ನವದೆಹಲಿ:ಸಂಸತ್​ನ ಚಳಿಗಾಲ ಅಧಿವೇಶನದ ಮೊದಲ ದಿನವಾದ ಬುಧವಾರ ಬಹುರಾಜ್ಯ ಸಹಕಾರ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಸರ್ಕಾರ ಮಂಡಿಸಿತು. ಇದರಿಂದ ಸಹಕಾರ ಸಂಘಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೆಚ್ಚುತ್ತದೆ ಎಂದು ಲೋಕಸಭೆಯಲ್ಲಿ ಈ ತಿದ್ದುಪಡಿ ಮಂಡಿಸಿದ ಸಹಕಾರ ಖಾತೆ ರಾಜ್ಯ ಸಚಿವ ಬಿ.ಎಲ್.ವರ್ವ ಹೇಳಿದರು. ಆದರೆ ಇದನ್ನು ವಿರೋಧಿಸಿದ ಪ್ರತಿ ಪಕ್ಷಗಳು, ಸಹಕಾರ ವಲಯದಲ್ಲಿ ಸರ್ಕಾರದ ಹಸ್ತಕ್ಷೇಪ ಹೆಚ್ಚಿಸುವ ದುರುದ್ದೇಶ ಇದ್ದಂತಿದೆ. ಆದ್ದರಿಂದ ಮಸೂದೆಯನ್ನು ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದವು.
ಸಹಕಾರ ಸಂಘಗಳಲ್ಲಿನ ಆಡಳಿತ ಬಲಗೊಳಿಸುವುದು, ಆಂತರಿಕ ಚುನಾವಣೆಯಲ್ಲಿ ಸುಧಾರಣೆ, ನಿಗಾವಣಾ ವ್ಯವಸ್ಥೆಯನ್ನು ಚುರುಕುಗೊಳಿಸುವ ಮೂಲಕ ಸುಗಮ ವಹಿವಾಟನ್ನು ಈ ತಿದ್ದುಪಡಿ ಖಾತ್ರಿಗೊಳಿಸುತ್ತದೆ ಎಂದ ಸಚಿವ ಬಿ.ಎಲ್.ವರ್ವ ತಿದ್ದುಪಡಿಯನ್ನು ಸಮರ್ಥಿಸಿ ಕೊಂಡರು. ಸಹಕಾರ ವಿಷಯವು ರಾಜ್ಯಗಳ ಪಟ್ಟಿಗೆ ಸಂಬಂಧಿಸಿದ್ದು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದರಲ್ಲೇಕೆ ಕೇಂದ್ರ ಸರ್ಕಾರ ಮೂಗುತೂರಿಸಬೇಕು? ಎಂದು ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಅಧಿರ್ ರಂಜನ್ ಚೌಧರಿ ಪ್ರಶ್ನಿಸಿದರು. ಅಧಿಕಾರ ಕೇಂದ್ರೀಕರಣವೇ ಈ ಸರ್ಕಾರದ ಉದ್ದೇಶ. ಆದ್ದರಿಂದಲೇ ಈ ಮಸೂದೆ ಮಂಡಿಸಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಜಗಳಕ್ಕೆ ಆಸ್ಪದ ಆಗುತ್ತದೆ. ಬಹುರಾಜ್ಯಗಳ ಸಹಕಾರ ಸೊಸೈಟಿಗಳ ಸ್ವಾಯತ್ತೆಗೆ ಧಕ್ಕೆ ತಂದು ಅವುಗಳ ದುರ್ಬಳಕೆಗೆ ಕಾರಣವಾಗುತ್ತದೆ. ಆದ್ದರಿಂದ ಈ ಮಸೂದೆಯು ಕೂಲಂಕಷ ಪರಿಶೀಲನೆಗೆ ಒಳಪಡಬೇಕು. ಇದನ್ನು ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಳಪಡಿಸುವುದು ಸೂಕ್ತ ಎಂದರು.
ಚೌಧರಿಯವರ ಈ ವಾದವನ್ನು ಡಿಎಂಕೆಯ ನಾಯಕ ಆರ್. ಬಾಲು, ಆರ್​ಎಸ್​ಪಿ ಮುಖಂಡ ಎನ್.ಕೆ. ಪ್ರೇಮಚಂದ್ರನ್ ಅನುಮೋದಿಸಿ ದರು. ಸಹಕಾರ ಸಂಘಗಳ ಸ್ವಾಯತ್ತೆಯನ್ನು ಕಿತ್ತು ಕೊಳ್ಳುವ ಈ ಮಸೂದೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಕಾಂಗ್ರೆಸ್​ನ ಮನಿಷ್ ತಿವಾರಿ ಆಗ್ರಹಿಸಿದರು. ಸದನ ಸಮಾವೇಶಗೊಳ್ಳುತ್ತಿದ್ದಂತೆ ಅಗಲಿದ ನಾಯಕರಾದ ಸಮಾಜವಾದಿ ಪಕ್ಷ ಮುಲಾಯಂ ಸಿಂಗ್ ಯಾದವ್ ಮತ್ತು ಲೋಕಸಭೆಯ ಎಂಟು ಮಾಜಿ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಧ್ಯಹ್ನ 12ರವರೆಗೆ ಕಲಾಪ ಮುಂದೂಡಲಾಯಿತು.
ಅಮೃತ ಕಾಲದಲ್ಲಿ ವಿಶ್ವಕ್ಕೆ ಮಾರ್ಗದರ್ಶನ
ಸ್ವಾತಂತ್ರ್ಯದ ಅಮೃತ ಮಹೋತ್ಸವವು ಕೇವಲ ದೇಶದ ಬೆಳವಣೆಗೆ ಮತ್ತು ಭವ್ಯ ಇತಿಹಾಸಕ್ಕೆ ಸೀಮಿತವಾಗಿಲ್ಲ. ಅಮೃತ ಕಾಲದ ಮೂಲಕ ಭಾರತ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಹೇಳಿದರು. ಮೇಲ್ಮನೆಯ ಸಭಾಧ್ಯಕ್ಷರಾಗಿ ಮೊದಲ ದಿನ ಕಾರ್ಯನಿರ್ವಹಿಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ವಾರದ ಹಿಂದೆಯಷ್ಟೆ ಭಾರತ ಜಿ-20 ಕೂಟ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಈ ಮೂಲಕ ದೇಶವು ಜಾಗತಿಕವಾಗಿ ಅಮೃತ ಕಾಲದ ಪಯಣವನ್ನು ಆರಂಭಿಸಿದೆ. ಈ ಅವಧಿಯಲ್ಲಿ ಪ್ರಜಾಪ್ರಭುತ್ವ, ಸಂಸತ್, ಸಂಸದೀಯ ಪರಂಪರೆಗಳು ಮಹತ್ವದ ಪಾತ್ರ ವಹಿಸಲಿವೆ ಎಂದರು. ಧನಕರ್ ಅವರಲ್ಲಿ ಸೈನಿಕ ಮತ್ತು ರೈತನ ಗುಣಗಳಿವೆ. ಇವೆರಡೂ ಗುಣಗಳಿರುವವರನ್ನು ಈ ಸದನ ಸಭಾಧ್ಯಕ್ಷರನ್ನಾಗಿ ಪಡೆದಿದರುವುದು ಅದೃಷ್ಟ ಎಂದು ಹೇಳಿದರು. ಧನಕರ್ ರೈತರ ಮಗ ಮತ್ತು ಅವರು ಕಲಿತಿದ್ದು ಸೈನಿಕ ಶಾಲೆಯಲ್ಲಿ ಇದನ್ನು ಗಮನಿಸಿ ಪ್ರಧಾನಿ ಈ ಮಾತನಾಡಿದರು. ಧನಕರ್ ಅವರ ಮಾರ್ಗದರ್ಶನದಲ್ಲಿ ಎಲ್ಲ ಸದಸ್ಯರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಮತ್ತು ದೇಶದ ಸಂಕಲ್ಪ ಮತ್ತು ಕನಸುಗಳು ಸಾಕಾರವಾಗಲು ಸದನ ಪರಿಣಾಮಕಾರಿ ವೇದಿಕೆ ಆಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಎಸ್​ಎಸ್​ಸಿ ಪರೀಕ್ಷೆ ಕೇವಲ ಹಿಂದಿಯಲ್ಲೇ ನಡೆಸೋಲ್ಲ
ಸಿಬ್ಬಂದಿ ನೇಮಕಾತಿ ಆಯೋಗ (ಎಸ್​ಎಸ್​ಸಿ) ಪರೀಕ್ಷೆ ಹಿಂದಿಯಲ್ಲಿ ಮಾತ್ರ ನಡೆಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ರಾಜ್ಯಸಭೆಗೆ ತಿಳಿಸಿದರು. ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಹಿಂದಿ ಕಡ್ಡಾಯ ಮಾಡುವ ಉದ್ದೇಶವೂ ಇಲ್ಲ. ಎನ್​ಇಪಿಯಲ್ಲಿ ಮಾತೃಭಾಷೆಗೆ ಹೆಚ್ಚು ಪ್ರಾಧಾನ್ಯ ನೀಡಲಾಗಿದೆ ಎಂದರು.
ಸರ್ಕಾರದ ಲಿಖಿತ ಉತ್ತರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
