ್ಲಿ ವ್ಯಾಪಾರ ಮತ್ತು ಉದ್ಯಮದ ಅಭಿವೃದ್ಧಿಗೆ ಅವರ ಕೊಡುಗೆಗಳು ಉದ್ಯಮಶೀಲತೆಯಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿವೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಡಾ. ವಿಜಯ ಸಂಕೇಶ್ವರ ಅವರು ಸಾರಿಗೆ ಮತ್ತು ಸುದ್ದಿ ಮಾಧ್ಯಮದಲ್ಲಿ ಸಲ್ಲಿಸುತ್ತಿರುವ ಸೇವೆ ಅಪಾರ. ಇಡೀ ನಾಡು ಹೆಮ್ಮೆ ಪಡುವ ವ್ಯಕ್ತಿತ್ವ ಅವರದ್ದು. ಧರ್ಮವಂತರಾದ ಅವರಿಗೆ ಪದ್ಮಶ್ರೀ ಸೂಕ್ತ ಗೌರವ.
|ಡಾ. ಮಹಾಂತಲಿಂಗ ಸ್ವಾಮೀಜಿವಿಭೂತಿಪುರ ಮಠ
ಸುಧರ್ಮಕ್ಕೆ ಪದ್ಮಶ್ರೀ:ಸಂಸ್ಕೃತದಲ್ಲಿ ಪ್ರಕಟವಾಗುತ್ತಿರುವ ಮೈಸೂರಿನ ‘ಸುಧರ್ಮ’ ಪತ್ರಿಕೆಗಾಗಿ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಪತ್ರಿಕೆ ಪರವಾಗಿ ಸಂಪಾದಕೀಯ ಮಂಡಳಿಯ ಕೆ.ಎಸ್.ಜಯಲಕ್ಷ್ಮೀ ಅವರು ಸೋಮವಾರ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಸ್ವೀಕರಿಸಿದರು. ಪತ್ರಿಕೆ ಸಂಪಾದಕರಾದ ಸಂಪತ್​ಕುಮಾರ್ ಮತ್ತು ಅವರ ಪತ್ನಿ ಜಯಲಕ್ಷ್ಮೀ ಅವರಿಗೆ 2020ನೇ ಸಾಲಿಗೆ ಜಂಟಿಯಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಘೊಷಿಸಲಾಗಿತ್ತು. ಆದರೆ ಸಂಪತ್​ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 1970ರಲ್ಲಿ ವರದರಾಜ ಅಯ್ಯಂಗಾರ್ ಪ್ರಾರಂಭಿಸಿದ್ದ ಸಂಸ್ಕೃತ ದಿನಪತ್ರಿಕೆ, 1990ರಲ್ಲಿ ವರದರಾಜ ನಿಧನದ ನಂತರ ಪತ್ರಿಕೆಯನ್ನು ಸಂಪತ್​ದಂಪತಿ ನಡೆಸಿಕೊಂಡು ಬರುತ್ತಿದ್ದರು.



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − fifteen =
Remember me
